भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345Next >

ಏಂ

[ಅ] ಏನು ಕಾರಣ, ಏಕೆ (ಇಱಿವಂತು ನಿನಗೆ ಮನದೊಳ್ ತಱಿಸಲವುಂಟಪ್ಪೊಡೆ ಎಲವೊ ದೇವೇಶನಂ ಏಂ ಸೆಱೆವಿಡಿದೆ: ಪಂಪಭಾ, ೧೦. ೧೨೧)

ಏ ಕಜ್ಜಂ

ಆಗಬೇಕಾದುದೇನು, ಏನು ಉಪಯೋಗ? (ರವಿರಶ್ಮಿಗಳ್ ಪುಗಲೆವೇಡ ಈ ರಶ್ಮಿಗಳ್ ಸಾಲ್ಗುಂ ಇಂತೇ ಕಜ್ಜಂ ಬೆಳಗು: ಆದಿಪು, ೬. ೧೦೪)

ಏ ಕಾರಣಂ

[ಸ] ಯಾವ ಕಾರಣದಿಂದ (ನಗೆಗಣ್ ಸೋರ್ವ ಕದುಷ್ಣವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂಕೆಗಳಿಂ ನಾಡೆ ಬೆಡಂಗುಗೆಟ್ಟ ಇರವು ಇದಿಂತೇಕಾರಣಂ: ಪಂಪಭಾ, ೪. ೬೮)

ಏಂ ಗಳ

ಏನಪ್ಪಾ! ಹಾಗಲ್ಲವೇ (ಪಸಿವನಾಮೇಗೊಂಡು ಏಂ ಗಳ ಗೆಯ್ವೆವು: ಆದಿಪು, ೭. ೭೩)

ಏಂ ಪಿರಿದೋ

ಏನು ದೊಡ್ಡದೋ! (ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨)

ಏಕಕಾರ್ಯಾಳೋಚನಪರ

[ನಾ] ಒಂದೇ ಕಾರ್ಯದ ಬಗ್ಗೆ ಆಸಕ್ತರಾದ[ವರು] (ಎಂದು ತಮ್ಮೊಳ್ ಅಯ್ವರುಂ ಏಕಕಾರ್ಯಾಳೋಚನಪರರಾಗಿ ದ್ವೈತವನದೊಳ್ ಅದ್ವೈತಸಾಹಸರಿರ್ಪನ್ನೆಗಂ: ಪಂಪಭಾ, ೭. ೩೦ ವ)

ಏಕಗ್ರಾಹಿ

[ನಾ] ಒಂದೇ ಪಟ್ಟು ಹಿಡಿದವನು. ಹಟಮಾರಿ (ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒಱಂಟಂಗಂ ರಥಮಂ ಎಸಗೆಂ ಎಂದು ವರೂಥದಿಂದ ಇೞಿದು ಪೋಗೆ: ಪಂಪಭಾ, ೧೨. ೨೦೫ ವ)

ಏಕಚ್ಛತ್ರಚ್ಛಾಯೆ

[ನಾ] ಒಂದೇ ಕೊಡೆಯ ನೆರಳು, ಒಬ್ಬ ರಾಜನ ಆಳ್ವಿಕೆ (ಅಂತು ಭರತಂ ಭರತಮಂಡಲಮಂ ಏಕಛತ್ರಚ್ಛಾಯೆಯಿಂದಂ ಪ್ರತಿಪಾಲಿಸುತ್ತಮಿರೆಯಿರೆ: ಆದಿಪು, ೫. ೪ ವ)

ಏಕತ್ವ

[ನಾ] ಷೋಡಶಭಾವನೆಗಳಲ್ಲಿ ಒಂದು (ಮಮತ್ವಮಂ ಬಿಸುಟು ನೀನೇಕತ್ವಮಂ ಭವ್ಯ ಭಾವಿಸು ನಿನ್ನೀ ತನುವಂ ತಪೋವನವನಕ್ರೀಡಾಸುಖಕ್ಕೊಡ್ಡು: ಆದಿಪು, ೨. ೪೭)

ಏಕತ್ವವಿತರ್ಕವಿಚಾರ

[ನಾ] [ಜೈನ] ಎರಡನೆಯ ಶುಕ್ಲಧ್ಯಾನ, ಮೋಹಕರ್ಮಸಹಿತವಾಗಿ ಜ್ಞಾನಾವರಣೀಯ, ದರ್ಶನಾವರಣೀಯ ಮತ್ತು ಅಂತರಾಯ ಎಂಬ ಮೂರು ಕರ್ಮಗಳ ನಾಶವಾಗಿ ಕೇವಲಜ್ಞಾನಪ್ರಾಪ್ತಿಗೆ ಎಡೆಮಾಡಿಕೊಡುವಂಥದು (ವೀತರಾಗದ್ವೇಷಭಾವನಾಭಾವಿತ ಯಥಾಖ್ಯಾನಚಾರಿತ್ರಕ್ಷೀಣ ಕಷಾಯ ವೀತರಾಗಚ್ಛದ್ಮ ಗುಣಸ್ಥಾನಂ ಏಕತ್ವವಿತರ್ಕವಿಚಾರಾಭಿಧಾನಧ್ಯಾನಪರಿಣತಂ: ಆದಿಪು, ೧೦. ೧೪ ವ)

