भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮರ

ಧಾನ್ಯಗಳನ್ನು ಶುದ್ಧ ಮಾಡಲು ಬಳಸುವ ಬಿದಿರಿನ ಸಾಧನ, ಮೊರ.

ಮರಕುಟ್ಗ

ಮರಕುಟಿಗ, ಒಂದು ಹಕ್ಕಿ.

ಮರಗುಳಿ

ಮರೆಯುವ ಅಭ್ಯಾಸವಿರುವವನು, ನೆನಪಿನ ಶಕ್ತಿ ಕುಂದಿರುವವನು.

ಮರಗೆಣಸು

ಬಳ್ಳಿಯ ಬುಡದಲ್ಲಿ ಗೆಣಸಿನಂತೆ ಸಣ್ಣ ಗಡ್ಡೆ.

ಮರಟ್ಲು

ಮರ್ಚಿಟ್ಟೆ, ಅನ್ನದ ಗಂಜಿಯನ್ನು ಬಸಿಯಲು ಅನ್ನದ ಪಾತ್ರೆಯ ಬಾಯಿಗೆ ಸಿಬ್ಲದ ಮೇಲೆ ಮುಚ್ಚುವ ಮರದ ಹಲಗೆ.

ಮರ್ಮ

ಗುಟ್ಟು, ರಹಸ್ಯ.

ಮರವರ್ಲೆ

ಮರದ ಮೇಲೆ ಜೇನುಗೂಡಿನಂತಿರುವ ಗೆದ್ದಲು.

ಮರಸು ಬೇಟೆ

ಮರೆಯಲ್ಲಿ ಕುಳಿತು ಪ್ರಾಣಿಗಳನ್ನು ಬೇಟೆಯಾಡುವ ಒಂದು ವಿಧಾನ.

ಮರ್ಯಾದಿ

ಮರ್ಯಾದೆ, ಗೌರವ.

ಮರಿ

ಕರು, ಪಿಳ್ಳೆ, ಕೂಸು.

ಮರಿಅಗ್ಚು

ಕೆಲವು ದಿನಗಳು ಸಲಹಿದ ನಂತರ ಕೋಳಿ, ನಾಯಿ ಮುಂತಾದವು ಮರಿಯಿಂದ ಬೇರಾಗುವುದು.

ಮರ್ಗಿ

ಹಿಟ್ಟನ್ನು ಕಲೆಸುವ ಅಗಲವಾದ ಮರದ ಸಾಧನ.

ಮರ್ಚಿಟ್ಟೆ

ಮರಟ್ಲು.

ಮರ್ದಿನ

ಮರುದಿನ.

ಮರುಗು

ಕೊರಗು, ದುಃಖಪಡು.

ಮರ್ಗುಣಿ

ದೊಂಟೆ, ದನಗಳ ಕೊರಳಿಗೆ ಕಟ್ಟುವ ಬಿದಿರಿನ ಗಂಟೆ.

ಮರೆಮಾಚದು

ಇನ್ನೊಬ್ಬರಿಗೆ ವಿಷಯ/ವಸ್ತುವನ್ನು ಗಮನಕ್ಕೆ ತಾರದೆ ಗೋಪ್ಯವಾಗಿ ಇಡುವುದು.

ಮಲ್ ನಾಡು

ಮಲೆನಾಡು, ಕಾಡುಗಳಿರುವ ಪ್ರದೇಶ.

ಮಲ

ಮೊಲ.

ಮಲತಾಯಿ

ತಂದೆಯ ಇನ್ನೊಬ್ಬ ಹೆಂಡತಿ.

Search Dictionaries

Loading Results

Follow Us :   
  Download Bharatavani App
  Bharatavani Windows App