भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬರಾಟೆ

ರಭಸ, ಜೋರು.

ಬರಾವರ್ದು ಹಕ್ಕು

ಹಿಂದಿನಿಂದ ಬಂದ, ವಂಶಪಾರಂಪರ್ಯವಾಗಿ ಬಂದ ಹಕ್ಕು.

ಬರಾವು

ಬರಹ, ಓದುಬರಹ, ವಿದ್ಯೆ.

ಬರಿದೆ

ಸುಮ್ಮನೆ, ವ್ಯರ್ಥವಾಗಿ, ಖಾಲಿಯಾಗಿ.

ಬರಿಬೆತ್ಲೆ

ಸಂಪೂರ್ಣ ಬೆತ್ತಲು, ನಗ್ನ.

ಬರಿಸಬು

ಕಜ್ಜಿಯಿಲ್ಲದೆ ಬರಿ ತುರಿಕೆ ಬರುವ ಒಂದು ಚರ್ಮರೋಗ.

ಬರೀ

ಕೇವಲ.

ಬರುವುದು

ಹಿಂತಿರುಗುವುದು, ವಾಪಸ್ಸಾಗುವುದು.

ಬರೆ

ಗೆರೆ, ಗುರುತು

ಬರೆ

ಧರೆ.

ಬರೆಹಾಕು

ಸುಡು

ಬರೆಹಾಕು

ಮೈಮೇಲೆ ಕಾದ ಕಬ್ಬಿಣದಿಂದ ಗುರುತು ಮಾಡು.

ಬರ್ಕ

ಕುರಿಯಂತೆ ಸಣ್ಣಗಿರುವ ಕಾಡಿನ ಪ್ರಾಣಿ, ಬೆನ್ನಿನ ಮೇಲೆ ಮೂರು ಸುಂದರವಾದ ಪಟ್ಟಿಯಿರುತ್ತದೆ. ಮೊಲಕ್ಕಿಂತ ಸ್ವಲ್ಪ ದೊಡ್ಡ ಗಾತ್ರ.

ಬರ್ಕತ್ತಾಗಂಗಿಲ್ಲ

ಉಳಿಗಾಲವಿಲ್ಲ, ತಪ್ಪಿಸಿಕೊಳ್ಳುವಂತಿಲ್ಲ, ಉದ್ಧಾರವಾಗಲ್ಲ.

ಬರ್ಕತ್ತು

ಉದ್ದಾರ, ಉಳಿವು, ಬಿಡುಗಡೆ, ಬರಕತ್ತು.

ಬರ್ಗೆಟ್ಟು

ಬಹಳ ಹಸಿದು, ಬರದಿಂದ ಕಂಗೆಟ್ಟು.

ಬರ್ಲು

ಪೊರಕೆ

ಬರ್ಲು

ಉತ್ತರಾಣಿಗಿಡದ ಹಿಡಿ.

ಬಲಗಡೇವ್ಞ

ಮದುಮಗನ ಜೊತೆಗಾರ.

ಬಲಗಣೆಮರ

ತುಂಬಾ ಗಟ್ಟಿಮರ, ದಾವಣೆಯ ಬೇಟಿಗೆ ಮತ್ತು ಬುಗುರಿ ಮಾಡಲು ಉಪಯೋಗಿಸುತ್ತಾರೆ.

Search Dictionaries

Loading Results

Follow Us :   
  Download Bharatavani App
  Bharatavani Windows App