ಏಕದಂಡಿ

[ನಾ] ಶಿಖೆ ಮತ್ತು ಯಜ್ಞೋಪವೀತಗಳನ್ನು ತ್ಯಜಿಸಿ ಒಂದು ದಂಡವನ್ನು ಮಾತ್ರ ಹಿಡಿದ ಸನ್ಯಾಸಿ (ಏಕದಂಡಿ ತ್ರಿದಂಡಿಗಳಪ್ಪ ಪರಿವ್ರಾಜಕರುಂ ಆಗಿ ತಮಗೆ ತಾವೇ ವನಪ್ರವೇಶಮಂ ಮಾಡಿ: ಆದಿಪು, ೯. ೯೩ ವ)

ಏಕಪಾದ

[ನಾ] ಒಂಟಿ ಕಾಲಲ್ಲಿ ನಿಂತು ಮಾಡುವ ತಪಸ್ಸು (ತೊಡರ್ದು ಏಕಪಾದದೊಳ್ ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮಕ್ರಮಂಗಳಂ ಸಲಿಸಿದರಿಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ: ಪಂಪಭಾ, ೧. ೧೩೬)

ಏಕಪಾದತಪ

[ನಾ] ಒಂಟಿಕಾಲಲ್ಲಿ ನಿಂತು ಮಾಡುವ ತಪಸ್ಸು (ಏಕಪಾದತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನಂ ಅಹಿಭೂಷಣನ ಅಂಬಂ ಬೇಡಿ ಅಟ್ಟಿದೊಡೆ: ಪಂಪಭಾ, ೮. ೧೬ ವ)

ಏಕವರ್ಣ

[ನಾ] ಒಂದೇ ಬಣ್ಣ ಅಥವಾ ವರ್ಣ (ಜಗಜ್ಜನಕನೊಟ್ಟಿದ ಪೊನ್ನ ರಾಶಿಗಳಂ ಜಗಜ್ಜನಕಿತ್ತು ತತ್ಕನಕವರ್ಣದಿಂ ಏಕವರ್ಣಮೆ ಮಾಡಿದಂ ಜಗಮೆಲ್ಲಮಂ: ಆದಿಪು, ೮. ೬೫)

ಏಕವಿಂಶತಿ

[ನಾ] ಇಪ್ಪತ್ತೊಂದು (ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಂ ಏಕವಿಂಶತಿ ಪರಿಸಂಖ್ಯೆಯಿಂ ತವಿಸಿ: ಪಂಪಭಾ, ೨. ೪೫)

ಏಕವಿಹಾರಿ

[ನಾ] [ಜೈನ] ಒಂಟಿಯಾಗಿ ಸಂಚರಿಸುವುದು (ಪನ್ನೆರಡು ತಪದೊಳ್ ನೆಱೆದಿರ್ಪತ್ತೆರಡು ಪರೀಷಹಂಗಳಂ ಗೆಲ್ದು ಗಣಧರಗಣಮಂ ಬಿಟ್ಟು ಏಕವಿಹಾರಿಯಾಗಿ: ಆದಿಪು, ೬. ೩೩ ವ)

ಏಕವೃತ್ತಿ

[ನಾ] ಏಕಪ್ರಾಕಾರ, ಒಂದು ಸುತ್ತಿನ ಪ್ರಾಕಾರ (ಅವಱ ಬಳಸಿಯುಂ ಯಥೋಚಿತಪ್ರದೇಶಂಗಳೊಳ್ ಏಕವೃತ್ತಿ ಪರಿವೃತಂಗಳುಂ: ಆದಿಪು, ೮. ೬೩ ವ)

ಏಕಸ್ಥ

[ಗು] ಒಟ್ಟಾಗಿ, ಒಂದಾಗಿ (ಪನ್ನೆರಡು ಮಾಸದೊಳಾದ ದಿಗ್ವಿಜಯಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮಮಿತ್ರತ್ವಮುಂ ಅಱಿದು: ಪಂಪಭಾ, ೫. ೨೩ ವ)

ಏಕಾಂತ

[ನಾ] ಸ್ಯ, ಗುಟ್ಟು (ಎಂದು ಚಿಂತಾಕ್ರಾಂತೆಯಾಗಿದ್ದ ಕುಂತಿಯಂ ಕಂಡು ಪಾಂಡುರಾಜಂ ಏಕಾಂತದೊಳಿಂತೆಂದಂ: ಪಂಪಭಾ, ೧. ೧೧೭ ವ)

ಏಕಾದಶನಿಳಯ

[ನಾ] ಶ್ರಾವಕರ ಹನ್ನೊಂದು ನೆಲೆಗಳು: ಸಮ್ಯಗ್ದರ್ಶನ, ಅಣುವ್ರತ, ಸಮತ್ವೀಭಾವ, ಪ್ರೋಷಧೋಪವಾಸ, ಹಸಿಯ ಹಣ್ಣು ಹೂ ಮುಂತಾದವನ್ನು ಸ್ವೀಕರಿಸದಿರುವುದು [ಸಚಿತ್ತವಸ್ತುತ್ಯಾಗ], ಹಗಲು ಸ್ತ್ರೀಸಂಗವರ್ಜನೆ, ಬ್ರಹ್ಮಚರ್ಯ, ಆರಂಭತ್ಯಾಗ, ಪರಿಗ್ರಹತ್ಯಾಗ, ಅನುಮತಿತ್ಯಾಗ ಮತ್ತು ಉದಯತ್ಯಾಗ [ಉದ್ದಿಷ್ಟತ್ಯಾಗ] (ಭೂಭುವನದೊಳಂ ಪರೆದ ಏಕಾದಶನಿಳಯಂ ಅರಸಂ ಅನುಕ್ರಮದಿನಿನಿತುಮಂ ಕೈಕೊಂಡಂ: ಆದಿಪು, ೬. ೧೧)
< previous12345Next >

Search Dictionaries

Loading Results

Follow Us :   
  Download Bharatavani App
  Bharatavani Windows App