भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಆಯಾರ

ಬಲಿ

ಆಯು

ಆರಿಸಿಕೊಳ್ಳು, ಹೆಕ್ಕು

ಆಯ್ಕಟ್ಟು

ಅತ್ಯುತ್ತಮವಾದುದನ್ನೇ ಬಯಸುವುದು, ಅತಿಯಾದ ಮಡಿವಂತಿಕೆ

ಆಯ್ಕೊಣದು

ಆಯ್ದುಕೊಳ್ಳು, ಆರಿಸಿಕೊಳ್ಳುವುದು.

ಆರಕ್ಕಾಕು

ಆರಲು ಹಾಕು, ಒಣಗಲು ಹಾಕು

ಆರತಿ

ದೀಪ ಹತ್ತಿಸಿಕೊಂಡು ದೇವರು /ಮದು ಮಕ್ಕಳಿಗೆ ಬೆಳಗುವುದು, ದೀಪಾರತಿ

ಆರತಿ ಬೆಳಗು

ದೀಪದಿಂದ ಬೆಳಗುವ ಆಚರಣೆ

ಆರಯಿಸು

ಗೌರವಿಸು, ಆಧರಿಸು

ಆರಾರು

ಆರಕ್ಕೆ ಇನ್ನೂ ಆರು ಆರು ಕೂಡಿಸುವುದು.

ಆರಿಸು

ನಂದಿಸು, ಕೆಡಿಸು

ಆರಿಸು

ಆಯು, ಸಂಗ್ರಹಿಸು

ಆರು

ನಂದಿಹೋಗು

ಆರು

ಶಮನವಾಗು, ತಣ್ಣಗಾಗು, ಒಣಗು

ಆರು

ಆರನೇ ಸಂಖ್ಯೆ

ಆರು ಕಟ್ಟುವುದು

ಸಕ್ಕುದಾರ ಕಟ್ಟುವುದು, ಉಳುಮೆಯ ಮೊದಲ ದಿನ

ಆರುಸು

ಆರಿಸು

ಆರ್ನೂರು

ಆರು ಮತ್ತು ನೂರರ ಗುಣಾಕಾರ

ಆರ್ಭಟ

ಅಬ್ಬರ, ಕೂಗಾಟ, ಚೀರಾಟ

ಆರ್ಲು

ನಕ್ಷತ್ರ, ತಾರೆ

ಆಲ

ವ್ಯಗ್ರೋಧ, ವಟವೃಕ್ಷ, ದೊಡ್ಡಮರ

Search Dictionaries

Loading Results

Follow Us :   
  Download Bharatavani App
  Bharatavani Windows App