भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಕ್ಕೊಂಬು

ಏಡಿಯ ಕಾಲಿನ ಸಣ್ಣ ಕೊಂಬುಗಳು, ಚಕ್ ಬೊಳ್ಳು, ಚಿಕ್ಕ ಬೆರಳು.

ಚಕ್ಕೋತ

ಕಿತ್ತಳೆ ಜಾತಿಯ, ಮೂಸುಂಬಿಯಂತಹ ದೊಡ್ಡ ಹಣ್ಣು.

ಚಕ್ರ

ಗಾಲಿ, ವಿಷ್ಣುವಿನ ಕೈಯ ಆಯುಧ.

ಚಕ್ರದ ಪಟ್ಟೆ

ಗಾಡಿಯ ಗುಂಬ ಸವೆಯದಿರಲೆಂದು ಹಾಕುವ ಕಬ್ಬಿಣದ ಬಳೆ.

ಚಕ್ರಬಡ್ಡಿ

ಬಡ್ಡಿಯ ಮೇಲಿನ ಬಡ್ಡಿ.

ಚಕ್ರಮುನಿ

ಒಂದು ಬಗೆಯ ಔಷಧಿಯ ಸೊಪ್ಪು, ತರಕಾರಿಯಾಗಿಯೂ ಬಳಕೆ.

ಚಕ್ರಮೊಗ್ಗು

ಒಂದು ಮಸಾಲೆ ಪದಾರ್ಥ, ಪರಿಮಳಯುಕ್ತ.

ಚಕ್ಲು ಬಕ್ಲು

ಚಕ್ಕಳಮಟ್ಟೆ.

ಚಕ್ಳ

ಚಕ್ಕಳ.

ಚಗಟೆ

ಒಂದು ಬಗೆಯ ಸೊಪ್ಪು, ತರಕಾರಿಯಾಗಿ ಬಳಕೆ.

ಚಂಗನೆ

ಪಕ್ಕನೆ, ಇದ್ದಕ್ಕಿದ್ದಂತೆ, ತಕ್ಷಣ.

ಚಗಳಿ

ಗಿಡಮರಗಳ ಮೇಲೆ ಗೂಡು ಕಟ್ಟುವ ಕೆಂಜಿರುವೆ.

ಚಗಳಿ ಚಟ್ನಿ

ಮೊರಕ್ಕೆ ಉಪ್ಪು ಹಾಕಿ ಕೆಂಜಿರುವೆ (ಚಗಳಿ) ಗೂಡನ್ನು ಅದರ ಮೇಲೆ ಹಾಕಿ ಇರುವೆಗಳನ್ನು ಸಾಯಿಸಿ, ಉಪ್ಪು ಖಾರ ಹಾಕಿ ಮಾಡಿದ ಚಟ್ನಿ.

ಚಗಳಿಕೊಟ್ಟೆ

ಚಗಳಿಯ ಗೂಡು.

ಚಂಗು

ಹಾರು, ನೆಗೆ.

ಚಂಗೂಲಿ

ದಿನಗೂಲಿ, ದಿನಗೂಲಿ ಆಳು.

ಚಂಚಕಾರ

ಸಂಚಕಾರ, ಕೊಟ್ಟಿದ್ದನ್ನು ವಾಪಸು ಕೊಡದಿರುವುದು.

ಚಂಚಲ

ಚಲಿಸುವ, ಚಪಲ ಸ್ವಭಾವದ, ಅಚಲವಲ್ಲದ.

ಚಚ್ಚು

ಹೊಡೆ, ಬಡಿ, ಕುಟ್ಟು.

ಚಜ್ಜ

ಕಿಟಕಿ ಬಾಗಿಲುಗಳಿಂದ ಹೊರಚಾಚಿಕೊಂಡಿರುವ ಛಾವಣಿ.

Search Dictionaries

Loading Results

Follow Us :   
  Download Bharatavani App
  Bharatavani Windows App