भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

backer

ನಾಮವಾಚಕ

(ಯಾವುದೇ ಕೆಲಸ, ಉದ್ಯಮ, ಮೊದಲಾದವುಗಳಲ್ಲಿ) ಸಹಾಯಕ; ಬೆಂಬಲಿಗ; ಒತ್ತಾಸೆ ಕೊಡುವವನು; ಮುಖ್ಯವಾಗಿ ಕುದುರೆಯ ಜೂಜಿನಲ್ಲಿ ಬಾಜಿ ಕಟ್ಟುವವನು.

backet

ನಾಮವಾಚಕ

(ಆಳವಿಲ್ಲದ) ಮರದ – ಬಾನಿ, ತೊಟ್ಟಿ.

backfall

ನಾಮವಾಚಕ

(ಕುಸ್ತಿಯಲ್ಲಿ) ಚಿತ್ತು; ಪೀಟು; ಮಟ್ಟಿಬೆನ್ನು; ಬೆನ್ನು ನೆಲ ತಾಗುವುದು.

backfire

ಅಕರ್ಮಕ ಕ್ರಿಯಾಪದ

 • ಮುನ್‍ಸಿಡಿ; ಅಂತರ್ದಹನ ಯಂತ್ರದ ಉರುಳೆಯಲ್ಲಿ ಇಂಧನವು ಮುಂಚೆಯೇ ಹೊತ್ತಿಕೊಂಡು ಸಿಡಿ.
 • ಮಾರುರಿ ಇಡು; ಪ್ರತಿಬೆಂಕಿ ಹಚ್ಚಿಸು; ಕಾಳ್ಗಿಚ್ಚು ತಡೆಯಲು ಮುಂಭಾಗದಲ್ಲಿ ಮೊದಲೇ ಬೆಂಕಿ ಹಬ್ಬಿಸಿ ಬರಡು ಪ್ರದೇಶವನ್ನುಂಟು ಮಾಡು.
 • (ಬಂದೂಕಿನ ವಿಷಯದಲ್ಲಿ) ಹಿಂಹೊಡೆ; ಹಿಂಹಾರು; ಹಿಂದಕ್ಕೆ ಹೊಡೆ; ಗುಂಡು ನಳಿಗೆಯಿಂದ ಮುಂದಕ್ಕೆ ಹಾರುವ ಬದಲು ಹಿಡಿಯ ಕಡೆಗೆ ಹಾರು.
 • (ಯೋಜನೆ ಮೊದಲಾದವುಗಳ ವಿಷಯದಲ್ಲಿ, ಯೋಜಿಸಿದವನಿಗೇ) ತಿರುಗುಬಾಣವಾಗು; ತನ್ನ ಮೇಲೆಯೇ ತಿರುಗಿಬೀಳು; ನಿರೀಕ್ಷಿಸಿದ, ಉದ್ದೇಶಿಸಿದ ಪರಿಣಾಮಕ್ಕೆ ವಿರುದ್ಧವಾದ ಪರಿಣಾಮವಾಗು.

backfire

ನಾಮವಾಚಕ

 • (ಅಂತರ್ದಹನ ಯಂತ್ರದಲ್ಲಿ ಯಾ ವಾಹನದ ನಿಷ್ಕಾಸ ಕೊಳವೆಯಲ್ಲಿ) ಮುನ್‍ಸಿಡಿತ; ಮುನ್‍ಸ್ಫೋಟ.
 • (ಕಾಳ್ಗಿಚ್ಚಿಗೆ ವಿರುದ್ಧವಾದ) ಮಾರುರಿ; ಪ್ರತಿಬೆಂಕಿ.
 • (ಬಂದೂಕಿನ ವಿಷಯದಲ್ಲಿ, ಗೋಲಿಯ) ಹಿಂಹೊಡೆತ.
 • (ಯೋಜನೆ ಮೊದಲಾದವುಗಳ) ತಿರುಗುಬಾಣ; ವಿರುದ್ಧ ಪರಿಣಾಮ.

