भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

< previous123456789174175Next >

e’en

ನಾಮವಾಚಕ

= 1even.

e’en

ಕ್ರಿಯಾವಿಶೇಷಣ

= 3even.

e’er

ಕ್ರಿಯಾವಿಶೇಷಣ

(ಕಾವ್ಯಪ್ರಯೋಗ) = ever.

E, e

ನಾಮವಾಚಕ

  • ಇಂಗ್ಲಿಷ್‍ ವರ್ಣಮಾಲೆಯ ಐದನೆಯ ಅಕ್ಷರ.
  • (ಸಂಗೀತ) ಸ್ವರಾಷ್ಟಕದ ಮೂರನೆಯ ಸ್ವರ (‘ಗ’, ಗಾಂಧಾರ).
  • (ಲಾಯ್ಡ್‍ ಕಂಪನಿ ದಾಖಲೆ ಪುಸ್ತಕಗಳಲ್ಲಿ) ಎರಡನೆಯ ತರಗತಿಯ ಹಡಗು.
  • ಸ್ವಾಭಾವಿಕ ಲಾಗರಿತಮ್‍ನಲ್ಲಿ ಉಪಯೋಗವಾಗುವ ಆಧಾರ ಪರಿಮಾಣ, ಸುಮಾರು 2.7183

e-

ಪೂರ್ವಪ್ರತ್ಯಯ

c, f, h, p, q, s, t ಗಳನ್ನು ಬಿಟ್ಟು ಉಳಿದ ವ್ಯಂಜನಗಳ ಹಿಂದೆ ಮತ್ತು ‘ರಹಿತ’ ಎಂಬರ್ಥದ ಗುಣವಾಚಕಗಳಲ್ಲಿ (ಉದಾಹರಣೆಗೆ ecaudate ಬಾಲರಹಿತ) 1ex- ಎಂಬ ಪೂರ್ವಪ್ರತ್ಯಯದ ರೂಪ.

E-boat

ನಾಮವಾಚಕ

  • E ದೋಣಿ; ಶತ್ರುವಿನ ಅತಿವೇಗದ ಟಾರ್ಪೆಡೊ ಮೋಟಾರ್‍ ದೋಣಿ.
  • (ಚರಿತ್ರೆ) 1939–45ರ ಯುದ್ಧದಲ್ಲಿ ಬಳಸಿದ ಟಾರ್ಪೆಡೊ ದೋಣಿ.

E-layer

ನಾಮವಾಚಕ

ಈ-ಸ್ತರ; ದೀರ್ಘ ರೇಡಿಯೋ ತರಂಗಗಳನ್ನು ಪ್ರತಿಫಲಿಸುವ ಅಯಾನುಗೋಳದ ಸ್ತರ.

E.

ಸಂಕ್ಷಿಪ್ತ

  • east(ern).
  • EgyptianE).
  • Engineering (M. I. Mech. E. ಮೊದಲಾದವು).

E. & O.E.

ಸಂಕ್ಷಿಪ್ತ

errors and omissions excepted.

e.g.

ಸಂಕ್ಷಿಪ್ತ

for example (Latin exempli gratia).

e.m.u.

ಸಂಕ್ಷಿಪ್ತ

electromagnetic unit(s).

e.p.

ಸಂಕ್ಷಿಪ್ತ

(ಚದುರಂಗ) en passant.

e.s.u.

ಸಂಕ್ಷಿಪ್ತ

electrostatic unit(s).

ea.

ಸಂಕ್ಷಿಪ್ತ.

each.

each

ಗುಣವಾಚಕ

ಪದಗುಚ್ಛ

(ಎರಡು ಯಾ ಹೆಚ್ಚಿನವುಗಳ ನಡುವೆ ಬಿಡಿಬಿಡಿಯಾಗಿ ಪರಿಗಣಿಸಿದ) ಪ್ರತಿ; ಪ್ರತಿಯೊಂದರ; ಪ್ರತಿಯೊಬ್ಬನ(ಳ); ಒಂದೊಂದರ; ಒಬ್ಬೊಬ್ಬನ(ಳ): each man has two votes ಪ್ರತಿಯೊಬ್ಬನಿಗೂ ಎರಡು ಓಟುಗಳಿವೆ. we have two votes each ನಮ್ಮಲ್ಲಿ ಪ್ರತಿಯೊಬ್ಬನಿಗೂ ಎರಡು ಓಟುಗಳಿವೆ. each is worse than the one before ಪ್ರತಿಯೊಂದೂ ಅದರ ಹಿಂದಿನದಕ್ಕಿಂತ ಕೆಟ್ಟದಾಗಿದೆ. each and every ಒಂದೊಂದೂ; ಪ್ರತಿಯೊಂದೂ.

each

ಸರ್ವನಾಮ

ಪದಗುಚ್ಛ

ಪ್ರತಿಯೊಂದೂ; ಪ್ರತಿಯೊಬ್ಬನೂ(ಳೂ); ಒಂದೊಂದೂ; ಒಬ್ಬೊಬ್ಬನೂ(ಳೂ): the sides of two triangles are equal each to each ಎರಡು ತ್ರಿಕೋಣಗಳ ಜವಾಬಾಗಿರುವ ಭುಜಗಳು ಒಂದಕ್ಕೊಂದು ಸಮವಾಗಿವೆ.

