भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಟ

ಗೀಳು, ತೆವಲು, ತೀವ್ರಾಸಕ್ತಿ, ಚಾಳಿ.

ಚಟಗಿ

ಮಣ್ಣಿನ ಕುಡಿಕೆ (ಎಣ್ಣೆಚಟಗಿ, ಕಾಪಿ ಚಟಗಿ).

ಚಟಗುಟ್ಟು

ಚಟಚಟ ಎಂದು ಶಬ್ಧವಾಗು.

ಚಟಾಕು

ಒಂದು ಅಳತೆ, ಒಂದು ಪಾವಿನ ಕಾಲುಭಾಗ.

ಚಟ್ಟ

ಹೆಣ ಹೊರಲು ಉಪಯೋಗಿಸುವ ಬಿದಿರಿನ ಏಣಿಯಂತಹ ಹಾಸಿಗೆ, ಸಿದಿಗೆ.

ಚಟ್ಟಕ್ಕಿ

ಸಾರವಿಲ್ಲದ ಅಕ್ಕಿ.

ಚಟ್ಟು

ಹುರುಳಿಲ್ಲದ್ದು, ಬರಿಯ ಸಿಪ್ಪೆ.

ಚಟ್ನಿ

ನಂಚಿಕೊಳ್ಳುವ ವ್ಯಂಜನ/ಪದಾರ್ಥ.

ಚಟ್ಬತ್ತ

ಅಕ್ಕಿಯಿಲ್ಲದ ಬತ್ತ.

ಚಡಪಡ್ಸು

ಚಡಪಡಿಸು, ಒದ್ದಾಡು.

ಚಡಾವು

ಮರದ ಪಾದರಕ್ಷೆ, ಚಪ್ಪಲಿ, ಮೆಟ್ಟು

ಚಂಡಾಳ

ಚಾಳಿಗೆಟ್ಟವನು, ಅವಿವೇಕಿ, ಕ್ರೂರಿ.

ಚಂಡಿ

ಹಟಮಾರಿ, ಮೊಂಡಿ, ಹಟಮಾರಿ ಹೆಣ್ಣು.

ಚಡಿ

ತೆಳ್ಳಗೆ ನೀಳವಾದ ಕೋಲು, ಬೆತ್ತ

ಚಡಿ

ತೆಣೆ, ಕಿರುಜಗಲಿ

ಚಡಿ

ಪದರ.

ಚಂಡಿಹಿಡಿ

ಹಟಮಾಡು, ಮೊಂಡುತನಮಾಡು.

ಚಂಡು

ಸಿಂಬೆ, ಮುದ್ದೆಮಾಡಿದ ಬಟ್ಟೆ.

ಚಂಡೆ

ಕೋಲಿನಿಂದ ಬಾರಿಸುವ ಚರ್ಮವಾದ್ಯ, ಯಕ್ಷಗಾನದಲ್ಲಿ ಬಳಸುತ್ತಾರೆ.

ಚಡ್ಡಿ

ಮಂಡಿಯತನಕದ ಉಡುಗೆ, ಅರೆ ಚಲ್ಲಣ.

Search Dictionaries

Loading Results

Follow Us :   
  Download Bharatavani App
  Bharatavani Windows App