backgammon

ನಾಮವಾಚಕ

 • ಬ್ಯಾಕ್‍ಗ್ಯಾಮನ್‍; ಒಂದು ಬಗೆಯ ಪಗಡೆ ಆಟ; ಜೊತೆಗೂಡಿಸಿದ ಎರಡು ಹಾಸುಮಣೆಗಳ ಮೇಲೆ ಕಾಯಿಗಳನ್ನಿಟ್ಟುಕೊಂಡು, ದಾಳಗಳಿಂದ ಇಬ್ಬರು ಆಡುವ ಪಂದ್ಯ.
 • ಆ ಆಟದಲ್ಲಿನ ಮುಮ್ಮಡಿ ಜಯ, ಪೂರ್ಣ ಗೆಲುವು.

backgammon

ಅಕರ್ಮಕ ಕ್ರಿಯಾಪದ

(ಬ್ಯಾಕ್‍ಗ್ಯಾಮನ್‍ ಆಟದಲ್ಲಿ) ಪೂರ್ಣ ಗೆಲ್ಲು; ಮುಮ್ಮಡಿ ಜಯ ಹೊಂದು.

background

ನಾಮವಾಚಕ

 • (ದೃಶ್ಯ, ಚಿತ್ರ ಯಾ ವಿವರಣೆಗಳಿಂದ ಕೂಡಿದ) ಹಿನ್ನೆಲೆ.
 • ಹಿಂಭಾಗ; ಮರೆ; ಅಜ್ಞಾತ ಸ್ಥಿತಿ; ಅಮುಖ್ಯ ಸ್ಥಾನ: he was pushed into the background by the brilliance of his rival ಅವನ ಎದುರಾಳಿಯ ಪ್ರತಿಭೆಯಿಂದ ಅವನು ಮರೆಗೆ, ಅಜ್ಞಾತ ಸ್ಥಿತಿಗೆ ನೂಕಲ್ಪಟ್ಟನು.
 • (ರೂಪಕವಾಗಿ) ಸಾಂಸ್ಕೃತಿಕ ಹಿನ್ನೆಲೆ; (ಪೂರ್ವ) ಸಂಸ್ಕಾರ; ಯಾವುದೇ ವ್ಯಕ್ತಿಯ ಈಗಿನ ಸ್ಥಾನಮಾನಕ್ಕೆ, ನಡತೆಗೆ ಕಾರಣವಾದ ಹುಟ್ಟು, ವಿದ್ಯಾಭ್ಯಾಸ, ಸಂಸ್ಕೃತಿ, ಅನುಭವ ಮೊದಲಾದವು.
 • (ಭೌತವಿಜ್ಞಾನ) ಆಚ್ಛಾದಕ; ಯಾವುದೇ ಘಟನೆಯನ್ನು ಗುರುತಿಸಲು ಅಡಚಣೆ ಒಡ್ಡುವ ವಿದ್ಯಮಾನಗಳು.
 • (ಭೌತವಿಜ್ಞಾನ) ಹಿನ್ನೆಲೆ (ವಿಕಿರಣ); ಕಾಸ್ಮಿಕ್‍ ಕಿರಣಗಳು ಮತ್ತು ಸ್ವಾಭಾವಿಕ ಮೂಲಗಳಿಂದ ಹೊಮ್ಮುತ್ತಿರುವ, ಹೆಚ್ಚು ಕಡಮೆ ಸ್ಥಿರವಾಗಿರುವ ವಿಕಿರಣ.
 • (ರೇಡಿಯೋ) ಹಿಂಬದಿ ಸಂಕೇತ; ರೇಡಿಯೋ ಗ್ರಹಣ, ಮುದ್ರಣ, ಮೊದಲಾದವುಗಳಲ್ಲಿ ಮಧ್ಯೆ ಬಂದು ಇಲೆಕ್ಟ್ರಾನಿಕ್‍ ಸಂಕೇತಗಳನ್ನು ವಿರೂಪಗೊಳಿಸುವ ಯಾ ಅಸ್ತವ್ಯಸ್ತಗೊಳಿಸುವ ಅನಿರೀಕ್ಷಿತ ಸಂಕೇತಗಳು.
 • = background music.

