Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ನೊಗ್ಲಿ
ಒಂದು ಜಾತಿಯ ಉದ್ದ ಮೀನು.
ನೊಚ್ಚಗೆ
ಹಿತವಾದ ಬೆಚ್ಚಗೆ, ಹಿತವಾದ ಬಿಸಿ.
ನೊದ್ಲೆ
ನೊರೆ, ಜಾನುವಾರುಗಳ ಬಾಯಲ್ಲಿ ಕೆಲವೊಮ್ಮೆ ಬರುವ ನೊರೆ ಮಿಶ್ರಿತ ಜೊಲ್ಲು.
ನೊಣ
ನೆಳ, ಮನೆ/ಕೊಟ್ಟಿಗೆಗಳಲ್ಲಿ ಹಾರಾಡುವ ಕೀಟ.
ನೊಣಿ
ನೆಕ್ಕು, ನಿಧಾನವಾಗಿ ತಿನ್ನು (ಅಲಂ) (ಅದೆಂಥ ನೊಣಿತಾ ಕೂತೀಯಲ್ಲ).
ನೊಣೆ
ತೀಡು, ಸವರು, ಹಚ್ಚು
ನೊಣೆ
ನಿಧಾನವಾಗಿ ತಿನ್ನು.
ನೊರೆ
ಬುರುಗು, ದ್ರವ ಪದಾರ್ಥಗಳ ಮೇಲೆ ನಿಂತಿರುವ ಬುರುಗು.
ನೊರೆ ತೊಳ್ಳೆ
ಗುಲ್ಮ.
ನೊಸ್ಲು
ಹಣೆ, ಲಲಾಟ.
ನೊಸೆಹುಲ್ಲು
ಒಂದು ಜಾತಿಯ ಹುಲ್ಲು.
ನೊಳ
ನೊಣ, ನಳ, ನ್ವಣ, ಒಂದು ಕೀಟ
ನೊಳ
ಗಟ್ಟಿಯಾದ ಕಾಡಿನ ನಾಟಾ ಮರ.
ನೊಳಗ
ನಳಿಗೆ, ನಳಗ.
ನೊಳ್ಳಿ
ಹೂಟಿಯಾದ ಮೇಲೆ ಕೆಸರು ಗದ್ದೆಯನ್ನು ಮಟ್ಟ ಮಾಡುವುದು.
ನೋಟು
ಕಾಗದದ ಹಣ.
ನೋಡು
ಕಾಣು, ನೋಟ.
ನೋಡ್ನೋಡ್ತ
ನೋಡುತ್ತಿದ್ದಂತೆ
ನ್ಯರ್ಮನೆ
ನೆರ್ಮನೆ, ನೆರೆಯಲ್ಲಿರುವ ಮನೆ.
ನ್ವಣ