भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚುಳುಕಿ

ಹಲಸಿನ ಸೋಳೆಯ ಜೊತೆಯಲ್ಲಿರುವ ನಾರುಗಳು.

ಚುಳುಕಿ ಹಾಕುವುದು

ಹಲಸಿನ ಕಾಯಿ ಬಲಿತಿದೆಯೇ ಎಂದು ಗಾಯಗೊಳಿಸಿ/ತೂತುಮಾಡಿ ನೋಡುವುದು.

ಚುಳ್ಳಳ್ಬಿ

ಹುಲ್ಲಿನಲ್ಲಿ ಏಳುವ ಅಳಬಿ, ಹುಲ್ಲು ಅಣಬೆ, ಮಳೆಗಾಲದಲ್ಲಿ ಹುಲ್ಲು ಬೆಳೆದಿರುವ ಜಾಗದ ಅಳಬಿ.

ಚೂಟಿ

ಚುರುಕುತನ, ಜಾಣ್ಮೆ.

ಚೂಟು

ಜಿಗುಟು. ಹಿಂಡು, ಚಿವುಟು, ಚಿಗುಟು, ಚಿವ್ಟು.

ಚೂಪ

ಹರಿತ, ಮೊನಚು.

ಚೂಪಮೂಗು

ನೇರ, ಉದ್ದಮೂಗು.

ಚೂಪು

ಚೂಪ.

ಚೂಪುಗಾರ್ಕಿ

ಚಾಲಾಕುತನ, ಬೂಟಾಟಿಕೆ,

ಚೂಪುಮಾಡು

ಹರಿತಗೊಳಿಸು, ಮೊನೆಮಾಡು.

ಚೂಬಿಡು

ಎತ್ತಿಕಟ್ಟು.

ಚೂರಿ

ಚಾಕು, ಸಣ್ಣಕತ್ತಿ.

ಚೂರು

ತುಸು, ಸ್ವಲ್ಪ, ಕೊಂಚ

ಚೂರು

ತುಂಡು, ಹೋಳು, ಭಾಗ.

ಚೂರುಪಾರು

ಅಲ್ಲಸ್ವಲ್ಪ, ಅಳಿದುಳಿದದ್ದು.

ಚೆಕ್ಕು

ಕೆನ್ನೆ, ಕದಪು.

ಚೆಕ್ಕುಬಂದಿ

ಜಮೀನಿನ ಸರಹದ್ದನ್ನು ದಾಖಲಿಸುವುದು.

ಚೆಂಗನೆ

ಚಂಗನೆ, ನೆಗೆ, ಕುಪ್ಪಳಿಸು.

ಚೆಂಗೂಲಿ

ದಿನಗೂಲಿ, ಕೈಗೂಲಿ, ಖಾಯಮ್ಮಾಗಿ ಕೆಲಸಕ್ಕೆ ಬರದೆ ಬೇಕಾದಲ್ಲಿಗೆ ಕೆಲಸಕ್ಕೆ ಹೋಗುವುದು.

ಚೆಟಗಿ

ಮಣ್ಣಿನ ಕುಡಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App