background heating

ನಾಮವಾಚಕ

ಹಿನ್ನೆಲೆ ತಾಪನ; ಕೋಣೆಯು ಬೆಚ್ಚಗಿರುವಂತೆ ಹಿನ್ನೆಲೆಯಲ್ಲಿರುವ ತಾಪಕವು ನಿರಂತರವಾಗಿ ಶಾಖವನ್ನು ಒದಗಿಸುವುದು.

background music

ನಾಮವಾಚಕ

ಹಿನ್ನೆಲೆಸಂಗೀತ:

 • ಸಿನಿಮಾ, ರೇಡಿಯೋ, ದೂರದರ್ಶನ, ನಾಟಕ, ಮೊದಲಾದವುಗಳಲ್ಲಿ ನರ್ತನ ಹಾಡುಗಳನ್ನು ಬಿಟ್ಟು ಯಾವುದೇ ಕ್ರಿಯೆ ಯಾ ಸಂಭಾಷಣೆ ನಡೆಯುವಾಗ, ಆ ಸನ್ನಿವೇಶದ ಭಾವವನ್ನು ಹೆಚ್ಚಿಸಲು, ವಿಶೇಷವಾಗಿ ಅದಕ್ಕಾಗಿಯೇ ರಚಿಸಿದ ಸಂಗೀತ.
 • ರೈಲ್ವೆ ಸ್ಟೇಷನ್‍, ಹೋಟೆಲ್‍, ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಹಿತವಾದ ಹಿನ್ನೆಲೆಯನ್ನೊದಗಿಸಲು ಧ್ವನಿವರ್ಧಕಗಳ ಮೂಲಕ ನೀಡುವ, ಸಾಮಾನ್ಯವಾಗಿ ರೆಕಾರ್ಡ್‍ ಮಾಡಿದ, ಸಂಗೀತ.

background projection

ನಾಮವಾಚಕ

(ಛಾಯಾಚಿತ್ರಣ) ಹಿನ್ನೆಲೆ ಪ್ರಕ್ಷೇಪಣ; ದೂರದರ್ಶನ ಯಾ ಚಲನಚಿತ್ರಗಳ ಸಕ್ರಿಯ ಛಾಯಾಚಿತ್ರಗಳಿಗೆ ಹಿನ್ನೆಲೆಯಾಗಿ ಬಳಸುವ, ಮೊದಲೇ ಹೋಟೋ ತೆಗೆದ ಸ್ತಬ್ಧ ಯಾ ಚಲನಚಿತ್ರಗಳನ್ನು ಅರೆಪಾರದರ್ಶಕ ಪರದೆಯ ಮೇಲೆ ಬಿಡುವುದು.

backhand

ನಾಮವಾಚಕ

 • (ಟೆನಿಸ್‍ ಮೊದಲಾದ ಆಟದಲ್ಲಿ, ಎದುರಾಳಿಯ ದಿಕ್ಕಿನಲ್ಲಿ ಹೊಡೆಯುವ) ಹಿಂಗೈಹೊಡೆತ; ಹೆಡಗೈಯೇಟು.
 • ಹೆಡಗೈ; ಹಿಂಗೈ.
 • ಎಡಬಾಗು, ಹಿಂಬಾಗು – ಬರವಣಿಗೆ.

backhand

ಗುಣವಾಚಕ

(ಟೆನಿಸ್‍ ಮೊದಲಾದ ಆಟದಲ್ಲಿ) ಹಿಂಗೈ ಹೊಡೆತದ; ಹಿಂಗೈಯಿಂದ ಹೊಡೆದ.

backhanded

ಗುಣವಾಚಕ

 • ಹಿಂಗೈ ಹೊಡೆತದ; ಹಿಂಗೈಯಿಂದ ಹೊಡೆದ.
 • ನೇರವಲ್ಲದ; ಸುತ್ತು ಬಳಸಿನ; ಪರೋಕ್ಷ ಯಾ ಸಂದಿಗ್ಧ: backhanded methods ನೇರವಲ್ಲದ, ಸಂದಿಗ್ಧ ವಿಧಾನಗಳು.

