भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಡೆಕಲ್ಲು

ಬತ್ತವನ್ನು ಬೀಸಿ ಅಕ್ಕಿ ಮಾಡುವ ದೊಡ್ಡಕಲ್ಲು.

ವಡೆಯ

ಒಡೆಯ, ಆಳುಗಳನ್ನಿಟ್ಟುಕೊಂಡು ಕೃಷಿ ಕೆಲಸ ಮಾಡಿಸುವವನು.

ವಡ್ಕು

ಒಡೆದಿದ್ದು, ಸೀಳು, ಸಿಡಿ ಕಂಡಿ.

ವಡ್ಕು

ಒಡಕು, ಭಿನ್ನಾಭಿಪ್ರಾಯ.

ವಡ್ಡ

ವಡ್ಡರವನು, ಕಲ್ಲು ಮಣ್ಣಿನ ಕೆಲಸ ಮಾಡುವವನು.

ವಡ್ಡ

ತಿಳುವಳಿಕೆಯಿಲ್ಲದವನು, ನಯನಾಜೂಕಿಲ್ಲದವನು (ಅಲಂ)

ವಡ್ಡಡ್ಕು

ಮೊದಲೇ ಇದ್ದ ಬೇಲಿಯಲ್ಲಿ ಕಂಡಿಗಳಾಗಿದ್ದರೆ, ಬೇಲಿ ಗೂಟಗಳು ಹೋಗಿದ್ದರೆ ಅದನ್ನು ಸರಿಪಡಿಸುವುದು.

ವಡ್ಡಿ

ಗೂಡು, ಪ್ರಾಣಿಗಳನ್ನು ಕೂಡಿ ಹಾಕುವ ಸಣ್ಣ ಕೊಟ್ಟಿಗೆ (ಹಂದಿವಡ್ಡಿ, ಕೋಳಿವಡ್ಡಿ).

ವಡ್ಡಿ

ವಡ್ಡಿರವಳು, ಕಲ್ಲು ಮಣ್ಣಿನ ಕೆಲಸದವಳು.

ವಡ್ಡಿ

ತಿಳುವಳಿಕೆಯಿಲ್ಲದವಳು, ದಡ್ಡಿ, ನಯ ನಾಜೂಕಿಲ್ಲದವಳು. (ಅಲಂ)

ವಡ್ಡು

ಬೇಲಿ, ತಡೆಬೇಲಿ.

ವಡ್ದಗೈ

ವಾರೆಕೈ, ಡೊಂಕು ಕೈ,

ವಡ್ದಗೈ

ಎಡಚು, ಎಡಗೈಯನ್ನು ಹೆಚ್ಚಾಗಿ ಬಳಸುವುದು.

ವಡ್ಲು

ಒಡಲು.

ವಡ್ಲುಜರ

ಒಡಲು ಜ್ವರ, ಒಳಗಿಂದೊಳಗೇ ಕಾಣಿಸಿ ಕೊಳ್ಳುವ ಜ್ವರ, ಸಣ್ಣಜ್ವರ.

ವಡ್ಹಾಕು

ಬೇಲಿಹಾಕು, ತಡೆಹಾಕು.

ವಣಕು

ಒಣಗಿದ ಬತ್ತಿದ, ನೀರು ಇಂಗಿದ.

ವಣಕ್ಮೀನು

ಒಣಗಿಸಿದ ಮೀನು, ಬಿಸಿಲಲ್ಲಿ ಒಣಗಿಸಿದ ಮೀನು (ಬೆಂಕಿಯ ಹತ್ತಿರ ಹೊಗೆಯಲ್ಲಿ ಒಣಗಿಸಿದ್ದು, ಕರ್ಮೀನು).

ವತ್ತಾಯ

ಒತ್ತಾಯ, ಬಲವಂತ.

ವತ್ತುಕಟ್ಟು

ಒತ್ತಾಯ ಮಾಡು, ಬಲವಂತ ಮಾಡು.

Search Dictionaries

Loading Results

Follow Us :   
  Download Bharatavani App
  Bharatavani Windows App