भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567897576Next >

ಕಂಕಣ

ಮದುವೆಯಲ್ಲಿ ವಧೂವರರಿಗೆ ಕೈಗೆ ಕಟ್ಟುವ ಅರಿಸಿನ ದಾರ.

ಕಂಕಳು

ಬಗಲು.

ಕಂಕ್ಳು

ಕಂಕಳು.

ಕಂಗಾಲು

ಗಾಬರಿ,ಹೆದರಿಕೆ,ದಿಕ್ಕೆಟ್ಟ ಸ್ಥಿತಿ.

ಕಂಗೆಡು

ಗಾಬರಿಯಾಗು, ದಿಕ್ಕುತಪ್ಪು.

ಕಂಚಿಕಾಯಿ

ಹೇರಳೆಕಾಯಿ, ಉಪ್ಪಿನಕಾಯಿ ಹಾಕುವ ಒಂದು ಹುಳಿಕಾಯಿ.

ಕಂಚಿನಗಿಂಡಿ

ಕಂಚಿನಿಂದ ಮಾಡಿದ ನೀರು ಕುಡಿಯುವ ಲೋಟ.

ಕಂಚು

ತಾಮ್ರವೂ ತವರವೂ ಸೇರಿ ಆದ ಮಿಶ್ರಲೋಹ.

ಕಂಚು ಎಡಗದು

ಮದುಮಗಳು ಗಂಡನ ಮನೆಯ ಹೊಸಿಲು ದಾಟುವಾಗ ಮಾಡುವ ಶಾಸ್ತ್ರ

ಕಂಚುಗಾರ

ತಾಮ್ರ, ಹಿತ್ತಾಳೆಯ ಕೆಲಸಗಳನ್ನು ಮಾಡುವವರು.

ಕಂಟ

ಪಾತ್ರೆಗಳ ಮೇಲಂಚು/ಬಾಯಿ/ಕೊರಳು.

ಕಂಟಕ

ವಿಘ್ನ, ತೊಂದರೆ.

ಕಂಟ್ಗಿ

ಒಂದೆಳೆಸರ.

ಕಂಡ

ಖಂಡ. ತುಂಡು, ಮೂಳೆಯಿಲ್ಲದ ಮಾಂಸ.

ಕಂಡದೆ

ಕಾಣಿಸದೆ.

ಕಂಡ್ ಕಂಡಲ್ಲಿ

ಸಿಕ್ಕ ಸಿಕ್ಕಿದಲ್ಲಿ, ನೋಡಿದಲ್ಲೆಲ್ಲಾ.

ಕಂಡಮಟ್ಟಿಗೆ

ಹೊರನೋಟಕ್ಕೆ ಕಂಡಂತೆ.

ಕಂಡಾಪಟ್ಟೆ

ಸಿಕ್ಕಾಪಟ್ಟೆ. ಬಹಳಷ್ಟು.

ಕಂಡ್ರಾ

ನೋಡಿದಿರಾ, ಕಂಡಿರಾ.

ಕಂಡಿ

ಕಿಂಡಿ, ರಂದ್ರ.
< previous1234567897576Next >

Search Dictionaries

Loading Results

Follow Us :   
  Download Bharatavani App
  Bharatavani Windows App