Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ನತ್ತು
ಮೂಗುಬಟ್ಟು, ಮೂಗುತಿ.
ನನ್ನ
ತನ್ನನ್ನು ಉದ್ಧೇಶಿಸಿ ಹೇಳುವುದು.
ನನ್ನ ಕೈಯಿಂದ
ನನ್ನಿಂದ.
ನಮ್ನಿ
ನಮೂನೆ, ರೀತಿ.
ನಮೂನಿ
ನಮೂನೆ, ನಮ್ನಿ.
ನಯ್ಯಿರ
ಅತಿಸಣ್ಣ ಇರುವೆ.
ನರ
ದೇಹದಲ್ಲಿರುವ ತಂತುಗಳು, ಮೆದುಳಿಗೂ ದೇಹದ ಇತರ ಭಾಗಕ್ಕೂ ಸಂದೇಶ ನೀಡುವ ನರತಂತುಗಳು.
ನರಳು
ಮುಲುಗು, ನೋವಿನಿಂದ ನರಳುವುದು.
ನರಿ
ಒಂದು ಚಾಣಾಕ್ಷ ಪ್ರಾಣಿ.
ನರಿಬುದ್ಧಿ
ಉಪಾಯದಲ್ಲಿ ಮೋಸ ಮಾಡುವುದು.
ನರಿಬುದ್ಧಿ
ಉಪಾಯ/ಬುದ್ಧಿವಂತಿಕೆಯಿಂದ ಮೋಸ ಮಾಡುವವರು (ಅಲಂ)
ನರಿಗೆ
ನಿರಿಗೆ, ಸೀರೆಯ ಮಧ್ಯಭಾಗ.
ನರುಗು
ಬತ್ತವನ್ನು ಒಕ್ಕಲು ಹಾಕುವುದು, ಒಕ್ಕಲು ಮಾಡಲು ಕಣದಲ್ಲಿ ಹರಡಿರುವ ಬತ್ತದ ಮೆದೆ.
ನರ್ಕು
ನರಕು, ನರಳು.
ನರೆ
ವಯಸ್ಸಾಗು, ಮುದಿತನ.
ನರೆಕೂದ್ಲು
ಬಿಳಿಯಾಗುತ್ತಿರುವ ಕೂದಲು.
ನಲಿ
ಕುಣಿ, ಕುಣಿದಾಡು.
ನಲ್ಲಿ
ನೆಲ್ಲಿ, ಒಂದು ಹುಳಿಯಿರುವ ಕಾಯಿ
ನಲ್ಲಿ
ನೀರು ಬರುವ ನಳ.
ನಲುಗು