भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಿಂದಿ

ಹರಕು ಬಟ್ಟೆ, ತುಂಡುಬಟ್ಟೆ.

ಚಿನಿವಾರ

ಅಕ್ಕಸಾಲಿಗ, ಚಿನ್ನದ ಆಭರಣ ಮಾಡುವವನು.

ಚಿನ್ನ

ಹೊನ್ನು, ಬಂಗಾರ,

ಚಿನ್ನ

ಪ್ರೀತಿಯ, ಮುದ್ದಿನ.

ಚಿನ್ನೆ

ಚಿನ್ಹೆ, ಗುರುತು, ಲಕ್ಷಣ.

ಚಿಂಪಿಗ

ಬಟ್ಟೆ ಹೊಲಿಯುವವನು.

ಚಿಪ್ಪಂದಿ

ಚಿಪ್ಪಿನ ಹಂದಿ, ಮೈಮೇಲೆ ಗಟ್ಟಿಯಾದ ಮೀನು ಹೊರಜಲಿನಂತೆ ಚಿಪ್ಪುಗಳಿರುವ ಹಂದಿಯಂತಹ ಪ್ರಾಣಿ. ಕೀಟಾಹಾರಿ, ನೆಲದ ಗುದ್ದುಗಳಲ್ಲಿ ವಾಸಿಸುತ್ತದೆ. ಅಪಾಯ ಬಂದಾಗ ಅದರ ತಲೆ ಮುಖವನ್ನು ಎದುರು ಕಾಲಿನ ಸಂದಿಯಲ್ಲಿ ತೂರಿಸಿ ಇಡೀ ದೇಹವನ್ನು ಚೆಂಡಿನಂತೆ ಮಾಡಿಕೊಳ್ಳುತ್ತದೆ. ಇಡೀ ದಿನವೆಲ್ಲಾ ಉರುಳಾಡಿಸಿದರೂ ಅದರ ಮೂತಿಯನ್ನಂತೂ ಹೊರತೆಗೆಯುವುದಿಲ್ಲ. ಮೈಗೆ ಗುಂಡೂ ತಗಲುವುದಿಲ್ಲ.

ಚಿಪ್ಪಿಗ

ದರ್ಜಿ, ಬಟ್ಟೆ ಹೊಲಿಯುವವನು.

ಚಿಪ್ಪು

ತಲೆಬುರುಡೆ,

ಚಿಪ್ಪು

ಬಾಳೆಗೊನೆಯ ಒಂದು ಗೊಂಚಲು,

ಚಿಪ್ಪು

ಗರಟ,

ಚಿಪ್ಪು

ಮರದ ಸೌಟು.

ಚಿಪ್ಪೆತ್ತು

ಬಾಳೆಗೊನೆಯ ಹಂತಗಳನ್ನು ತೆಗೆ.

ಚಿಬ್ಬು

ಒಂದು ಚರ್ಮರೋಗ, ಬಿಳಿಮಚ್ಚೆ.

ಚಿಬ್ಬೆ

ಒದ್ದೆ ಬಟ್ಟೆಯಲ್ಲಿ ಬೆಳೆಯುವ ಕಪ್ಪು ಪಾಚಿ.

ಚಿಬ್ಲ

ಸಿಬ್ಲು, ಅನ್ನದ ಗಂಜಿ ಬಸಿಯಲು ಬಳಸುವ ಬಿದಿರಿನ ಸಣ್ಣ ತಟ್ಟೆ/ ಬೀಳಿನ ತಟ್ಟೆ.

ಚಿಮಟ

ಇಕ್ಕಳ, ಬಿಸಿ ಪಾತ್ರೆಗಳನ್ನು ಹಿಡಿದುಕೊಳ್ಳುನ ಹಿಡಿಕೆ.

ಚಿಮಟಗಿ

ಚಿಮಟ.

ಚಿಮಣಿ

ಹೊಗೆಗೂಡು, ಹೊಗೆ ಹೊರ-ಹೋಗಲು ಇಟ್ಟಿರುವ ಕೊಳವೆ.

ಚಿಮುಕಿಸು

ಸಿಂಪಡಿಸು, ಹನಿಹನಿಯಾಗಿ ಎರಚು, ತಳಿ.

Search Dictionaries

Loading Results

Follow Us :   
  Download Bharatavani App
  Bharatavani Windows App