भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

ay

ಭಾವಸೂಚಕ ಅವ್ಯಯ

ಪದಗುಚ್ಛ

ಅಯ್ಯೋ! ay me! ಅಯ್ಯೋ ನನ್ನ! (ವ್ಯಸನ, ದುಃಖ ಯಾ ಅನುಕಂಪವನ್ನು ಸೂಚಿಸುವ ಉದ್ಗಾರ).

ayah

ನಾಮವಾಚಕ

ಆಯ; ದಾದಿ.

ayatollah

ನಾಮವಾಚಕ

ಅಯಾತುಲ್ಲ; ಇರಾನಿನ ’ಷಿಯಾ’ ಧಾರ್ಮಿಕ ಪಂಗಡದ ನಾಯಕ.

aye

ಕ್ರಿಯಾವಿಶೇಷಣ

= 1ay.

aye

ನಾಮವಾಚಕ

= 2ay.

aye

ಕ್ರಿಯಾವಿಶೇಷಣ

ಪದಗುಚ್ಛ

(ಪ್ರಾಚೀನ ಪ್ರಯೋಗ) ಯಾವಾಗಲೂ; ಸದಾ; ಸರ್ವದಾ; ಎಲ್ಲ ಸಂದರ್ಭಗಳಲ್ಲೂ.for aye ಎಂದೆಂದಿಗೂ; ಸದಾಕಾಲಕ್ಕೂ.

aye-aye

ನಾಮವಾಚಕ

ಐಐ; ಮಡಗಾಸ್ಕರ್‍ ದ್ವೀಪದ ಕಾಡುಪಾಪ.

Aylesbury

ನಾಮವಾಚಕ

ಏಲ್‍’ಬರಿ; ಸಾಕಿದ ಬಾತುಗಳ ಜಾತಿ ಯಾ ಈ ಜಾತಿಯ ಬಾತುಕೋಳಿ.

Ayrshire

ನಾಮವಾಚಕ

ಏರ್ಷರ್‍; ಮುಖ್ಯವಾಗಿ ಬಿಳಿಯ ಹೈನುಗಾರಿಕೆ ದನದ ತಳಿ ಯಾ ಈ ತಳಿಯ ದನ.

AZ

ಸಂಕ್ಷಿಪ್ತ

Arizona.

azalea

ನಾಮವಾಚಕ

ಅಸೇಲಿಯ; ಉತ್ತರಾರ್ಧಗೋಳದ ಹೂಬಿಡುವ ಹೊದರು ಗಿಡಗಳ ಒಂದು ಕುಲ.

azeotrope

ನಾಮವಾಚಕ

ಸ್ಥಿರಕ್ವಾಥಿ; ಸ್ಥಿರಕುದಿಮಿಶ್ರಣ; ಸ್ಥಿರವಾದ ಕುದಿಬಿಂದುವಿನಲ್ಲಿ ಕುದಿದು ಸಂಯೋಜನೆ ವ್ಯತ್ಯಾಸವಾಗದ ಆವಿಯನ್ನು ನೀಡಬಲ್ಲ ದ್ರವಮಿಶ್ರಣ.

azeotropic

ಗುಣವಾಚಕ

ಸ್ಥಿರಕ್ವಾಥಿ; ಸ್ಥಿರಕ್ವಾಥಿಯ ಲಕ್ಷಣಗಳುಳ್ಳ ಯಾ ಅದಕ್ಕೆ ಸಂಬಂಧಿಸಿದ.

Azilian

ಗುಣವಾಚಕ

ಅಸಿಲಿಯದ; ಮಧ್ಯ ಶಿಲಾಯುಗದ.

Azilian

ನಾಮವಾಚಕ

ಅಸಿಲಿಯನ್‍ ಯುಗ; ಯೂರೋಪಿನ ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗಗಳ ನಡುವಣ ಸಂಕ್ರಮಣಕಾಲ.

azimuth

ನಾಮವಾಚಕ

ಪದಗುಚ್ಛ

ದಿಗಂಶ; ಖಮಧ್ಯದಿಂದ ಕ್ಷಿತಿಜಕ್ಕೆ, ಕ್ಷಿತಿಜದಿಂದ ಲಂಬಮಾನವಾಗಿ ವ್ಯಾಪಿಸಿರುವ ಆಕಾಶಧನುಸ್ಸು (ವೃತ್ತಭಾಗ). magnetic azimuth ಕಾಂತೀಯ ದಿಗಂಶ; ದಿಗಂಶವೃತ್ತ ಮತ್ತು ಕಾಂತೀಯ ಮಧ್ಯಾಹ್ನ ರೇಖೆಗಳ ನಡುವೆ ಅಂತಃಛೇದಿಸುವ ಚಾಪ.

azimuth circle

ನಾಮವಾಚಕ

ದಿಗಂಶ ವೃತ್ತ; ಖಮಧ್ಯಬಿಂದು ಹಾಗೂ ಅಧೋಬಿಂದುಗಳೆರಡರ ಮೂಲಕವೂ ಹಾದು ಹೋಗುವ ಮತ್ತು ಕ್ಷಿತಿಜಕ್ಕೆ ಲಂಬವಾಗಿರುವ ವೃತ್ತ.

azimuthal

ಗುಣವಾಚಕ

ದಿಗಂಶೀಯ; ದಿಗಂಶಕ್ಕೆ ಸಂಬಂಧಿಸಿದ.

azimuthally

ಕ್ರಿಯಾವಿಶೇಷಣ

ದಿಗಂಶೀಯವಾಗಿ.

azo-

ಪೂರ್ವಪ್ರತ್ಯಯ

(ರಸಾಯನವಿಜ್ಞಾನ) ಆಸೋ-; ಕಾರ್ಬನ್‍ ಪರಮಾಣುಗಳ ನಡುವೆ ಅಕ್ಕಪಕ್ಕದಲ್ಲಿ ಎರಡು ನೈಟ್ರೊಜನ್‍ ಪರಮಾಣುಗಳಿರುವ ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ.

Search Dictionaries

Loading Results

Follow Us :   
  Download Bharatavani App
  Bharatavani Windows App