भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವತ್ತೆ

ಒತ್ತೆ, ಅಡ, ಗಿರವಿ.

ವಂದ

ಒಂದ, ಉಂದ, ಮೂತ್ರ,

ವಂದ

ಒಂದು ಎಂದು ಲೆಕ್ಕ ಹಾಕುವುದು.

ವದಗು

ಒದಗು, ಸಮಯಕ್ಕಾಗು, ಆಗಿಬರು.

ವದಗು

ಹೆಚ್ಚಾಗು, ಉಬ್ಬಳಿಸಿ ಬರುವುದು.

ವದಗೆ

ಸರಾಗವಾಗಿ ನೀರು ಹರಿಯಲು ಹಾಕಿದ ಬೈನೆ/ಅಡಿಕೆ ಮರವನ್ನು ಸೀಳಿ ಒಳಗಿನ ತಿರುಳನ್ನು ತೆಗೆದು ಮಾಡಿದ ಕಂಬೆ, ನೀರ್ವೀಳು.

ವದರು

ಒದರು, ಬಡಬಡಿಸು, ಬಾಯಿಗೆ ಬಂದಂತೆ ಮಾತಾಡು. (ಅಲಂ)

ವದುರು

ಕೊಡವು, ಕೊಡಕು, ಒದರು.

ವದ್ದೆ

ತೇವ, ಥಂಡಿ, ನೀರಿನಂಶವಿರುವುದು, ಒಣಗಿಲ್ಲದುದು.

ವಧೆ

ಪೆಟ್ಟು, ಹೊಡೆತ, ಸಾಯುವಂತೆ ಹೊಡೆ.

ವನ

ಬನ, ಸಣ್ಣಕಾಡು.

ವನಕೆ

ಒರಳಿನಲ್ಲಿ ಕುಟ್ಟಲು ತುದಿಯಲ್ಲಿ ವಿಶಿಷ್ಟವಾದ ಕಬ್ಬಿಣದ ಬಳೆಗಳಿರುವ ಉದ್ದಮರದ ತುಂಡು, ಇದನ್ನು ಬಲಿತ, ದಿಂಡು ದಪ್ಪವಿರುವ ತೂಕದ ಬೈನೆ ಮರದಿಂದಲೂ, ಕಿರನ್ ಬೋಗಿ ಮರದಲ್ಲೂ ಮಾಡುತ್ತಾರೆ.

ವನಕೆ ಮುಂಡು

ವನಕೆಯಂತೆಯೇ ಅದರ ಅರ್ಧಭಾಗ ಮಾತ್ರ ಉದ್ದವಿರುವ ಮರದತುಂಡು.

ವನಿ

ಧಾನ್ಯಗಳನ್ನು ಮೊರದಲ್ಲಿಟ್ಟು ಅಲ್ಲಾಡಿಸಿ ಹಸನುಮಾಡು, ಘನಮಾಡು.

ವನಿ

ತೂಗು, ತೂಗಾಡು, ತೂಗಿಸು, ಅಲ್ಲಾಡಿಸು (ತೊಟ್ಲುವನಿ, ತಲೆವನಿ).

ವಪ್ಪ

ಒಪ್ಪ, ಓರಣ, ಅಚ್ಚುಕಟ್ಟು.

ವಪ್ಪತ್ತು

ಒಂದು ಹೊತ್ತು, ಅರ್ಧದಿನ.

ವಪ್ಪತ್ತು

ಪ್ರತಿ ಶನಿವಾರ ಒಂದು ಹೊತ್ತು ಊಟಮಾಡಿ, ರಾತ್ರಿ ಫಲಾಹಾರ ಸೇವಿಸುವುದು (ಶನ್ವಾರ ಒಪ್ಪತ್ತು-ದ್ವಾಸೆ ಇಪ್ಪತ್ತು).

ವಪ್ಪಮಾಡು

ಶವಸಂಸ್ಕಾರ ಮಾಡುವುದು.

ವಮನ

ವಾಂತಿ.

Search Dictionaries

Loading Results

Follow Us :   
  Download Bharatavani App
  Bharatavani Windows App