भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891516Next >

ಪಂಕ್ತಿ

ಸಾಲು, ಗುಂಪು.

ಪಂಕ್ತಿ ಭೋಜನ

ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು.

ಪಂಚಪತ್ರೆ

ಹಸಿರು ಎಲೆಯ ಸಾಮಾನ್ಯ ಪರಿಮಳದ ಸಣ್ಣಗಿಡ.

ಪಂಚಾತ್ಗಿ

ಪಂಚಾಯಿತಿ, ನ್ಯಾಯ ತೀರ್ಮಾನ, ಹರಟೆ ಹೊಡೆಯುವುದು.

ಪಂಚಿ

ಪಂಚೆ, ದೋತರ, ವಲ್ಲಿ.

ಪಂಚೇತಿ

ಪಂಚಾತ್ಗಿ.

ಪಂಚೇರು

ಐದು ಸೇರಿನ ಅಳತೆ, ಅರ್ಧ ದಡಿಯ.

ಪಂಜ

ಪ್ರಾಣಿಗಳ ಕಾಲಿನ ಉಗುರು.

ಪಂಜ್ರ

ಪಂಜರ, ಹಕ್ಕಿಗಳು/ಪ್ರಾಣಿಗಳನ್ನು ಕೂಡಿ ಹಾಕುವ ಗೂಡು.

ಪಂಜಿ

ಪಂಚಿ, ಪಂಚೆ.

ಪಂಜು

ದೀವಟಿಗೆ,

ಪಂಜು

ಬೆಂಕಿ

ಪಂಜು

ಪಂಜ, ಉಗುರು.

ಪಂಜ್ರೊಳ್ಳಿ

ಒಂದು ದೈವ/ಭೂತದ ಹೆಸರು.

ಪಂಡಿತ

ವೈದ್ಯ, ನಾಟಿವೈದ್ಯ.

ಪಂತ

ಛಲ, ಪಂದ್ಯ, ಶರತ್ತು, ಪಂಥ.

ಪಂತಿ

ಪಂಕ್ತಿ, ಊಟದ ಸಾಲು, ಸಾಲಾಗಿ ಊಟಕ್ಕೆ ಕೂತವರ ಒಂದು ತಂಡ.

ಪಂಥ

ಪಂತ.

ಪಕಳೆ

ಹೂವಿನ ಎಸಳು, ಚಿಟ್ಟೆಯ ರೆಕ್ಕೆ.

ಪಕ್ಕನೆ

ಬೇಗನೆ, ತಕ್ಷಣ, ಒಮ್ಮೆಲೆ. ಕೂಡಲೇ.
< previous1234567891516Next >

Search Dictionaries

Loading Results

Follow Us :   
  Download Bharatavani App
  Bharatavani Windows App