भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಿರೋಧ

ವೈರ, ಹಗೆತನ, ಪರವಿಲ್ಲದಿರುವುದು.

ವಿಶ್ವಾಸ

ಪ್ರೀತಿ.

ವಿಳ್ಳೆ

ವೀಳ್ಯ, ತಾಂಬೂಲ.

ವಿಳ್ಳೆ ಕೊಡುವುದು

ಶುಭಕಾರ್ಯಕ್ಕೆ ನಿಗದಿಪಡಿಸಲು ತಾಂಬೂಲ ಕೊಡುವುದು.

ವಿಳ್ಳೆ ತಿದ್ದುವ ಶಾಸ್ತ್ರ

ಮದುವೆಗೆ ಬಂದ ಅತಿಥಿಗಳಿಗೆಲ್ಲರಿಗೂ ಗೌರವಾರ್ಥವಾಗಿ ಎರಡು ವೀಳ್ಯದೆಲೆ, ಎರಡು ಅಡಿಕೆಯಿಟ್ಟು ತಲೆಗೆ ಮುಂಡಾಸು ಸುತ್ತಿಕೊಂಡು, ಪಾಲು ಮುಖಂಡರ ಅಪ್ಪಣೆ ಪಡೆದು ಹೆಣ್ಣಿನ ಮನೆಯಲ್ಲಿ ದಾರೆಗೆ ಮೊದಲು ಎರಡೂ ಕಡೆಯವರು ಎಲ್ಲರ ಅಪ್ಪಣೆ ಕೇಳುವುದು.

ವೀರ ಭದ್ರ ದೇವಸ್ಥಾನ

ವೀರಭದ್ರಸ್ವಾಮಿ ದೇವರಗುಡಿ.

ವೀಸೆ

ಐದು ಸೇರಿನ ಒಂದು ಅಳತೆ.

ವುಂಟಿ

ಗಂಡಸರು ಹಾಕಿಕೊಳ್ಳುವ ಒಂದು ಕಿವಿಯ ಆಭರಣ.

ವುತ್ಪತ್ತಿ

ಉತ್ಪತ್ತಿ, ವರಮಾನ.

ವುಂದು

ಒಂದು, ಒಂದರ ಸಂಖ್ಯೆ.

ವುಂದೇ ಏಕ

ಒಂದೇ ಸಮ, (ಆ ಗಿಡವುಂದೇ ಏಕ ಬೆಳೆದಿದೆ).

ವುರ್ಸ

ವರ್ಷ.

ವೃಥಾ

ವ್ಯರ್ಥವಾಗಿ.

ವೆಚ್ಚ

ಖರ್ಚು.

ವೆನಿಲಾ

ಹಸಿರುಬಳ್ಳಿ, ಬಳ್ಳಿಯನ್ನು ಕತ್ತರಿಸಿ ಕೆಳಗೆ ನೇತುಬಿಟ್ಟರೆ ಹೂವಾಗುತ್ತದೆ. ಹೂವನ್ನು ಕೃತಕವಾಗಿ ಪರಾಗ ಸ್ಪರ್ಶ ಮಾಡಿದರೆ ಮಾತ್ರ ಕಾಯಿ ಬಿಡುತ್ತದೆ. ಕಾಯನ್ನು ಸಂಸ್ಕರಿಸಿ ಪರಿಮಳ ದ್ರವ್ಯವಾಗಿ ಉಪಯೋಗಿಸುತ್ತಾರೆ.

ವೇಗ

ಚುರುಕು, ರಭಸ, ಶೀಘ್ರ.

ವೇಶ

ವಿರೂಪ.

ವೈಡೂರ್ಯ

ಪದ್ಮರಾಗ, ಅಮೆಥಿಸ್ಟ್, ನೀಲಿ ಮಿಶ್ರಿತ ನೇರಳೆಬಣ್ಣದ ಬೆಲೆ ಬಾಳುವ ಕಲ್ಲು.

ವೈದ್ಯ

ಪಂಡಿತ, ಹಕೀಮ.

ವೈನ

ರುಚಿ, ಚಂದ, ರೂಪ.

Search Dictionaries

Loading Results

Follow Us :   
  Download Bharatavani App
  Bharatavani Windows App