भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Kannada-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

ಕೊರ್ಕೆ

(ನಾ)
ಬಟ್ಟಲದಂತಹ ಮಣ್ಣಿನ ಪಾತ್ರೆ.

ಕೊಡ

(ನಾ)
ಹೊಳೆ, ಹಳ್ಳ, ಬಾವಿಯಿಂದ ನೀರು ತರುವ ಕುಂಭ. ಕೆಲ ಭಾಗಗಳಲ್ಲಿ ಕೊಡ ಎತ್ತುವ ಸ್ಪರ್ಧೆ ಇದೆ. ಶಿವಮೊಗ್ಗಾಜಿಲ್ಲೆಯಲ್ಲಿ ಜೂಜಿನ ಕೊಡದ ಸ್ಪರ್ಧೆ ನಡೆಸುವರು. ಎಣ್ಣೆ, ತುಪ್ಪ ಮುಂತಾದವುಗಳನ್ನು ತುಂಬಿಡಲು ಕೊಡವನ್ನು ಬಳಸುತ್ತಿದ್ದರು. ಎಣ್ಣೆಯನ್ನು ಅಳೆಯುವ ಪ್ರಮಾಣವಾಗಿ ಕೂಡ ಬಳಕೆಯಲ್ಲಿತ್ತೆಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖವಿದೆ.
‘ಕೊಡವಾಲ ಕೆಡಿಸುವೊಡಾಮ್ಲ ವೆನಿತಾಗಬೇಕು’ (ರಾಘವಾಂಕ)
‘ಹುಳಿಹಿಂಡಿ ಕೊಡ ಹಾಲು ಬೀದಿಪಾಲ್ಮಾಡದಿರು’ (ಕೆ. ಸಿ. ಶಿವಪ್ಪ)
ತುಂಬಿದ ಕೊಡ ತುಳುಕುವುದಿಲ್ಲ.| (ಗಾದೆ)
ಧನಿಮನಿಗೆ ದೌಲತ್ತ ಬಂದ್ರ ತೊತ್ತಿಗೆ ಮೂರ ಕೊಡಜಾಸ್ತಿ (ಗಾದೆ)

ಕೊಡತಿ

(ನಾ)
ಮಣ್ಣಿನ ಗಟ್ಟಿ ಹೆಂಟೆಯನ್ನು ಒಡೆಯುವ ಕೊಡತಿ, ಸುತ್ತಿಗೆ

ಕೊಣಮಿಗೆ

(ನಾ)
ರೊಟ್ಟಿ ಮಾಡುವ ಮಣ್ಣಿನ ಪರಾತ, ಬಡವರು ಇದನ್ನು ಹೆಚ್ಚಾಗಿ ಬಳಸುವರು.

ಕೊಪ್ಪರಿಗೆ

(ನಾ)
ಅಗಲ ಬಾಯಿಯ ದೊಡ್ಡ ಪಾತ್ರೆ. ಹಿಂದಿನ ಕಾಲದಲ್ಲಿ ಮದುವೆ ಸಮಾರಂಭಗಳಲ್ಲಿ ಹುಗ್ಗಿ, ಅನ್ನ, ಸಾರು ಮಾಡಲು ಬಳಸುತ್ತಿದ ಮಣ್ಣಿನ ಪಾತ್ರೆ.

ಕೊಮ್ಮೆ

(ನಾ)
ಧಾನ್ಯ ಸಂಗ್ರಹಿಸಿಡುವ ಕುಡಾಣ, ವಾಡೆ 1-2 ಮೀಟರ್ ಎತ್ತರವಿರುವುದು. ತಳದಲ್ಲಿ ಹಲ್ತಿ ಇದ್ದು, ನಡು ಡುಮ್ಮ, ಇದ್ದು, ಕಂಠದಲ್ಲಿ ಮತ್ತು ಹಲ್ತಿ ಇರುವುದು.
ಎಮ್ಮೆ ಹಾಲು ಚೆಂದ ಕೊಮ್ಮೆ ರಾಗಿ ಚೆಂದ (ಗಾದೆ)
ನಿಮ್ಮನೆ ಎಮ್ಮೆ ಇದ್ದರೆ ನಮ್ಮನೇ ಕೊಮ್ಮೆ ಇದೆ (ಗಾದೆ)

ಕೊರೆ

(ಕ್ರಿ)
ತಿಗುರಿಯ ಮೇಲೆ ಗೇಯ್ದ ಟೊಳ್ಳಾದ ಲಳಿಗೆಯನ್ನು ಕವಳಿದಾರದಿಂದ ಬೇರ್ಪಡಿಸುವುದು.

