भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891314Next >

ಜಕ್ಕ

[ನಾ] ಯಕ್ಷ (ಕುಬೇರನಿಂ ಕಪ್ಪಂಗೊಂಡು ಪೊನ್ನಂ ಜಕ್ಕರೆಕ್ಕೆಯಿಂ ಪೊತ್ತು ಬರೆ: ಪಂಪಭಾ, ೬. ೩೨ ವ)

ಜಕ್ಕರೆಕ್ಕೆ

[ನಾ] [ಜಕ್ಕರ್+ಎಕ್ಕೆ} ಯಕ್ಷರು ಒಟ್ಟಾಗಿ (ಕೈಳಾಸದ ಮೇಗಣ್ಗೆ ವಂದು ಕುಬೇರನಿಂ ಕಪ್ಪಂಗೊಂಡು ಜಕ್ಕರ್ ಎಕ್ಕೆಯಿಂ ಪೊತ್ತು ಬರೆ: ಪಂಪಭಾ, ೬. ೪೨ ವ)

ಜಕ್ಕವಕ್ಕಿ

[ನಾ] ಚಕ್ರವಾಕ ಪಕ್ಷಿ (ಬನಮಂ ಕೋಗಿಲೆ ಜಕ್ಕವಕ್ಕಿ ಪಗಲಂ ಪೂಗೊಂಚಲಂ ತುಂಬಿ ಚಂದ್ರನನಂಭೋನಿಧಿ: ಆದಿಪು, ೧೨. ೩೧)

ಜಗ

[ನಾ] ಜಗತ್ತು (ಜಗಮಂ ಮಾಡಿದ ಪದ್ಮಜಂ ಪಡೆದನಿಲ್ಲೀ ಕನ್ನೆಯಂ ಮಾಡುವಲ್ಲಿಗೆ .. .. ಅಂಗಜನೆಂಬಜಂ ಪಡೆದನಂತಾ ಕಾಂತೆಗೀ ಕಾಂತಿಯಂ: ಪಂಪಭಾ, ೪. ೭೫)

ಜಗತೀತಳ

[ನಾ] ಜಗಲಿ (ಷೋಡಶಸೋಪಾನೋಪಶೋಭಿತ ಜಗತೀತಳಮಧ್ಯದೊಳ್ ಅನುಕ್ರಮದೊಳ್ ಎಂಟು ನಾಲ್ಕುನಾಲ್ಕುಂ ಬಿಲ್ನಿಡಿಯವಾಗಿ: ಆದಿಪು, ೧೦. ೨೩ ವ)

ಜಗತೀತ್ರಯ

[ನಾ] ಮೂರು ಲೋಕಗಳು (ಬಸಿಱೊಳ್ ಜಗತೀತ್ರಯಮಂ ಒಸೆದಿಟ್ಟು ಓರಂತೆ ಕಾದ ಪೆಂಪಿನ ನಿಮ್ಮೀ ಬಸಿಱಂ ಪೊಕ್ಕ ಅಯ್ವರಂ ಅಸುರಕುಳಾಂತಕ ಕಡಂಗಿ ಕಾವುದು ಪಿರಿದೇ: ಪಂಪಭಾ, ೯. ೧೬)

ಜಗತೀರಾಜ್ಯ

[ನಾ] ಭೂರಾಜ್ಯ, ಐಹಿಕರಾಜ್ಯ (ನೆಗೞ್ದ ತಪೋರಾಜ್ಯದ ಬಗೆ ಮಿಗೆ ನಿಂದಂ ವೃಷಭನಾಥಂ ಅತ್ತೊಂದೆಡೆಯೊಳ್ ಜಗತೀರಾಜ್ಯದ ಬಗೆ ಕೈಮಿಗೆ ನಿಂದಂ ಭರತರಾಜನಿತ್ತೊಂದೆಡೆಯೊಳ್: ಆದಿಪು, ೯. ೬೭)

ಜಗತೀಸಂತತಿ

[ನಾ] ಜಗತ್ತಿನ ಸಂತತಿ (ಗೃಹಸ್ಥಧರ್ಮದಿಂದಂ ನೀನೆಂತಂತೆ ಸಲೆ ನೆಗೞೆ ಜಗತೀಸಂತತಿ ನಿಲೆ ನಿನ್ನ ಧರ್ಮಸಂತತಿ ನಿಲ್ಕುಂ: ಆದಿಪು, ೮. ೧೩)

ಜಗತ್ತ್ರಯ

[ನಾ] ಮೂರು ಲೋಕಗಳು: ಸ್ವರ್ಗ, ಮರ್ತ್ಯ, ಪಾತಾಳ (ಸಿಂಹಾಸನಮಸ್ತಕದೊಳಿರ್ದ ಜಗತ್ತ್ರಿತಯತಿಳಕನ ಪಾದಪದ್ಮಂಗಳ್ಗೆ .. .. ವಿಹಿತೋಪಹಾರನಾಗಿ: ಆದಿಪು, ೧೩. ೮೩ ವ)

ಜಗತ್ತ್ರಯಗುರು

[ನಾ] [ಜೈನ] ಮೂರುಲೋಕಗಳ ಗುರು, ಆದಿದೇವ (ಎಱಗಿ ಜಗತ್ತ್ರಯಗುರುಗೆರ್ದೆಯೆಱಕದೆ ಪೊಗೞ್ದು ಅಖಿಳ ಭುವನಜನನಿಯನಾಗಳ್ ಮಱೆಯಿಸಿ ಮಾಯಾನಿದ್ರೆಯಿಂ: ಆದಿಪು, ೭. ೪೫)

