भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ನೀರಟ್ಟೆ ಬೇರು

ನೀರುವಾಟೆ ಮರದ ಬೇರು ನಿಂಬೆರಸದೊಂದಿಗೆ ತೇದು ನೆಕ್ಕಿದರೆ ಬೇದಿ ಶಮನ.

ನೀರಲ್ಲಿ ಹೋಮ

ನಿಷ್ಪಲ, ನಿಷ್ಪ್ರಯೋಜಕ (ಅಲಂ).

ನೀರಂಡೆ

ನೀರು ತುಂಬಿಸಿಡುವ ಚೋರಿಗೆ/ಪಾತ್ರೆ.

ನೀರಿನ ದೋಣಿ

ಮನೆಯ ಹೆಂಚಿನ ಮೇಲೆ ಬಿದ್ದ ಮಳೆ ನೀರು ಒಟ್ಟಾಗಿ ಕೆಳಗೆ ಸುರಿಯುವಂತೆ ಕಟ್ಟಿರುವ ವದಗೆ/ಅರ್ಧ ಚಂದ್ರಾಕೃತಿಯ ದೋಣಿ.

ನೀರಿನ ಸರವು

ನೀರಿನ ಒಡಲು, ನೀರು ಹರಿಯುವ ಸರಕಲು.

ನೀರಿಸುಬು

ಚರ್ಮದಲ್ಲಿ ವ್ರಣವಾಗಿ ನೀರು – ಕೀವು ಸುರಿಯುವ ರೋಗ.

ನೀರು

ಜಲ

ನೀರು ನಿಲ್ಲು

ಗರ್ಭಧರಿಸುವುದು, ಬಸಿರಾಗುವುದು.

ನೀರು ಮುಳ್ಕಾ

ನೀರಲ್ಲಿ ಮುಳುಗಿ ಏಳುವ ಹಕ್ಕಿ.

ನೀರು ಸಿಡಿತ

ಕೆಳಗೆ ಬಿದ್ದ ನೀರು ಬಿದ್ದ ರಭಸಕ್ಕೆ ಮತ್ತೆ ಹಾರುವುದು.

ನೀರು ಸೋಕುವುದು

ಗುಂಡಿಯಿಂದ ನೀರು ಬರಿದು ಮಾಡಿ ಅದರಲ್ಲಿರುವ ಮೀನು ಏಡಿಗಳನ್ನು ಹಿಡಿಯುವುದು.

ನೀರುಳ್ಳಿ

ಈರುಳ್ಳಿ, ಉಳ್ಳಾಗಡ್ಡೆ.

ನೀರುಳ್ಳಿಮರ

ಭಾರೀ ದೊಡ್ಡ ಸುತ್ತಳತೆಯ ನಾಟದ ಮರ, ಆದರೆ ಹೆಚ್ಚುಗಟ್ಟಿ ಬರುವುದಿಲ್ಲ.

ನೀರುಳ್ಳಿಹಾವು

ಮಳೆಗಾಲದಲ್ಲಿ ನೀರಿನಲ್ಲಿ ಹರಿದಾಡುವ ಹಾವು.

ನೀರುವಾಟೆಮರ

ದೊಡ್ಡ ಕಾಡುಮರ ಇದರ ತೆಪ್ಪೆಯ ರಸವನ್ನು ಹಲ್ಲು ಕುರಕ್ಕೆ ಮುಟ್ಟಿಸಿದ ತಕ್ಷಣವೇ ‘ಟಪ್’ ಎಂದು ಕುರು ಒಡೆಯುತ್ತದೆ.

ನೀರೂರು

ನೀರು ಸುರಿಯುವುದು, ಆಸೆಯಿಂದ ಬಾಯಲ್ಲಿ ನೀರು ಬರುವುದು.

ನೀರೆರೆಯುವುದು

ಬಾಣಂತಿ ಮತ್ತು ಮಗುವಿಗೆ ಸ್ನಾನ ಮಾಡಿಸುವುದು.

ನೀರೆರೆಯುವ ಶಾಸ್ತ್ರ

ಋತುಮತಿಯಾದವಳಿಗೆ ನೀರನ್ನು ಹಾಕುವುದು, ಹನ್ನೊಂದನೇ ದಿನದ ಶಾಸ್ತ್ರ.

ನೀವು

ನಿಮ್ಮ ಎಂದು ಹೇಳುವುದು,

ನೀವು

ನೇವರಿಸು, ಸವರು.

Search Dictionaries

Loading Results

Follow Us :   
  Download Bharatavani App
  Bharatavani Windows App