भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲಾಚಾರು

ಬಡಕಲು, ಕೃಶ.

ಲಾಟೀನು

ಕಂದೀಲು, ಲಾಂದ್ರ.

ಲಾಡಿ

ಉಡುಪು ಕಟ್ಟಲು ಬಳಸುವ ದಾರ.

ಲಾಡು

ಲಡ್ಡು.

ಲಾಲ್ಕಿ

ದ್ರವ ಪದಾರ್ಥ ಚೆಲ್ಲದಂತೆ ತುಂಬುವ ಸಾಧನ, ಆಲಿಕೆ, ಲಾಲ್ಕೆ.

ಲಾಳ

ಎತ್ತಿನ ಕಾಲಿಗೆ ಕಟ್ಟುವ ಹಲ್ಲೆ.

ಲಿಂಗದಾರಿ

ಕೊಯ್ಯಲೂ ಆಗದಂತಹ ಗಟ್ಟಿ ನಾಟಾಮರ, ಮನೆಗೆ ಬಳಸುವುದಿಲ್ಲ, ದೇವಸ್ಥಾನ ಕಟ್ಟಲು ಬಳಕೆ.

ಲಿಂಬೆಹಣ್ಣು

ಒಂದು ಹುಳಿಹಣ್ಣು, ಉಪ್ಪಿನಕಾಯಿ, ಪಾನಕಕ್ಕೆ ಬಳಕೆ.

ಲೇಪ

ಹಚ್ಚುವ/ಬಳಿಯುವ ಔಷಧಿ.

ಲೇವಾದೇವಿ

ಕೊಟ್ಟು ತೆಗೆದು ಕೊಳ್ಳುವುದು.

ಲೇಸು

ಉತ್ತಮ, ವಾಸಿ, ಇನ್ನೂ ಚೆನ್ನಾಗಿ.

ಲೇಹ

ಲೇಹ್ಯ, ನೆಕ್ಕುವ ಔಷಧಿ.

ಲೊಚಗುಡು

ಚಪ್ಪರಿಸು

ಲೊಚಗುಡು

ಹಲ್ಲಿ ಕೂಗುವುದು.

ಲೋಟ

ಕುಡಿಯುವ ಸಣ್ಣ ಪಾತ್ರೆ.

ಲೋಬಾನ

ಒಂದು ಪರಿಮಳದ ವಸ್ತು, ಸಾಂಬ್ರಾಣಿ, ಗುಗ್ಗುಳ, ಧೂಪ.

Search Dictionaries

Loading Results

Follow Us :   
  Download Bharatavani App
  Bharatavani Windows App