भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಳಾಂತ್ರ

ಒಳಗಿನ ವಿಚಾರ, ಒಳಗುಟ್ಟು.

ವಳಾಂತ್ರದಾಗ

ಹಿಂದನಿಂದ, ಇನ್ನೊಬ್ಬರಿಗೆ ಗೊತ್ತಿಲ್ಲದೆಯೇ.

ವಳ್ಕಡೆ

ಜಮೀನಿನ ಒಳಗೆ ದನಕರುಗಳು ಮೇಯುವ ಸ್ಥಳ, ಬ್ಯಾಣ, ಹುಲ್ಲುಗಾವಲು.

ವಳ್ದಾರಿ

ಹತ್ತಿರದ/ಸಮೀಪದ ಹಾದಿ.

ವಳ್ಳೆ

ವಳಲೆ, ಒಳಲೆ.

ವಳ್ಳೆ

ಒಳ್ಳೆಯ, ಉತ್ತಮ, ಗುಣವಂತರಾದ, ನೀತಿವಂತರಾದ.

ವಳ್ಳೆಣ್ಣೆ

ಕಡಲೆಕಾಯಿ ಬೀಜದ ಎಣ್ಣೆ, ಶೇಂಗಾ ಎಣ್ಣೆ.

ವಾಕರಕಿ

ವಾಕರಿಕೆ, ಒಗಡಿಕೆ, ಒಗಡು, ವಾಂತಿಬರುವಂತಾಗು.

ವಾಟ

ಇಳಿಜಾರು, ಓಟ.

ವಾಟಕೊಡು

ಇಳಿಜಾರುಮಾಡು, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡು.

ವಾಟಗರ್ಕೆ ಹುಲ್ಲು

ಕರ್ಕಿ ಹುಲ್ಲಿನಂತೆ ಸ್ವಲ್ಪ ಎತ್ತರ ಬೆಳೆಯುತ್ತದೆ, ತುಂಬಾ ಗಟ್ಟಿ.

ವಾಟಬಾಳೆ

ಪುಟ್ಟಬಾಳೆಯಂತೆ ಸಣ್ಣಹಣ್ಣು, ತುಂಬಾ ರುಚಿಕರ.

ವಾಟಾಳ

ಅಡಿಕೆ ಹಾಳೆಯ ತಲೆಯುಡುಗೆ.

ವಾಟೆ

ಗೊರಟು, ಬೀಜ.

ವಾಟೆ

ಸಣ್ಣಜಾತಿಯ ಬಿದಿರು, ಉದ್ದಕ್ಕೆ ಮೇಲೆ ಹೋಗುತ್ತದೆ.

ವಾಟೆ ಸಲಕಿನ ಬುಟ್ಟಿ

ವಾಟೆಯನನು ಸೀಳಿ ತೆಳುಬಳ್ಳಿಯಂತೆ ಮಾಡಿ ಅದರಿಂದ ಹೆಣೆದ ಬುಟ್ಟಿ.

ವಾಟೆಕಾಯಿ

ಹಸಿರು ಕಾಯಿ ಮತ್ತು ತೆಳುಹಳದಿ ಬಣ್ಣದ ವಾಟೆಮರದ ಕಾಯಿ.

ವಾಟೆಮರ

ಹುಳಿಯಾದ ಕಾಯಿಗಳನ್ನು ಬಿಡುವ ಒಂದು ಜಾತಿಯ ಮರ, ಗಟ್ಟಿಯಾದ ಮರ.

ವಾಟೆಹುಳ

ಸಗಣಿಯಲ್ಲಾಗುವ ಹುಳ, ಸಗಣಿಹುಳ.

ವಾಟೆಹುಳಿ

ವಾಟೆಕಾಯನ್ನು ಕೊಯ್ದು, ಹೆರೆದು, ಬೀಜವನ್ನು ತೆಗೆದು ಒಣಗಿಸಿ ಹುಣಸೇ ಹಣ್ಣಿನ ಬದಲಿಗೆ ಉಪಯೋಗಿಸುವ ಔಷಧೀಯ ಗುಣವುಳ್ಳ ಒಂದು ಹುಳಿ.

Search Dictionaries

Loading Results

Follow Us :   
  Download Bharatavani App
  Bharatavani Windows App