भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಾಲಾಡು

ಓಲಾಡು, ತೊಳಲಾಡು, ಅತ್ತಿಂದಿತ್ತ, ಇತ್ತಿಂದತ್ತ ಮನಸ್ಸಿನ ತುಯ್ದಾಟ, ನಿಧಾನಕ್ಕೆ ನಡೆಯುವುದು.

ವಾಲು

ಬಾಗು, ತೂಗು.

ವಾಲು

ಒಬ್ಬರ ಪರವಹಿಸು, ಒಬ್ಬರ ಪಕ್ಷವಹಿಸು (ಅಲಂ).

ವಾಲೆ

ಓಲೆ, ಕಿವಿಯ ಆಭರಣ.

ವಾಲೆಗರಿ

ತಾಳೆಮರದ ಗರಿ, ಹಿಂದೆ ಬರೆಯಲು ಪುಸ್ತಕದ ಬದಲಿಗೆ ಬಳಸುತ್ತಿದ್ದರು.

ವಾಲೆಬೆಲ್ಲ

ಪಿಲ್ಲೆಮಾಡಿ ವಾಲೆಗರಿಯೊಳಗಿಟ್ಟಿರುವ ಬೆಲ್ಲ, ತಾಳೆ ಮರದಿಂದ ತಯಾರಿಸಿದ ಬೆಲ್ಲ.

ವಾಲ್ಪೆಟ್ಟು

ಗೋಡೆಯ ಮೇಲೆ ಕೂರಿಸಿದ/ಗೋಡೆಯೊಳಗೆ ತೂರಿಸಿದ ಮರದ ತೊಲೆ.

ವಾಸಿ

ಗುಣಮುಖ, ಸುಧಾರಿಸಿದ ಆರೋಗ್ಯ.

ವಾಸಿ

ಉತ್ತಮ, ಆಗಬಹುದು (ಅದಕ್ಕಿಂತ ಇದೇ ವಾಸಿ).

ವಾಸ್ಕಾಲು

ಬಾಗಿಲಿನ ಚೌಕಟ್ಟು, ನಿಲ.

ವಾಸ್ತವಾಂಶ

ನಿಜಸ್ಥಿತಿ, ವಸ್ತುಸ್ಥಿತಿ.

ವಾಸ್ನೆ

ವಾಸನೆ, ನಾತ, ಸುಗಂಧ/ದುರ್ಗಂಧ.

ವಾಳ್ಯ

ಒಂದು ಬತ್ತದ ತಳಿ.

ವಿಂಗ್ಡ

ವಿಂಗಡಿಸು, ಬೇರೆಮಾಡು.

ವಿಗ್ರ

ವಿಗ್ರಹ, ಮೂರ್ತಿ.

ವಿಧಿ

ಅದೃಷ್ಟ, ಬ್ರಹ್ಮ, ದೇವರು.

ವಿನಾ

ವಿನಹ, ಹೊರತು, ಉಳಿದು, ಬಿಟ್ಟು.

ವಿನಾಕಾರಣ

ಸುಕಾಸುಮ್ನೆ, ಕಾರಣವಿಲ್ಲದೆ.

ವಿಪರೀತ

ಜಾಸ್ತಿ, ಅತಿ.

ವಿಭೂತಿ

ಭಸ್ಮ.

Search Dictionaries

Loading Results

Follow Us :   
  Download Bharatavani App
  Bharatavani Windows App