भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಚ್ಲೆ

ಬೆತ್ತಲೆ, ನಗ್ನ.

ಬಂಜರು

ಏನೂ ಬೆಳೆಯದ ನಿಸ್ಸಾರ ಭೂಮಿ.

ಬಂಜೆ

ಹಡೆಯಲಾಗದವಳು, ಮಕ್ಕಳಿಲ್ಲದವಳು.

ಬಜೆ

ಔಷಧಿ ಬೇರು.

ಬಜ್ ಬೆಣ್ಣೆ

ನಾಲಿಗೆ ತೊಡಕಾಗದಿರಲೆಂದು ಬಜೆಯನ್ನು ಬೆಣ್ಣೆಯೊಂದಿಗೆ ತೇದು ಮಗುವಿನ ನಾಲಿಗೆಗೆ ನೆಕ್ಕಿಸುವುದು.

ಬಜ್ಜ

ಸತ್ತವರಿಗೆ ಹನ್ನೊಂದನೇ ದಿನ ಮಾಡುವ ಕ್ರಿಯೆ, ತಿಥಿ, ಉತ್ತರಕ್ರಿಯೆ.

ಬಂಟ

ನೆಂಟನಲ್ಲದವನು.

ಬಂಟರು

ತುಳುನಾಡಿನವರು.

ಬಟವಾಡೆ

ಸಂಬಳವನ್ನು/ಸಂಬಳದ ಹಣವನ್ನು ಹಂಚುವುದು, ನಿಗದಿತದಿನ ಕೊಡುವ ಸಂಬಳ.

ಬಟ್ಟಗೆ

ಅಲ್ಲಿಂದಲ್ಲಿಗೆ, ಹೆಚ್ಚೂ ಆಗದೆ – ಕಡಿಮೆಯೂ ಆಗದಿರುವುದು, ಹದವಾದ ಎತ್ತರ/ದಪ್ಪವಿರುವುದು.

ಬಟ್ಟಿ ಇಳಿಸು

ಸಾರಾಯಿ ಮಾಡು.

ಬಟ್ಟಿಜಾರು

ಕರುಳಜಾರು, ಕರುಳು ಸ್ಥಳಪಲ್ಲಟವಾಗುವುದು, ಇದರಿಂದ ತುಂಬಾನೋವಾಗುವುದು.

ಬಟ್ಟು

ತೂಕದ ಕಲ್ಲು

ಬಟ್ಟು

ಮೂಗುತಿ

ಬಟ್ಟು

ಕುಂಕುಮ.

ಬಟ್ಟೆ

ಉಡುಪು, ವಸ್ತ್ರ.

ಬಟ್ಟೆಹರಡು

ವಸ್ತ್ರಗಳನ್ನು ಒಣಗಲು ಹಾಕು.

ಬಟ್ಲು

ಅಗಲವಾದ ತಟ್ಟೆ, ಪರಿವಾಣ.

ಬಂಡ

ಮಾನ ಮರ್ಯಾದೆಯಿಲ್ಲದವನು.

ಬಡಕಟ್ಟೆ

ಕೃಶ, ಬಡಕಲು, ಒಣಗಿದ.

Search Dictionaries

Loading Results

Follow Us :   
  Download Bharatavani App
  Bharatavani Windows App