भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ನಟಿಗೆ ತೆಗಿ

ಕೈ ಬೆರಳುಗಳನ್ನು ಸಶಬ್ಧವಾಗಿ ಮಡಚಿ ಮಕ್ಕಳಿಗೆ ದೃಷ್ಟಿ ತೆಗೆಯುವ ರೀತಿ.

ನೆಟ್ಟಿ

ನಾಟಿ.

ನೆಟ್ಟಿಡು

ಭೂಮಿಗೆ ಊರಿಡು, ನೆಡು.

ನೆಡು

ನೆಟ್ಟಿಡು.

ನೆಣ

ಕೊಬ್ಬು, ಚರ್ಬಿ.

ನೆತ್ರ

ನೆತ್ತರ, ರಕ್ತ.

ನೆತ್ತಿ

ತಲೆಯ ಮೇಲ್ಭಾಗ.

ನೆತ್ತಿಗೆ ಹತ್ತು

ಆಹಾರದ ಚೂರು ಉಸಿರು ನಾಳಕ್ಕೆ ಸೇರುವುದು, ನೆತ್ತಿಗೇರು

ನೆತ್ತಿಗೆ ಹತ್ತು

ಅಮಲೇರು.

ನೆತ್ತಿ ಬಾಯಿ

ಎಳೆಯ ಮಕ್ಕಳ ನೆತ್ತಿಯಿನ್ನೂ ಕೂಡದಿದ್ದಾಗ ನೆತ್ತಿಯ ಮೇಲಿರುವ ಕುಳಿ.

ನೆತ್ತಿಬಿಡು

ನೆತ್ತಿ ಬಾಯಿ ಕೂಡದಿದ್ದಾಗ ಮಕ್ಕಳಿಗೆ ಸೀತ, ಕೆಮ್ಮು ಆಗಿ ಅಳುವಾಗ ಧ್ವನಿ ಬದಲಾಯಿಸುತ್ತದೆ, ಆಗ ನೆತ್ತಿ ಬಿಟ್ಟಿದೆ ಎಂದು ಅರ್ಥ.

ನೆತ್ನೀರು

ಹೆಣ್ಣು ಗರ್ಭಧರಿಸಿದ ಮೇಲೆ ಗರ್ಭಕೋಶದಲ್ಲಿರುವ ನೀರು.

ನೆತ್ನೀರು ಒಡೆಯುವುದು

ಹೆರಿಗೆಯ ಬೇನೆ ಕಾಣಿಸಿಕೊಳ್ಳುತ್ತಿದ್ದಂತೆ ಮಗು ಹುಟ್ಟುವ ಮೊದಲೇ ಗರ್ಭಕೋಶದ ನೀರು ಸ್ರವಿಸುವುದು.

ನೆನೆ

ತೊಯ್ಯು, ಮಳೆಯಲ್ಲಿ ನೆನೆಯುವುದು, ಒದ್ದೆಯಾಗು

ನೆನೆ

ಸ್ಮರಿಸು, ಧ್ಯಾನಿಸು.

ನೆನೆಯಕ್ಕೆ ಹಾಕು

ಬಟ್ಟೆಯನ್ನು ನೀರಲ್ಲಿ ಹಾಕಿಡು

ನೆನೆಯಕ್ಕೆ ಹಾಕು

ಅಕ್ಕಿ/ಬೇಳೆ ಕಾಳುಗಳನ್ನು ಉನಿಹಾಕು, ನೆನೆಸು.

ನೆಪ

ನೆವ, ಏನೋ ಒಂದು ಸಮರ್ಪಕವಲ್ಲದ ಕಾರಣ.

ನೆಪಳಿ

ಅನಾರೋಗ್ಯದಿಂದ ತುಂಬಾದಿನ ಹಾಸಿಗೆ ಹಿಡಿಯುವುದು.

ನೆಪ್ಪು

ನೆನಪು, ಅರಿವು.

Search Dictionaries

Loading Results

Follow Us :   
  Download Bharatavani App
  Bharatavani Windows App