backhander

ನಾಮವಾಚಕ

 • ಹಿಂಗೈಏಟು.
 • ನೇರವಲ್ಲದ ದಾಳಿ; ಪರೋಕ್ಷ ದಾಳಿ.
 • ಹೆಚ್ಚುವರಿ ಗುಟುಕು; ಅದೃಷ್ಟಪಾನ; ಸರದಿತಪ್ಪಿ ಮದ್ಯಪಾತ್ರೆ ಪುನಃ ಬಂದಾಗ ಲಭ್ಯವಾಗುವ ಗುಟುಕು.
 • (ಅಶಿಷ್ಟ) ಲಂಚ.

backing

ನಾಮವಾಚಕ

 • (ಯಾವುದೇ ಬಗೆಯ) ನೆರವು; ಸಹಾಯ; ಬೆಂಬಲ.
 • ಸಹಾಯಕರು; ಬೆಂಬಲಿಗರು.
 • ಬೆನ್ನೂರೆ; ಬೆನ್ನಾಧಾರ; ವಸ್ತುವಿಗೆ ಆಧಾರವಾಗಿ ಯಾ ಅದನ್ನು ರಕ್ಷಿಸಲು ಯಾ ಬಲಪಡಿಸಲು, ವಸ್ತುವಿನ ಬೆನ್ನಿಗಾಗಲೀ ಯಾ ಅದರ ಆಧಾರಕ್ಕಾಗಲೀ ಬಳಸುವ ಪದಾರ್ಥ.
 • (ಸಂಗೀತ) ಹಿಮ್ಮೇಳ; ಪಕ್ಕವಾದ್ಯ.

backlash

ನಾಮವಾಚಕ

 • (ಯಂತ್ರದ ಭಾಗಗಳ ನ್ಯೂನತೆ ಯಾ ಆಕಸ್ಮಿಕ ಒತ್ತಡದಿಂದಾಗುವ ಚಕ್ರ ಮೊದಲಾದವುಗಳ) ಹಿನ್ನುರುಳು; ಹಿಂಬಡಿತ.
 • (ಬಲವಾದ ಯಾ ಹಠಾತ್ತಾಗಿ ಆಗುವ, ಮುಖ್ಯವಾಗಿ ರಾಜಕೀಯ ಯಾ ಸಾಮಾಜಿಕ) ಪ್ರತಿಕ್ರಿಯೆ.
 • (ಮೀನು ಹಿಡಿಯುವಾಗ ಆಗುವ) ಗಾಳದ ದಾರದ – ಗಂಟು, ಸಿಕ್ಕು.
 • (ಸಡಿಲವಾದ ಯಾ ಸವೆದುಹೋದ ಯಂತ್ರಭಾಗಗಳಲ್ಲಿನ) ಅತಿಯಾದ ಚಲನೆ.

backlashing

ನಾಮವಾಚಕ

= backlash(1,4).

backless

ಗುಣವಾಚಕ

(ಉಡುಪಿನ ವಿಷಯದಲ್ಲಿ) ಬೆನ್ನಿಲ್ಲದ; ಬೆನ್ನಿನ ಕಡೆ (ಬೆನ್ನು ಕಾಣುವಂತೆ) ಕೆಳಗಿನವರೆಗೂ ಕತ್ತರಿಸಿದ.

backlight

ನಾಮವಾಚಕ

ಹಿಂಬೆಳಕು; ವಸ್ತು, ವ್ಯಕ್ತಿ, ದೃಶ್ಯ, ಮೊದಲಾದವುಗಳ ಮೇಲೆ ಹಿಂಭಾಗದಿಂದ ಯಾ ಲಂಬಕೋನದಲ್ಲಿ ಬೀಳುವ ಬೆಳಕು.

Search Dictionaries

Loading Results

Follow Us :   
  Download Bharatavani App
  Bharatavani Windows App