Kumbarike Vrutti Padakosha (Kannada-Kannada)(KASAPA)
Kannada Sahitya Parishattu (KASAPA)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
ಸಣ್ಣ ಗುಂಡಾಲು
(ನಾ)
ಕಿವಿಹಚ್ಚಿದ ಚಿಕ್ಕ ಚಟಿಗೆ
ಸಬಸರಬಿ
(ನಾ)
ಹಸಿ ಅರಿವೆ, ಮಡಕೆ ತಟ್ಟುವಾಗ ಮಡಿಕೆಗೆ ನೀರು ಹಚ್ಚಲು ಬಳಸುವ ಒದ್ದೆ ಬಟ್ಟೆ, ಕುಂಬಾರಗಿತ್ತಿಯರು ಮಡಕೆ ತೀಡುವಾಗ ಕೂಡ ಇದನ್ನು ಬಳಸುವರು. ತಿಗುರಿಯ ಮೇಲೆ ಮಡಕೆ ಗೇಯುವಾಗ ತಗ್ಗು ಏರುಗಳು, ಹಾಗೂ ಹುಳುಕುಗಳನ್ನು ಸಮಗೊಳಿಸಿ ನುಣುಪು ಮಾಡಲು ಒದ್ದೆ ಅರಿವೆ ಬಳಸಲಾಗುತ್ತದೆ.
ಸಮೇವು
(ನಾ)
ಕಾಲು ದೀಪ, ಸಾಮಾನ್ಯವಾಗಿ 15 ಸೆ.ಮೀ. ನಿಂದ 45 ಸೆಂ.ಮೀ. ಎತ್ತರವಿರುತ್ತದೆ. ಅದರ ಮೇಲೆ ಮಣ್ಣಿನ ಪ್ರಣತಿ ಇಟ್ಟು ದೀಪ ಹಚ್ಚುವರು. ಪಣತಿ ಸಮೇತ ಸಮೇವು ಕೂಡ ಮಾಡುವರು.
ಸರಗಲ್ಲು
(ನಾ)
ಕಡಬು ಬೇಯಿಸುವ ಮಣ್ಣಿನ ಪಾತ್ರೆ, ಇಡ್ಲಿ ಪಾತ್ರೆ ಹಾಗೆ ಇರುವುದು, ಮಲೆನಾಡಿನ ಜನರು ಇದನ್ನು ಹೆಚ್ಚಾಗಿ ಬಳಸುವರು. ಈ ಪಾತ್ರೆಯಲ್ಲಿ ಎರಡು ಅರೆಗಳಿದ್ದು, ಮೇಲಿನ ಭಾಗದಲ್ಲಿ ಕಡಬು ಇಡುವರು ತಳಭಾಗದಲ್ಲಿ ರಂಧ್ರದ ಮೂಲಕ ನೀರು ತುಂಬುವರು, ಮೇಲ್ಭಾಗದಲ್ಲಿ ಮುಚ್ಚಳ ಮುಚ್ಚಿರುವುದರಿಂದ ನೀರಿನ ಆವಿಯಲ್ಲಿ ಕಡಬುಗಳು ಬೇಯುವವು.
ಸರಬು
(ನಾ)
ಮಡಿಕೆ ಸುಡುವ ಉರುವಲು, ನಾನಾ ತರದ ಗಿಡ – ಗಂಟಿಗಳಿಂದ ಇದನ್ನು ಸಂಗ್ರಹಿಸುವರು.
ಸರಬೆ
(ನಾ)
ಮಡಕೆ ತುಂಬಿದ ಗಾಡಿಯ ಎರಡು ಕಡೆಯ ಬಿದುರು ತಟ್ಟೆಗಳಿಗೆ ಉದ್ದನೆಯ ಹಗ್ಗದ ಸಹಾಯದಿಂದ ಕಟ್ಟಿದ ಗಡಿಗೆಗಳ ಸಾಲು. ಮಡಿಕೆಗಳನ್ನು ಕಟ್ಟುವ ಹಗ್ಗ ಕ್ಕೂ ಕೂಡ ಸರಬೆ ಎನ್ನುವರು.
ಸಲಕಿ
(ನಾ)
ಕುಂಬಾರ ಗುಂಡಿಯಿಂದ ಮಣ್ಣನ್ನು ತುಂಬಲು, ಆವಿಗೆ ಬೂದಿ ಎಳೆಯಲು, ಹೀಗೆ ಬೇರೆ ಬೇರೆ ಕಾರ್ಯಗಳಿಗೆ ಬಳಸುವರು.
ಸಾಣಿಗೆ
(ನಾ)
ಜರಡಿ, ಮರಳು, ಬೂದಿಯನ್ನು ಸಾಣಿಸಲು ಕುಂಬಾರರು ಬಳಸುವರು.