ಕೊರೆದಾರ

(ನಾ)
ಕವಳಿ ದಾರ – ನೋಡಿ

ಕೊಳಗ

(ನಾ)
ಹಿಂದಿನಕಾಲದಲ್ಲಿ ಧಾನ್ಯಗಳನ್ನು ಅಳೆಯಲು ಬಳಸುತ್ತಿದ ಮಣ್ಣಿನ ಅಳತೆ
1. ಪ್ರಮಾಣ – 4 ಮಾನ = 1 ಬಳ್ಳ: 4 ಬಳ್ಳ = 1 ಕೊಳಗ
‘ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ ಕೊಳಗ ಬಳಲದು’ (ಬಸವಣ್ಣ)
‘ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು’ (ಅಲ್ಲಮ)

ಕೊಳೆಮುಚ್ಚು

(ಕ್ರಿ)
ಗಡಿಗೆ ತಳದಲ್ಲಿನ ತೆರೆದಭಾಗವನ್ನು ಸೊಳದಿಂದ ತಟ್ಟುವ ಕ್ರಿಯೆ. ಗಡಿಗೆ ಕುಂಡಿ ಮುಚ್ಚುವುದು.

ಕೋವ

(ನಾ)
ಕೋವರ, ಕುಂಬಾರ
ಕೋವರ ಚಕ್ರಂ ತಿರಿವ ತೆರದೆ ತಿರಿದೆತ್ತೆನಸುಂ (ರನ್ನ)

ಕೋಳಿಫಾರ್ಮಗಡಿಗೆ

(ನಾ)
ಕೋಳಿ ಫಾರ್ಮಗಳಲ್ಲಿ ಕೋಳಿಗಳಿಗೆ ಕಾವು ಕೊಡಲು ಬಳಸುವ ಮಡಿಕೆ ಈ ಗಡಿಗೆಗಳ ಸೊಂಟದ ಭಾಗದಲ್ಲಿ ಸುತ್ತಲೂ ಎರಡು ಸಾಲು ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ, ಅದರಲ್ಲಿ ಬೆಂಕಿಕೆಂಡಗಳನ್ನು ಹಾಕಿ ಫಾರ್ಮಗಳಲ್ಲಿ ಇಡುವರು.

ಕೌಳಿ

(ನಾ)
ತಿಗುರಿಯಿಂದ ಮಡಕೆಗೇಯುವಾಗ ಹಾಗೂ ಕುಂಬಾರಗಿತ್ತಿಯರು ಕೈಗಡಿಗೆ ತೀಡುವಾಗ ಬಟ್ಟೆಯಿಂದ ಆಕೃತಿಯನ್ನು ತೀಡುವ ಸಂದರ್ಭದಲ್ಲಿ ಬರುವ ಅತಿ ತೆಳುವಾದ ಮಣ್ಣು. ನೋಡಿ-ಕವಳಿಗಡಿಗೆ

ಖಣಿಕುಳ್ಳಿ

(ನಾ)
ಖಣಿಗಡಿಗೆ ಕುದರೆಲದ್ದಿ ಮಿಶ್ರಣ ಮಾಡದೆ ತಯಾರಿಸುವ ಮಡಕೆ

ಖಪ್ಪುರ

(ನಾ)
ಒಡೆದ ಮಡಕೆ ಚೂರು, ಬೋಕಿ, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಖಫರೋಳಿಗೆ

(ನಾ)
ಮನೆಮಾಳಿಗೆ ಹಂಚು, ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಖಾಸದಾನ

(ನಾ)
ಪಾನಪಟ್ಟಿ ಇಡುವ ಮಣ್ಣಿನ ಪಾತ್ರೆ ಬೇಸಿಗೆ, ಕಾಲದಲ್ಲಿ ಎಲೆಗಳು ಬಾಡದಂತೆ ಇಡಲು ಅಂದವಾಗಿ ತಯಾರಿಸಿದ ಪಾತ್ರೆ. ಲಖೌನದ ಖಾಸ ದಾನಗಳು ತುಂಬಾ ಪ್ರಸಿದ್ಧವಾಗಿವೆ.

ಖುದಬಾಡ

(ನಾ)
ಸೊಳಗಳಲ್ಲಿ ಒಂದು ವಿಧ. ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಗಗರಿ

(ನಾ)
ಮಣ್ಣಿನ ಕೊಡ, ಹಿಂದಿ ಶಬ್ದ.

ಗಟಗಡ್ಲೆ

(ನಾ)
ದೀಪ ಹಚ್ಚಲು ಬಳಸುವ ಮಣ್ಣಿನ ಪಾತ್ರೆ, ಪಣತಿ.

Search Dictionaries

Loading Results

Follow Us :   
  Download Bharatavani App
  Bharatavani Windows App