Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ನೆಯ್ಯಿರ
ನಯ್ಯಿರ, ಅತಿ ಸಣ್ಣ ಇರುವೆ.
ನೆರಗಿ
ನಿರಗಿ.
ನೆರ್ಮನೆ
ಅಕ್ಕ ಪಕ್ಕದಲ್ಲಿರುವ ಮನೆಗಳು.
ನೆರೆ
ಪ್ರವಾಹ
ನೆರೆ
ಮೈ ನೆರೆಯುವುದು, ಋತುಮತಿಯಾಗುವುದು
ನೆರೆ
ಜನರ ಗುಂಪು.
ನೆರೆತ
ಬಲಿತ
ನೆರೆತ
ವಯಸ್ಸಿಗೆ ಬಂದಿರುವ.
ನೆರ್ ಹೊರೆ
ನೆರೆಹೊರೆ, ಅಕ್ಕಪಕ್ಕದ ಮನೆಯಲ್ಲಿ ವಾಸಿಸುವವರು.
ನೆಲ
ಗುಡಿಸಿ, ಸಾರಿಸಿ ಅಚ್ಚುಕಟ್ಟಾಗಿರುವ ಭೂಮಿ
ನೆಲ
ತಾಯ್ನಾಡು, ಮಾತೃಭೂಮಿ, ಭೂಮಿ,
ನೆಲಗಟ್ಟು
ಪಾಯ, ಅಡಿಪಾಯ, ಮನೆ ಕಟ್ಟಬೇಕಾಗಿರುವ/ಕಟ್ಟಿರುವ/ಕಟ್ಟಿ ಬಿದ್ದು ಹೋಗಿರುವ ಜಾಗ, ನಿವೇಶನ.
ನೆಲಗಡ್ಲೆ
ನೆಲದೊಳಗೆ ಗಿಡದ ಬೇರಿನಲ್ಲಿ ಬಿಡುವ ಒಂದು ದ್ವಿದಳ ಧಾನ್ಯ, ಕಡ್ಲೆಕಾಯಿ.
ನೆಲದ್ ಪಾಲು
ಬೇರೆಯವರಿಗೆ ಸೇರಿದ ಜಾಗದಲ್ಲಿ ಶಿಕಾರಿಯಾದ್ರೆ ಅವರಿಗೆ ಕೊಡುವ ಮಾಂಸದ ಪಾಲು.
ನೆಲನೆಲ್ಲಿ
ಸಣ್ಣ ಎಲೆಯ ಸಣ್ಣಗಿಡ, ಅಗ್ನಿಸರ್ಪಕ್ಕೆ ಔಷಧಿಯಾಗಿ ಬಳಕೆ.
ನೆಲಮಾಣ್ಗಿ
ನೆಲಮಟ್ಟಕ್ಕಿಂತ ಕೆಳಗಿರುವ ಮನೆಯ ಭಾಗ.
ನೆಲಸಮ
ಹಾಳುಮಾಡುವುದು, ನಿರ್ನಾಮ.
ನೆಲ್ಲಕ್ಕಿ
ಅಕ್ಕಿಯ ಜೊತೆ ಹೆಚ್ಚು ಬತ್ತ ಸೇರಿರುವುದು.
ನೆಲು
ನಿಲು, ಸಿಕ್ಕ, ಹಗ್ಗದಲ್ಲಿ ಜೋಳಿಗೆ ನೆಯ್ದು ನೇತುಹಾಕಿ ಅದರೊಳಗೆ ಬೆಕ್ಕಿಗೆ ಸಿಗದಂತೆ ಹಾಲು ಬೆಣ್ಣೆಗಳ ಮಡಿಕೆಗಳನ್ನಿಡುವುದು.
ನೆಲ್ಲು