भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892627Next >

ಸಂಕ

ಸೇತುವೆ, ಸಾರ.

ಸಂಕ್ಟ

ಸಂಗ್ಟ, ದುಃಖ, ಸಂಕಷ್ಟ.

ಸಂಕೆ

ಶಂಕೆ, ಅನುಮಾನ.

ಸಂಖ

ಶಂಖ, ಒಂದು ಪೂಜಾ ಸಾಮಾಗ್ರಿ, ಪಾಂಚಜನ್ಯ.

ಸಂಗ್ಟ

ಸಂಕ್ಟ

ಸಂಗ್ಡ

ಸಂಗಡ, ಜೊತೆಗೆ.

ಸಂಗ್ತಿ

ಸಂಗತಿ, ವಿಚಾರ.

ಸಂಚ್ ಕಾರ

ಕುತ್ತು, ಆಪತ್ತು, ಕೇಡು, ಮುಂಗಡವಾಗಿ ಕೊಟ್ಟಿದ್ದನ್ನು ತಿರುಗಿ ಕೊಡದೆ ಮೋಸ ಮಾಡುವುದು.

ಸಂಜ್ಞೆ

ಸನ್ನೆ, ಕೈ/ಕಣ್ಣಿಂದಲೇ ತಿಳಿಸಿ ಹೇಳುವುದು.

ಸಂಡ್ಗೆ

ಒಣಗಿಸಿದ ಮಾಂಸ.

ಸಂತೆ

ವಾರಕ್ಕೊಮ್ಮೆ ಸೇರುವ ಮಾರುಕಟ್ಟೆ, ನಿರ್ದಿಷ್ಟ ಸಮಯದಲ್ಲಿ ಒಂದೇ ಜಾಗದಲ್ಲಿ ನಡೆಯುವ ವ್ಯಾಪಾರ ವಹಿವಾಟು.

ಸಂತೋಸ

ಸಂತೋಷ, ಗೆಲುವು, ಖುಷಿ.

ಸಂದಿ

ಮೂಲೆ, ಬಿರುಕು.

ಸಂದಿಗೊಂದಿ

ಮೂಲೆಮೂಲೆಗಳು.

ಸಂದಿನೂವು

ಕೀಲುಗಳಲ್ಲಿ ನೋವು.

ಸಂದು

ಕೀಲು, ಗೆಣ್ಣು.

ಸಂದು

ಸಂದಿ.

ಸಂದೂಕ

ಪೆಟ್ಟಿಗೆ, ಪಿಠಾರಿ.

ಸಂಪಾದ್ನೆ

ಸಂಪಾದನೆ, ಗಳಿಸಿದ್ದು, ಗಳಿಕೆ, ವರಮಾನ.

ಸಂಪಾಲು

ಸಮಪಾಲು, ಸಮಭಾಗ.
< previous1234567892627Next >

Search Dictionaries

Loading Results

Follow Us :   
  Download Bharatavani App
  Bharatavani Windows App