भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಆನೆ

ಗಜ, ಕರಿ, ಬಹುದೊಡ್ಢ ಆಕಾರದ ಕಾಡುಪ್ರಾಣಿ

ಆನೆಕಾಲು

ಕಾಲು ಊದಿಕೊಂಡು ದಪ್ಪಗಾಗುವ ಒಂದು ರೋಗ, ಸೊಳ್ಳೆಯಿಂದ ಬರುವ ರೋಗ

ಆನೆಕಾಲು

ಆನೆಯ ಕಾಲುಗಳು

ಆಪತ್ತು

ವಿಪತ್ತು, ಕಷ್ಟ, ತೊಂದರೆ

ಆಪೆ

ಅಕ್ಕಿಯಿಂದ ಮಾಡಿದ ತಿಂಡಿ

ಆಪೆಕಾವ್ಲಿ

ಆಪೆ ಮಾಡುವ ಸಾಧನ

ಆಂಬ್ರದ ಗಿಡ

ಹಿಪ್ಪುನೇರಳೆ.

ಆಂಬ್ರದ ಹಣ್ಣು

ಹಿಪ್ಪುನೇರಳೆಯ ಹಣ್ಣು.

ಆಂಭಾವ

ಅಹಂಭಾವ, ಅಹಂಕಾರ.

ಆಮ

ಕರುಳಿನ ಸೋಂಕಿನಿಂದಾಗುವ ಬೇಧಿ, ದ್ರವರೂಪದ ಲೋಳೆಯಾದ ಮಲ

ಆಮಶಂಕೆ

ಆಮ ರಕ್ತದಿಂದ ಕೂಡಿದ ಭೇದಿ.

ಆಮೆ

ಕೂರ್ಮ, ಒಂದು ಜಲಚರ, ಬೆನ್ನ ಮೇಲೆ ದೊಡ್ಡ ಚಿಪ್ಪಿನ ಕವಚವಿರುವ ಜರಚರ

ಆಮೇಲಾಮೇಲೆ

ತದನಂತರ, ಬರುಬರುತ್ತ

ಆಮೇಲೆ

ಆನಂತರ, ತರುವಾಯ

ಆಯ

ಗುರಿ, ಹೆಜ್ಜೆ

ಆಯ

ಯಜಮಾನನ ನಕ್ಷತ್ರಕ್ಕೆ ತಕ್ಕಂತೆ ನಿರ್ದಿಷ್ಟ ಅಳತೆಯ ಮನೆಯ ವಾಸ್ತು

ಆಯಕಟ್ಟು

ಸುಭದ್ರವಾದ ರಚನೆ /ಜಾಗ

ಆಯತಪ್ಪು

ಗುರಿತಪ್ಪು, ಸಮತೋಲನ ತಪ್ಪು

ಆಯದ ಬಾಗಿಲು

ಒಂದೇ ಮರದಿಂದ ನಿಗಧಿತ ಅಳತೆಯಲ್ಲಿ ಮಾಡಿದ ಜಗಲಿಯಿಂದ ನಡುಮನೆಗೆ ದಾಟುವ ಬಾಗಿಲು, ಆಯ ನೋಡಿ ಇಟ್ಟ ಬಾಗಿಲು.

ಆಯಸ್ಸು

ಜೀವಿತದ ಅವಧಿ, ಬದುಕುವ ಕಾಲ

Search Dictionaries

Loading Results

Follow Us :   
  Download Bharatavani App
  Bharatavani Windows App