भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ನವಣ

ಬೆಳ್ಳಿ/ಬಂಗಾರದ ಉಡಿದಾರ, ನವಳ.

ನವ್ಲಕ್ಕಿ

ನವಿಲು, ಮಯೂರ.

ನವ್ಲೆ

ಹೇನಿನ ಮೊಟ್ಟೆಯಿಂದ ಆಗತಾನೇ ಹೊರಬಂದ ಮರಿ, ಅತಿ ಸಣ್ಣಹೇನು.

ನಷ್ಟ

ಹಾನಿ, ನಾಶ, ಕೊರತೆ.

ನಸರಿಜೇನು

ಸಣ್ಣ ಜಾತಿಯ ಜೇನು, ಕಚ್ಚುವುದಿಲ್ಲ, ಮುಖ/ಮೈಗೆಲ್ಲಾ ಮುತ್ತುತ್ತವೆ.

ನಸರಿ ತುಪ್ಪ

ಸಣ್ಣ ಜಾತಿಯ ಜೇನಿನ ತುಪ್ಪ, ಔಷಧಿಯುಕ್ತ.

ನಸೀಬು

ಹಣೆಬರಹ, ಅದೃಷ್ಟ.

ನಸುಕು

ಮುಂಜಾವು, ಬೆಳಗಿನ ಜಾವ.

ನಸುಗುನ್ನಿಕಾಯಿ

ಒಂದು ಬಳ್ಳಿ, ಅದರ ಕಾಯಿ ಒಣಗಿದರೆ ಅದರ ಮೇಲಿರುವ ಚುಂಗು (ಒಂದು ರೀತಿಯ ಮುಳ್ಳು) ಹಾರಿ ಮೈಗೆಲ್ಲಾ ಅಂಟಿಕೊಳ್ಳುತ್ತದೆ.

ನಸೆ

ನಶೆ, ಮತ್ತು, ಅಮಲು.

ನಳಗ

ನೊಳಗ, ಜಾನುವಾರುಗಳಿಗೆ ಔಷಧಿ, ಕಷಾಯವನ್ನು ಕುಡಿಸಲು ಉಪಯೋಗಿಸುವ ಸಣ್ಣ ನಳಿಕೆ/ಬಿದಿರಿನ ಕೊಳವೆ.

ನಳಿಗಿ

ನಳಗ

ನಳಿಗಿ

ಲಾಲ್ಕೆ, ಸೀಮೆಎಣ್ಣೆ ಸೇಯುವ ಸಾಧನ, ಲಾಲ್ಕಿ.

ನಳಿಗೆ

ನಳಿಕೆ, ಕೊಳವೆ.

ನ್ಯವ

ನೆವ, ನೆಪ.

ನ್ಯಪ

ನ್ಯವ.

ನಾಕರಾಗ

ನಾಲ್ಕರಲ್ಲಿ, ನಾಲ್ಕರೊಳಗೆ.

ನಾಕ್ಜನ

ನಾಲ್ಕು ಜನ, ನಾಲ್ಕು ಮಂದಿ.

ನಾಕಾಣೆ

ನಾಲ್ಕು ಆಣೆ, ನಾಲ್ಕು ಕಾಸು

ನಾಕಾಣೆ

ನಂಗೆ ಗೊತ್ತಿಲ್ಲ.

Search Dictionaries

Loading Results

Follow Us :   
  Download Bharatavani App
  Bharatavani Windows App