भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚೆಟ್ಟಕ್ಕಿ

ಹುರುಳಿಲ್ಲದ, ಕಪ್ಪಾದ ಅಕ್ಕಿ, ಸಾರವಿಲ್ಲದ ಅಕ್ಕಿ.

ಚೆಟ್ಟತ್ತ

ಕಾಳಿಲ್ಲದ ಬತ್ತ, ಹೊಟ್ಟು.

ಚೆಂಡಾಳಿ

ಕೆಟ್ಟವಳು, ದುಷ್ಟೆ.

ಚೆಂಡಿ

ಹಸಿ, ವದ್ದೆ, ತಮಡಿ

ಚೆಂಡಿ

ಹಠಮಾರಿತನವುಳ್ಳವಳು.

ಚೆಂಡಿನಗಿಡ

ಸಣ್ಣಹಸಿರುಗಿಡ, ಸಣ್ಣ ಬಿಳಿಯ ಚೆಂಡಿನಂತಹ ಗಟ್ಟಿ ಹೂವು. ಈ ಹೂವನ್ನು ಪೆಟ್ಲಿಗೆ ಹಾಕಿ ಹೊಡೆಯುತ್ತಿದ್ದರು.

ಚೆಂಡು

ಗುಂಡಗಿರುವ ಆಟದ ವಸ್ತು.

ಚೆಂಡು ಹೂ

ಗೊಂಡೆ ಹೂ.

ಚೆಂಡೆ

ಚಂಡೆ, ಮದ್ದಲೆ.

ಚೆಂದು

ಚಂದ.

ಚೆನ್ನಮರ

ಹಾಲುವಾಣದ ಮರ.

ಚೆನ್ನು

ಚೆಲುವು, ಸೊಗಸು.

ಚೆನ್ನೆಬೀಜ

ಚೆನ್ನೆಕಾಳು, ಹಾಲುವಾಣದ ಬೀಜ.

ಚೆಪ್ಪು

ಹರಿದ ಬಟ್ಟೆ, ಚಿಂದಿ.

ಚೆಪ್ಪುಕೊನೆ

ಕಾಯಿಕಡಿಮೆಯಿರುವ ಅಡಿಕೆ ಕೊನೆ.

ಚೆಂಬು

ತಂಬಿಗೆ, ಚಂಬು.

ಚೆರಿಗೆ

ದೊಡ್ಡ ಬಾಯಿಯ ಕೊಡ, ದೊಡ್ಡ ತಂಬಿಗೆ.

ಚೆರು

ದೇವರಿಗೆ/ ದೈವಕ್ಕಿಡುವ ನೈವೇದ್ಯದ ಅನ್ನ.

ಚೆಲು

ಚೆಲುವ, ಅಂದ, ಚಂದ.

ಚೆಲುವ

ಸುಂದರ, ಸ್ಪುರದ್ರೂಪಿ.

Search Dictionaries

Loading Results

Follow Us :   
  Download Bharatavani App
  Bharatavani Windows App