ಜಗತ್ತ್ರಿತಯ

[ನಾ] ಜಗತ್ತ್ರಯ (ಜಗತ್ತ್ರಿತಯಂಗಳೊಳ್ ಜಸಕ್ಕೆ ಆಗರಮಾದ ಬದ್ದೆಗನಿಂ ಆ ನರಸಿಂಹನಿಂ ಅತ್ತಲ್ ನಾಲ್ವೆರಲ್ ಮೇಗು ಪೊದಳ್ದ ಚಾಗದೊಳಂ ಒಂದಿದ ಬೀರದೊಳಂ ಗುಣಾರ್ಣವಂ: ಪಂಪಭಾ, ೧. ೫೦)

ಜಗತ್ಪ್ರಕಟ

[ನಾ] ಜಗತ್ತಿನಲ್ಲಿ ಪ್ರಸಿದ್ಧವಾದ (ಶಕವರ್ಷಮೆಂಟುನೂಱಕ್ಕೆ ಕಡೆಯೊಳಱುವತ್ತಮೂಱು ಸಂದಂದು ಜಗತ್ಪ್ರಕಟ ಪ್ಲವಸಂವತ್ಸರದ ಕಾರ್ತಿಕಂ ಮುದಮನೀಯೆ : ಆದಿಪು, ೧೬. ೭೭)

ಜಗತ್ಪ್ರತೀತ

[ನಾ] ಜಗತ್ಪ್ರಸಿದ್ಧ (ಲಲಿತವಾಗ್ವಿಳಾಸಮೆ ದಲ್ ಅಲಂಕೃತಿಯವೊಲೆಸೆದಪುದು ಜಗತ್ಪ್ರತೀತನೀತನೆ ಸರಸ್ವತೀಮಣಿಹಾರಂ: ಆದಿಪು, ೧. ೨೮)

ಜಗತ್ಪ್ರಥಿತ

[ನಾ] ಲೋಕಪ್ರಸಿದ್ಧವಾದ (ಪರರಥಿನೀಜಳನಿಧಿಯ ಪಾರಮಂ ಸಲ್ವ ಜಗತ್ಪ್ರಥಿತ ಭುಜದರ್ಪದಿಂದತಿರಥಮಥನಂ ಕರ್ಣಧಾರನಲ್ಲನೆ ಕರ್ಣಂ: ಪಂಪಭಾ, ೧೨. ೫೦)

ಜಗತ್ಸ್ವಾಮಿ

[ನಾ] ಜಗತ್ತಿಗೆ ಒಡೆಯನಾದವನು, ಆದಿಜಿನ (ಶ್ರೀ ದೇವೇಂದ್ರಮುನೀಂದ್ರವಂದಿತಗುಣವ್ರಾತಂ ಜಗತ್ಸ್ವಾಮಿ ಸಂದ ಆದಿಬ್ರಹ್ಮಂ ಅಗಾಧಬೋಧನಿಳಯಂ: ಆದಿಪು, ೧. ೧)

ಜಗದೇಕಮಲ್ಲ

[ನಾ] ಲೋಕಕ್ಕೆ ಒಬ್ಬನೇ ಜಟ್ಟಿ (ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಿಸಿಕೊಂಡು ಕುಂಭಸಂಭವಂ ಗಾಂಗೇಯನಂ ಇಂತೆಂದಂ: ಪಂಪಭಾ, ೨. ೫೪ ವ)

ಜಗದ್ಗುರು

[ನಾ] [ಜೈನ] ಆದಿ ತೀರ್ಥಂಕರ (ತ್ರಿದಶಾಸನಂಗಳ್ ಅಲ್ಲಾಡಿದುವು ಜಗದ್ಗುರುಗೆ ಬೇಗಂ ಉಚ್ಚಾಸನದಿಂದಿರೇೞಿಂ ಎಂದು ಪೇೞ್ವವೊಲ್: ಆದಿಪು, ೭. ೪೧)

ಜಗನ

[ನಾ] [ಜಘನ] ಸೊಂಟ (ಈ ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದು ಈ ಬಗೆಯೋಲ್ ಅಲಕ್ತಕದ್ರವದೊಳೊಂದದೆ ನಿಂದುವು ಪಾದಪಂಕಜಂ: ಪಂಪಭಾ, ೪. ೬೨)

ಜಗನ್ಮಂಗಳ

[ನಾ] [ಜಗತ್+ಮಂಗಳ] ಲೋಕಕ್ಕೇ ಮಂಗಳಕಾರಿಯಾದ (ಅಂತು ಚಾಗಂಗೆಯ್ದು ಜಗನ್ಮಂಗಳಗಂಗಾವಾರಿಯೊಳ್ ಅನಿವಾರಿತಪರಾಕ್ರಮಂ ಅಘಮರ್ಷಣಪೂರ್ವಕಂ ಮಿಂದು: ಪಂಪಭಾ, ೯. ೭೨ ವ)

ಜಂಗಮ

[ಗು] ನಡೆದಾಡುವ (ಬಲದೇವಂ ದುರ್ಯೋಧನಂಗಾಯು ಬರ್ಪಂತೆ ಪೆಗಲೊಳ್ ಹಲಾಯುಧಮನಿಟ್ಟುಕೊಂಡು ಜಂಗಮಪರ್ವತಮೆ ಬರ್ಪಂತೆ ಬಂದು: ಪಂಪಭಾ, ೧೩. ೮೮ ವ)
< previous1234567891314Next >

Search Dictionaries

Loading Results

Follow Us :   
  Download Bharatavani App
  Bharatavani Windows App