Kumbarike Vrutti Padakosha (Kannada-Kannada)(KASAPA)
Kannada Sahitya Parishattu (KASAPA)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
ವಡಕಗಡಿಗೆ
(ನಾ)
ತೂತು ಬಿದ್ದ ಸೀಳಿದ ಗಡಿಗೆ, ನೋಡಿ ಒಡಕ.
ವಾಡೆ
(ನಾ)
ದೊಡ್ಡ ಪ್ರಮಾಣದ ಗುಡಾಣ. ಕೋಳಿ ಮೊಟ್ಟೆ ಆಕಾರದ ಪಾತ್ರೆ. ರೈತರು ಇದನ್ನು ಜೋಳ, ರಾಗಿ ಭತ್ತ ಮೊದಲಾದ ಧಾನ್ಯಗಳನ್ನು ಶೇಖರಿಸಿಡಲು ಇದನ್ನು ಬಳಸುವರು. ಇದನ್ನು ಕೆಲವೆಡೆ ಗೋಡೆಯಲ್ಲಿ ಹುದುಗಿಸಿಡುವರು. ಇವುಗಳಲ್ಲಿ ಸಣ್ಣ ಮತ್ತು ದೊಡ್ಡ ಗಾತ್ರದ ವಾಡೆಗಳು ಇರುತ್ತವೆ. ವಾಡೆಯಲ್ಲಿ ಧಾನ್ಯ ತುಂಬಿ ಅದರ ಬಾಯಿಯನ್ನು ಹುಲ್ಲು ಮತ್ತು ಬೇವಿನ ತಪ್ಪಲನ್ನು ಹಾಕಿ ಮುಚ್ಚಿ ಅದಕ್ಕೆ ಮಣ್ಣು ಮೆತ್ತಿ ಸಗಣಿಯಿಂದ ಸಾರಿಸುವರು. ನುಸಿ ಮತ್ತು ಹುಳುಗಳು ಧಾನ್ಯಗಳನ್ನು ನಾಶ ಮಾಡದಂತೆ ಸಂರಕ್ಷಿಸಿ ಇಡುವ ಕ್ರಮವಿದು. ವಾಡೆಗೆ ಕೆಲವು ಕಡೆ ಅಳಗ ಎನ್ನುವರು. ವಾಡೆಯಲ್ಲಿಯ ಧಾನ್ಯಗಳನ್ನು ತೆಗೆದುಕೊಳ್ಳಲು ವಾಡೆ ಕೆಳಭಾಗದಲ್ಲಿ ಒಂದು ರಂಧ್ರ ಮಾಡಲಾಗಿರುತ್ತದೆ. ಕೈಹಗ್ಗ ಸೇರಿಸಿದ ಟೆಂಗಿನ ಕರಟವನ್ನು ಧಾನ್ಯ ತುಂಬುವ ಮೊದಲು ವಾಡೆಗೆ ಸೇರಿಸಿ ಅಳವಡಿಸಲಾಗಿರುವುದು. ಧಾನ್ಯ ಹೊರಕ್ಕೆ ತೆಗೆಯಬೇಕಾದಾಗ ಕರಟವನ್ನು ಹಿಂದಕ್ಕೆ ಸ್ವಲ್ಪ ತಳ್ಳಿದರೆ ಧಾನ್ಯ ಹೊರಕ್ಕೆ ಬರುವುದು. ಬೇಕಾದಷ್ಟನ್ನು ತೆಗೆದುಕೊಂಡ ಮೇಲೆ ಹಗ್ಗದಿಂದ ಮುಂದಕ್ಕೆ ಎಳೆದರೆ ರಂಧ್ರ ಮುಚ್ಚಿಕೊಳ್ಳುತ್ತದೆ ಹರಪನಹಳ್ಳಿ ತಾಲೂಕು ಕೂಲಹಳ್ಳಿಯಲ್ಲಿ ಹಿಂದಿನ ಕಾಲದ 22 ಮಣ್ಣಿನ ವಾಡೆಗಳು ದೊರೆತಿವೆ.
ರೈತನ ಮನಿಯಾಗ ವಾಡೆ ಚೆಂದ, ನೇಕಾರ ಮನಿಯಾಗ ಮಗ್ಗ ಚೆಂದ (ಗಾದೆ)
ವಂದರಿ