  • each other ಪರಸ್ಪರರ; ಒಂದು ಇನ್ನೊಂದನ್ನು; ಒಬ್ಬ ಇನ್ನೊಬ್ಬನನ್ನು ಯಾ ಒಬ್ಬಳು ಇನ್ನೊಬ್ಬಳನ್ನು: they hate each other ಅವರು ಪರಸ್ಪರ ದ್ವೇಷಿಸುತ್ತಾರೆ; ಪ್ರತಿಯೊಬ್ಬನೂ ಉಳಿದವರನ್ನು ದ್ವೇಷಿಸುತ್ತಾನೆ. they wore each other’s hats ಅವರು ಪರಸ್ಪರ ಟೋಪಿಗಳನ್ನು ಹಾಕಿಕೊಂಡರು; ಅವರಲ್ಲಿ ಒಬ್ಬೊಬ್ಬನೂ ಇನ್ನೊಬ್ಬನ ಟೋಪಿಯನ್ನು ಹಾಕಿಕೊಂಡ.
  • each way (ಬ್ರಿಟಿಷ್‍ ಪ್ರಯೋಗ) (ಪಣದ ವಿಷಯದಲ್ಲಿ) ಕುದುರೆ ಗೆಲ್ಲುವುದಾಗಿ ಮತ್ತು ಮೊದಲ (ಬ್ರಿಟಿಷ್‍ ಪ್ರಯೋಗ) ಮೂರು ಯಾ (ಅಮೆರಿಕನ್‍ ಪ್ರಯೋಗ) ಎರಡು ಸ್ಥಾನಗಳಲ್ಲಿ ಬರುವುದೆಂದು ಬಾಜಿ ಕಟ್ಟುವುದು.

eager

ಗುಣವಾಚಕ

  • ಕಟ್ಟಾಸೆಯುಳ್ಳ; ತೀವ್ರ ಅಭಿಲಾಷೆಯ; ಅತ್ಯಾಸಕ್ತಿಯ; ಕಡು ಹಂಬಲದ.
  • ತವಕಿಸುವ; ಆತುರವುಳ್ಳ; ಉತ್ಸಾಹಿ; ಉತ್ಸುಕ; ಕುತೂಹಲದಿಂದ ಕೂಡಿದ.
  • (ಭಾವಾವೇಶಗಳ ವಿಷಯದಲ್ಲಿ) ಕಡು; ಬಲು; ತೀವ್ರ; ತೀಕ್ಷ್ಣ; ಗಾಢ; ಪ್ರಬಲ; ಉತ್ಕಟ.
  • (ಪ್ರಾಚೀನ ಪ್ರಯೋಗ) (ಗಾಳಿಯ ವಿಷಯದಲ್ಲಿ) ಕೊರೆಯುವ; ಚಳಿಯಾದ; ಶೈತ್ಯದ.

eager beaver

ನಾಮವಾಚಕ

(ಆಡುಮಾತು) ಅತಿ ಅಸೂಯೆಯ ಮನುಷ್ಯ; ತುಂಬಾ ಹೊಟ್ಟೆಕಿಚ್ಚಿನ ವ್ಯಕ್ತಿ.

eagerly

ಕ್ರಿಯಾವಿಶೇಷಣ

  • ಕಟ್ಟಾಸೆಯಿಂದ; ತೀವ್ರ ಅಭಿಲಾಷೆಯಿಂದ.
  • ತವಕದಿಂದ; ಆತುರದಿಂದ; ಉತ್ಸಾಹದಿಂದ.
  • ತೀಕ್ಷ್ಣವಾಗಿ; ಗಾಢವಾಗಿ; ತೀವ್ರವಾಗಿ; ಉತ್ಕಟವಾಗಿ.

eagerness

ನಾಮವಾಚಕ

  • ಕಟ್ಟಾಸೆ; ತೀವ್ರ ಅಭಿಲಾಷೆ; ಅತ್ಯಾಸಕ್ತಿ.
  • ತವಕ; ಅತುರ; ಅತ್ಯುತ್ಸಾಹ; ಅತ್ಯುತ್ಸುಕತೆ.
  • ತೀಕ್ಷ್ಣತೆ; ಗಾಢತೆ; ತೀವ್ರತೆ; ಉತ್ಕಟತೆ.
< previous123456789174175Next >

Search Dictionaries

Loading Results

Follow Us :   
  Download Bharatavani App
  Bharatavani Windows App