Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ನೆವ
ನೆಪ.
ನೆವಳ
ಗಂಡಸರು ಸೊಂಟಕ್ಕೆ ಹಾಕುವ ಬಂಗಾರದ ಸರಪಳಿಯಂತಹ ಆಭರಣ.
ನೆಸಿ
ಮೇಲಕ್ಕೆ ನೆಗೆಯುವುದು, ನಿಂಗಳ್ಸು.
ನೆಳ
ನೊಣ, ಒಂದು ಕೀಟ.
ನೆಳಲು
ನೆರಳು, ಛಾಯೆ.
ನೆಳ್ಳು
ನೆಳಲು.
ನೇಕಾರ
ಮಗ್ಗದವ, ನೇಯ್ಗೆಯವನು.
ನೇಗ್ಲು
ನೇಗಿಲು, ಉಳುಮೆಯ ಒಂದು ಮರದ ಉಪಕರಣ.
ನೇಣು
ಅಡಿಕೆ ಗೊನೆಯನ್ನು ಮರದಿಂದ ಕೆಳಗಿಳಿಸುವ ಸುಮಾರು ಎಂಭತ್ತು ಅಡಿ ಉದ್ದದ ಹಗ್ಗ, ಕೊನ್ನೇಣು, ಕೊನೆ ಹಿಡಿಯುವ ನೇಣು.
ನೇತಾಕು
ತೂಗು ಹಾಕು.
ನೇತಾಡು
ತೂಗಾಡು, ನೇಲು.
ನೇದ್ಲೆ ಹೂ
ನೈದಿಲೆ, ಕಮಲದ ಹೂವು.
ನೇಮ
ನಿಯಮ, ಕಟ್ಟಳೆ.
ನೇಯು
ಹೆಣೆಯುವುದು, ಹೊಸೆಯುವುದು.
ನೇರ
ನೆಟ್ಟಗೆ,
ನೇರ
ಸರಳ.
ನೇಲು
ನೇತಾಡು, ತೂಗಾಡು, ಇಳಿಬೀಳು.
ನೇಸಲು
ನೇಸರ, ಸೂರ್ಯನ ಬೆಳಗಿನ ಕಿರಣ.
ನೊಗ
ಗಾಡಿ/ನೇಗಿಲನ್ನು ಎಳೆಯಲು ಎತ್ತಿನ ಹೆಗಲ ಮೇಲಿಡುವ ಮರದ ದಿಂಡು.
ನೊಗದ ಕೀಲು