Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ವಂಕಿ
ತೋಳ ಬಂದಿ, ತೋಳಿನ ಆಭರಣ.
ವಂಕು
ಡೊಂಕು, ವಕ್ರ.
ವಂಕೊಂಕು
ಡೊಂಕು ಡೊಂಕಾಗಿರುವುದು.
ವಕ್ಕಂಡು
ಒಗೆದುಕೊಂಡು, ಬಟ್ಟೆ ತೊಳೆದುಕೊಂಡು.
ವಕ್ಕರ್ಸು
ಇಷ್ಟವಿಲ್ಲದವರ ಆಗಮನ, ಬೇಡವಾದಾಗ ಬರುವುದು, ಆಮಂತ್ರಣವಿಲ್ಲದಿದ್ದರೂ ಬರುವುದು.
ವಕ್ರ
ಡೊಂಕು, ಓರೆ, ವಾರೆ.
ವಕ್ಲೆಬ್ಸು
ಒಕ್ಕಲೆಬ್ಬಿಸು, ಜಾಗ ಖಾಲಿ ಮಾಡಿಸು, ಊರು ಬಿಟ್ಟು ಓಡಿಸು.
ವಕ್ಲೇಳು
ಒಕ್ಕಲೇಳು, ಜಾಗ ಖಾಲಿಮಾಡು, ಊರುಬಿಟ್ಟು ಓಡು.
ವಕ್ವಕ್ರ
ವಕ್ರವಕ್ರ, ವಂಕೊಂಕು, ಡೊಂಕುಡೊಂಕು, ಓರೆಓರೆಯಾಗಿರುವುದು.
ವಗರು
ಉಪ್ಪು-ಹುಳಿ-ಕಹಿಯ ಮಿಶ್ರಣ ಷಡ್ರಸಗಳಲ್ಲಿ ಒಂದು.
ವಗಾಯ್ಸು
ವಗಾಸು.
ವಗಾಸು
ಎಸಿ, ವಗಿ, ಬಿಸಾಡು, ದೂರಕ್ಕೆ ಹಾಕು.
ವಗಾಸ್ದ ಹೊಡ್ತಕ್ಕೆ
ಎಸೆದ ರಭಸಕ್ಕೆ.
ವಗಿ
ವಗಾಸು.
ವಗಿ
ಬಟ್ಟೆ ಒಗೆಯುವುದು, ಶುದ್ಧ ಮಾಡುವುದು, ಸ್ವಚ್ಛಗೊಳಿಸು.
ವಗ್ಗರ್ಣೆ
ಒಗ್ಗರಣೆ, ಮಾಡಿದ ಅಡಿಗೆಗೆ ಎಣ್ಣೆಕಾಯಿಸಿ, ಒಣಮೆಣಸಿನಕಾಯಿ ಸಾಸಿವೆ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು, ಮುಂತಾದುವನ್ನು ಹಾಕಿ, ರುಚಿಗೆ ಅಥವಾ ಅಲಂಕಾರಕ್ಕೆ ಹಾಕುವುದು.
ವಗ್ತಾನ
ಅಚ್ಚುಕಟ್ಟು, ಕ್ರಮವರಿತ ಕೆಲಸ, ಒಪ್ಪ.
ವಗ್ರು
ವಗುರು.
ವಂಚ್ನೆ
ಮೋಸ, ಕಪಟಿ, ದ್ರೋಹ.
ವಜನ್ನು