भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಜಾಹಾಕು

ಸಂಬಳದ ಹಣವನ್ನು ಸಾಲದ ಹಣಕ್ಕಾಗಿ ಹಿಡಿದು ಕೊಳ್ಳುವುದು, ಮುರಿ ಹಾಕ್ಕೊಣದು.

ವಟಗುಡು

ಸದಾ ಬೈಯುತ್ತಿರು, ಗೊಣಗು

ವಟಗುಡು

ಒಂದೇ ಸಮ ಕಪ್ಪೆ ಕೂಗುತ್ತಿರುವುದು.

ವಟವಟ

ಗೊಣಗುವಿಕೆ. ವಟಗುಟ್ಟುವಿಕೆ,

ವಟವಟ

ಕಪ್ಪೆಯ ಕೂಗು.

ವಂಟಿ

ಉಂಟಿ, ಒಂಟಿ, ಗಂಡಸರು ಒಂದು ಕಿವಿಗೆ ಮಾತ್ರ ಹಾಕಿಕೊಳ್ಳುವ ಆಭರಣ.

ವಂಟಿ

ಒಬ್ಬಂಟಿ, ಒಬ್ಬ.

ವಟ್ ಮಡ್ಕೆ ಹಣ್ಣು

ಒಂದು ಜಾತಿಯ ಮುಳ್ಳಿನ ಪೊದೆಯಲ್ಲಿ ಬಿಡುವ ಸಣ್ಣಕಪ್ಪು ಹಣ್ಣು, ತುಂಬಾ ರುಚಿ.

ವಟ್ಟೆ

ತೂತು, ಕಂಡಿ, ರಂಧ್ರ.

ವಟ್ಲು

ಪಾತಿ, ಅಗೆ, ಸಸಿಮಾಡಿ ನೆಡುವ ಮುನ್ನ ಬೀಜವನ್ನು ಭೂಮಿ ಹಸನು ಮಾಡಿ ಬಿತ್ತುವುದು.

ವಟ್ಲುಹಾಕು

ಬೀಜಹಾಕು, ಅಗೆಹಾಕು, ಪಾತಿಮಾಡು.

ವಡಕ್ಲು

ಧಾನ್ಯಗಳನ್ನು ಅರ್ಧಂಬರ್ಧ ಒಡೆದಿರುವುದು, ನುಚ್ಚು, ತರಿ.

ವಡಗು

ಗದ್ದೆಯಲ್ಲಿ ಕಟ್ಟಿದ ಅಂಚು ಮಳೆ ನೀರು ಜಾಸ್ತಿಯಾಗಿ ಒಡೆಯುವುದು.

ವಡಾಳೆ

ಹೊಂಬಾಳೆ.

ವಡಿ

ಒಡೆ. ಚೂರುಮಾಡು, ಹೋಳುಮಾಡು.

ವಡು

ನೀರು ಹೋಗುವ ಕಂಡಿ/ರಂಧ್ರ, ಕೆರೆಯ ತೂಬು.

ವಡು ಬಿದ್ದದೆ

ನಿಲ್ಲಿಸಿದ ನೀರಿನ ಕಟ್ಟೆಯೊಡೆದಿದೆ.

ವಡುಬೀಳು

ನಿಲ್ಲಿಸಿದ ನೀರು ಕಂಡಿ ಮಾಡಿಕೊಂಡು ಹೊರ ಹೋಗುವುದು. ಗದ್ದೆಯ ಅಂಚು ಒಡೆದು ನೀರು ಹೊರ ಹೋಗುವುದು.

ವಡೆ

ಒಡೆ, ಒಡೆದುಹಾಕು, ಚೂರುಮಾಡು,

ವಡೆ

ಒಂದು ಕಾರದ ತಿಂಡಿ.

Search Dictionaries

Loading Results

Follow Us :   
  Download Bharatavani App
  Bharatavani Windows App