भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಪ್ಪನ್ ಚೂರು

ಚೂರುಚೂರು, ಚಿಂದಿ-ಚಿಂದಿ.

ಚಪ್ಪರ

ಹಂದರ, ಛಾವಣಿ, ಮೇಲಿನ ಚೌಕಟ್ಟು.

ಚಪ್ಪರದ ಹಣ

ಪಾಲು ಮುಖಂಡರು (ಹಳ್ಳಿ ಮುಖಂಡರು) ಅವರವರ ಗ್ರಾಮದಲ್ಲಿ ಎಲ್ಲಿ ಮದುವೆ ನಡೆದರೂ ಅಲ್ಲಿಗೆ ಹೋಗಿ ವಸೂಲಿ ಮಾಡುತ್ತಿದ್ದ ನಾಲ್ಕು ರೂಪಾಯಿಗಳು.

ಚಪ್ಪರಿಸು

ಸಶಬ್ಧವಾಗಿ ಸವಿ, ತಿನ್ನು, ಚೀಪು.

ಚಪ್ಪಾಳೆ

ಕರತಾಡನ, ಕೈತಟ್ಟುವಿಕೆ.

ಚಪ್ಪು

ಹರಿದ, ಚೂರಾದ.

ಚಪ್ಪು ಚಪ್ಪು

ಚೂರು ಚೂರಾದ.

ಚಪ್ಪೆ

ಸಪ್ಪೆ, ಉಪ್ಪಿಲ್ಲದಿರುವುದು, ರುಚಿಯಿಲ್ಲದಿರುವುದು.

ಚಪ್ಪೆ ನೀರು

ಆವಿಯಿಂದ ಪದಾರ್ಥ ಬೇಯಿಸಿದ ನಂತರ ಅಡಿಯಲ್ಲಿ ಉಳಿದ ನೀರು.

ಚಪ್ಪೆಚಾಳು

ಉಪ್ಪನ್ನು ಹಾಕಿಲ್ಲವೆಂದು ಹೇಳುವುದು. ಉಪ್ಪಿಲ್ಲದಿರುವ ಅಡಿಗೆ.

ಚಪ್ಪೆದಾರ

ಹಸಿನೂಲು.

ಚಪ್ರ

ಚಪ್ಪರ.

ಚಂಬು

ಚಂಬ್ಗಿ.

ಚಂಬ್ಗಿ

ತಂಬಿಗೆ, ಒಂದು ಪಾತ್ರೆ.

ಚಮಕು

ಹೊಳಪು, ಹೊಳೆತ.

ಚಮಚ

ಕಿರುಸೌಟು,

ಚಮಚ

ಚೇಲ, ಬಾಲಬಡುಕ.(ಅಲಂ)

ಚಮ್ಡ

ಚರ್ಮ, ತೊಗಲು, ಚಮಡ.

ಚಮ್ಮಟಿಕೆ

ವಸ್ತುಗಳನ್ನು ಹಿಡಿದುಕೊಳ್ಳಲು ಬಳಸುವ ಇಕ್ಕಳ

ಚಮ್ಮಟಿಕೆ

ಕಮ್ಮಾರನ ದೊಡ್ಡ ಸುತ್ತಿಗೆ.

Search Dictionaries

Loading Results

Follow Us :   
  Download Bharatavani App
  Bharatavani Windows App