Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಶಕುನ
ನಿಮಿತ್ತ.
ಶಂಕೆ
ಸಂದೇಹ, ಸಂಶಯ.
ಶಂಖ
ಸಮುದ್ರ ತಡಿಯಲ್ಲಿ ಸಿಗುವ ದೊಡ್ಡ ಕಪ್ಪೆ ಚಿಪ್ಪು, ಪೂಜಾ ಸಮಯದಲ್ಲಿ ಊದುವ ಪೂಜಾ ಸಾಮಗ್ರಿ.
ಶಂಖದ ಹೂ
ಶಂಖದಾಳ, ಗಿರಿಕರ್ಣಿಕೆ.
ಶನ್ವಾರ
ಶನಿವಾರ, ವಾರದ ಏಳು ದಿನಗಳಲ್ಲಿ ಒಂದು.
ಶರಬತ್ತು
ಪಾನಕ, ಹಣ್ಣಿನ ರಸದ ಪಾನೀಯ.
ಶರಾಬು
ಸಾರಾಯಿ, ಮಧ್ಯ
ಶಲ್ಲೆ
ಉತ್ತರೀಯ, ಶಾಲು.
ಶವ
ಹೆಣ.
ಶಾಖ
ಬಿಸಿ, ಉಷ್ಣ.
ಶಾಟ
ಶ್ಯಪ್ಪ, ಮರ್ಮಾಂಗದ ಮೇಲಿನ ಕೂದಲು.
ಶಾಟತರಿ
ಕೆಲಸಕ್ಕೆ ಬಾರದ/ಉಪಯೋಗವಿಲ್ಲದ ಕೆಲಸ ಮಾಡುವುದು.(ಅಲಂ)
ಶಾನುಭೋಗ
ಗ್ರಾಮದ ಲೆಕ್ಕಾಧಿಕಾರಿ.
ಶಾಪ
ನಿಂದೆ, ಬಯ್ಗಳು.
ಶಾವಿಗೆ
ಶಾವ್ಗೆ, ಒಂದು ಬಗೆಯ ತಿನಿಸು.
ಶಾವ್ಗಿ ಒಳ್ಳು
ಶಾವಿಗೆ ಮಾಡುವ ಮರದ ಒರಳು.
ಶಾವ್ಗೆ
ಶಾವಿಗೆ.
ಶಾಸ್ತಿ
ಶಿಕ್ಷೆ, ದಂಡನೆ.
ಶಿಕಾರಿ
ಬೇಟೆ, ಬೇಟೆಯ ಪ್ರಾಣಿ.
ಶಿಖಂಡಿ