भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ನಾಕಾಣೆ

ನಾನು ನೋಡಿಲ್ಲ.

ನಾಕ್ನಾಕು

ನಾಲ್ಕಕ್ಕೆ ಇನ್ನು ನಾಲ್ಕು ನಾಲ್ಕು ಸೇರಿಸುತ್ತಾ ಹೋಗುವುದು.

ನಾಕ್ಹಿಡಿ

ನಾಲ್ಕು ಹಿಡಿ, ನಾಲ್ಕು ಮುಷ್ಠಿ, ನಾಲ್ಕಿಡಿ.

ನಾಕು

ನಾಲ್ಕು, ನಾಕರ ಸಂಖ್ಯೆ.

ನಾಗಂದಿಗಿ

ಬಾಗಿಲ ಮೇಲೆ ಗೋಡೆಯ ಮೇಲೆ ಹಲಗೆಯನ್ನು ಹಾಕಿ ಮಾಡಿದ ಗೂಡು.

ನಾಗರ

ತಲೆಗೆ ಹಾಕುವ ಒಡವೆ,

ನಾಗರ

ನಾಗರ ಹಾವು.

ನಾಗಸಂಕೋಲೆ

ಅಗ್ನಿಸರ್ಪ, ಸರ್ಪಸುತ್ತು, ಒಂದು ಕಾಯಿಲೆ.

ನಾಗಸಂಪಿಗೆ

ಮರದ ಜಾತಿಯಲ್ಲೇ ಅತಿ ಗಟ್ಟಿಮರ, ನಾಗರಹೆಡೆಯಂತೆ ಬಿಳಿ ಪರಿಮಳದ ಹೂ ಬಿಡುತ್ತದೆ.

ನಾಚಿಕೆ ಗಿಡ

ಮುಟ್ಟಿದರೆ ಮುನಿ, ಮುಟ್ಟಿದಾಗ ಮುದುಡಿಕೊಳ್ಳುವ ಒಂದು ಮುಳ್ಳಿನ ಗಿಡ, ಔಷಧಿಯುಕ್ತ.

ನಾಚ್ಗಿ

ನಾಚಿಕೆ, ಸಂಕೋಚ.

ನಾಚ್ಗಿ ಮುಳ್ಳು

ನಾಚ್ಕಿ ಗಿಡದ ಮುಳ್ಳು.

ನಾಟ

ಮರದ ಸಲಕರಣೆಗಳು, ಹಲಗೆ, ದಿಮ್ಮಿ, ತೊಲೆ ಇತ್ಯಾದಿ.

ನಾಟಿಕೋಳಿ

ಸಾಕಿದ ಕೋಳಿ.

ನಾಟು

ತಾಗು, ಮುಟ್ಟು, ಚುಚ್ಚು,

ನಾಟು

ಮನಸ್ಸಿಗೆ ಹಿಡಿಸು.

ನಾಡಂಚು

ನಾಡಹೆಂಚು, ಕುಂಬಾರನ ಕೈಯಿಂದ ಮಾಡಲ್ಪಟ್ಟ ಹೆಂಚು.

ನಾಡ್ದು

ನಾಳೆಯ ಮರುದಿನ, ನಾಡಿದ್ದು.

ನಾತ

ವಾಸನೆ, ದುರ್ವಾಸನೆ.

ನಾದ್ನಿ

ಗಂಡನ ತಂಗಿ, ಹೆಂಡತಿಯ ತಂಗಿ, ತಮ್ಮನ ಹೆಂಡತಿ, ಮಾವನ ಮಗಳು.

Search Dictionaries

Loading Results

Follow Us :   
  Download Bharatavani App
  Bharatavani Windows App