ಸ್ವಾರಿಗಾಡಿ
(ನಾ)
ಮಾರಾಟಕ್ಕೆ ಕೊಂಡೊಯ್ಯಲು ಮಡಕೆಗಳನ್ನು ತುಂಬಿಟ್ಟ ಎತ್ತಿನಗಾಡಿ ಬಳ್ಳಾರಿ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. ಗಡಿಗೆಗಾಡಿ, ಮಡಕೆಗಾಡಿ ಎಂತಲೂ ಕರೆಯುವರು.
ಸೀಳು
(ಕ್ರಿ)
ಎರಡುಭಾಗ ಮಾಡು ಅರೆ ಹಸಿ ಇದ್ದಾಗ ಹಂಚನ್ನು ಎರಡು ಭಾಗ ಮಾಡುವರು. ಸೀಳು ಮುಚ್ಚುವರು. ಸುಟ್ಟ ನಂತರ ಹೋಳು ಮಾಡಲು ಅನುಕೂಲವಾಗುವದು.
ಸುಣ್ಣದ ಬಾನಿ
(ನಾ)
ಕರಿಬಾನಿ, ಅಗಲಬಾಯಿಯ ಮಣ್ಣಿನ ಪಾತ್ರೆ. ಇದರಲ್ಲಿ ಸುಣ್ಣದ ನೀರನ್ನು ಹಾಕಿ ಚರ್ಮವನ್ನು ನೆನೆಸಿ ಹದ ಮಾಡಲು ಬಳಸುವರು.
ಸುತ್ತು
(ಕ್ರಿ)
ಹರವೆ – ರಂಜಣಿಗೆಯಂತೆ ದೊಡ್ಡ ಪಾತ್ರೆಯನ್ನು ಮಾಡುವಾಗ: ಕೆಳಭಾಗದ ಮಣ್ಣನ್ನು ತೆಗೆದು ಮಡಿಕೆ ಸುತ್ತಲೂ ಮೆತ್ತುವುದಕ್ಕೆ ಸುತ್ತು ಹಚ್ಚು ಎನ್ನುವರು.
ಸುರಾಯಿ
(ನಾ)
ಉದ್ದ ಕುತ್ತಿಗೆಯ ಹೂಜೆ
ಸುರಿಗಡಗಿ
(ನಾ)
ಹೆಂಡದ ಗಡಿಗೆ, ಮಲೆನಾಡಿನಲ್ಲಿ ಸುಬ್ಬಿ ಎನ್ನುವ ಪದ ಪ್ರಯೋಗದಲ್ಲಿದೆ.
ಸೆದೆಮುಚ್ಚುವುದು
(ಕ್ರಿ)
ಆವಿಗೆಯಲ್ಲಿ ಮಡಕೆಗಳನ್ನು ಸುಡಲು ಜೋಡಿಸಿಟ್ಟ ಮೇಲೆ ಆವಿಗೆಯ ಮೇಲ್ಬಾಗಕ್ಕೆ ಸೊಪ್ಪುಸೆದೆ ಹಾಕಿ ಮುಚ್ಚುವುದು. ನಂತರ ಅದರ ಮೇಲೆ ಒಣ ಮಸಿ ಮುಚ್ಚುವರು.
ಸೊಡ್ಲು
(ನಾ)
ಪಣತಿ, ಹಣತಿ
ಸೊಳ
(ನಾ)
ಸುಳ, ಸಲಪ, ಕೈಮಣಿ, ಮಡಿಕೆ ಬಡಿಯುವ ಕಟ್ಟಿಗೆಯ ಸಾಧನ, ತಟ್ಟುವ ಹಲಗೆ, ಕುಂಬಾರಿಕೆಯಲ್ಲಿ ಬಳಸುವ ಮುಖ್ಯ ಸಾಧನ, ಇದನ್ನು ಬೇವು, ಜಾಲಿ, ತೇಗಿನ ಮರದ ಹಲಗೆಯಿಂದ ತಯಾರಿಸುವರು ಸೊಳಗಳಲ್ಲಿ ಕುದುಮು ಮಾಡುವ ಸೊಳ, ಗಟ್ಟಿಸುವ ಸೊಳ, ನುಣಿಸುವ ಸೊಳ, ಅಚ್ಚು ಹಾಕುವ ಸೊಳ ಎಂದು ವಿವಿಧ ಪ್ರಕಾರಗಳಿವೆ.
ಸೋರೆ
(ನಾ)
ಸ್ವಾರಿ, ಮುದ್ದಿಸ್ವಾರಿ, ಮಡಕೆ, ಗಡಿಗೆ, ಈ ಪದ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿದೆ.
ಅಡುವ ಸೋರೆಕೊಟ್ಟು ಬಾಯ್ಗೆ ಬದ್ನಿಕಾಯಿ ಇಟಗಂಡ್ಲು (ಗಾದೆ)
ಹಸ್ತನಾಯಿ ಮುದ್ದಿಸ್ವಾರಿ ಮೂಸಿನೋಡ್ತಂತ (ಗಾದೆ)
ಸೋಸು