भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಂದ್ರೆ

ಬಂದರೆ

ಬಂದ್ರೆ

ಮನೆಗೆ ಬಂದ ಅತಿಥಿಗಳನ್ನು ಬರಮಾಡಿಕೊಳ್ಳುವ ಗೌರವ ಸೂಚಕ ಪದ.

ಬಂದ್ಲು

ಬಂದಳು, ಬಂದಿದ್ದಾಳೆ (ಸ್ತ್ರೀ).

ಬನ

ಕಾಡು, ವನ, ದೈವದ ಕಲ್ಲುಗಳಿರುವ ಜಾಗ (ನಾಗರಬನ, ಚೌಡಿಬನ).

ಬನಕ್ಲು

ಅಂಟಿಕೊಂಡಿರುವ ಕೊಳೆ.

ಬನಿ

ಸತ್ವ, ಸಾರ.

ಬನ್ನಿ

ಬಾ ಎಂದು ಕರೆಯುವ ಪದ (ಬ.ವ).

ಬಮ್ಮಡಿ ಹೊಡಿ

ಎಷ್ಟು ಕೇಳಿಕೊಂಡರು, ಬಾಯಿ ಬಡಕೋ, ಕೂಗು (ಈ ಮಕ್ಕಳಿಗೆ ಬಮ್ಮಡಿ ಹೋಡದ್ರೂ ಕೇಳಲ್ಲ).

ಬಯಕೆ

ಆಸೆ, ಸೀಮಂತ.

ಬಯಕೆ ಹಾಕು

ಬಸುರಿ ಹೆಂಗಸಿಗೆ ಆಕೆಯ ಇಷ್ಟದ ತಿಂಡಿ ಊಟಗಳನ್ನು ಮಾಡಿಕೊಡುವ ಒಂದು ದಿನ, ಸೀಮಂತ.

ಬಯಿನೆ ಹಿಡಿ

ಬೈನೆ ಹಿಡಿ, ಬೈನೆ ಮರದ ಹೆಡಲು ಕಡಿದು ಕಣದಲ್ಲಿರುವ ಬತ್ತದ ಮೇಲಿರುವ ಹುಡಿ ಹುಲ್ಲನ್ನು ತೆಗೆಯಲು ಪೊರಕೆಯಂತೆ ಬಳಸುವುದು.

ಬಯ್ ಗ್ಗೆ

ಸಂಜೆಹೊತ್ತಿಗೆ, ಸಾಯಂಕಾಲಕ್ಕೆ.

ಬಯ್ಗು

ಸಂಜೆ, ಇಳಿಹೊತ್ತು.

ಬರ

ಕಡಿಮೆಯಾಗಿರುವಿಕೆ, ಕ್ಷಾಮ, ಕೊರತೆ,

ಬರ

ರಭಸ, ವೇಗ (ಎಂಥಾಬರ ಮಳೆ ಬಂತು).

ಬರಗಾಲ

ಕ್ಷಾಮ, ಬರ.

ಬರಗುಡಿಸು

ಶಬ್ಧಮಾಡು (ಅಲಂ) (ಏನು ಬರಗುಡಿಸುತ್ತಿ?).

ಬರಗೆಟ್ಟಂಗೆ

ಅನ್ನಕಾಣದವರ ಹಾಗೆ, ಹೊಟ್ಟೆಗಿಲ್ಲದವರಂತೆ ಬೇಗು.

ಬರಬರ

ಶಬ್ಧವಾಗುವುದನ್ನು ಹೇಳು (ಅಲಂ).

ಬರಬ್ಬರಿ

ತುಂಬಾ, ಹೇರಳ, ಬರೋಬ್ಬರಿ.

Search Dictionaries

Loading Results

Follow Us :   
  Download Bharatavani App
  Bharatavani Windows App