English-Kannada Nighantu (University of Mysore)
University of Mysore
bye
ನಾಮವಾಚಕ
ಪದಗುಚ್ಛ
leg-by ಲೆಗ್ಬೈ; ಬೋಲ್ಮಾಡಿದ ಚೆಂಡು ಬ್ಯಾಟುಗಾರನ ಕೈಹೊರತು ಅವನ ಮೈಯ ಯಾವುದೇ ಭಾಗಕ್ಕೆ ತಗುಲಿ, ಕ್ಯಾಚ್ ಸಿಕ್ಕದೆ ಮುಂದೆ ಹೋದಾಗ, ಬ್ಯಾಟಿಂಗ್ ಟೀಮಿಗೆ ದೊರೆಯುವ ಹೆಚ್ಚಿನ ರನ್ನು.
- ಗೌಣ, ಅಪ್ರಧಾನ, ಪ್ರಾಸಂಗಿಕ – ವಿಷಯ.
- (ಕ್ರಿಕೆಟ್) ಬೈ; ಬೋಲ್ ಮಾಡಿದ ಚೆಂಡು ಬ್ಯಾಟ್ಸ್ಮನ್ನನ್ನು ಮುಟ್ಟದೆ ಯಾ ಬ್ಯಾಟ್ಸ್ಮನ್ನನಿಂದ ಹೊಡೆಯಲ್ಪಡದೆ ಅವನನ್ನೂ ವಿಕೆಟ್ಕೀಪರನನ್ನೂ ದಾಟಿಹೋದಾಗ, ಬ್ಯಾಟಿಂಗ್ ಟೀಮಿಗೆ ದೊರೆಯುವ ಹೆಚ್ಚಿನ ರನ್ನು.
- (ಗಾಲ್) (ಪಂದ್ಯದ ಕೊನೆಯಲ್ಲಿ ತುಂಬಲಾಗದೆ ನಿಂತ) ಉಳಿಕೆ ಕುಳಿಗಳು; ಶೇಷ ಬದ್ದುಗಳು.
- (ಆಟಗಾರರು ಜೋಡಿಜೋಡಿಯಾಗಿ ಆಡುವ ಆಟಗಳಲ್ಲಿ, ಜೊತೆಯ ಆಟಗಾರ ಸಿಕ್ಕದೆ ಉಳಿದ) ಬೇಜೋಡಿ ಆಟಗಾರ; ಒಂಟಿ ಯಾ ಒಬ್ಬೊಂಟಿ – ಆಟಗಾರ.
- ಒಂಟಿ ಆಟಗಾರನಾಗಿ ಯಾ ಬೇಜೋಡಿ ಆಟಗಾರನಾಗಿ – ಉಳಿಯುವಿಕೆ.
bye
ಗುಣವಾಚಕ
= 3by.
bye
ಭಾವಸೂಚಕ ಅವ್ಯಯ
(ಆಡುಮಾತು) = goodbye.
bye-bye
ನಾಮವಾಚಕ
(ಮಗುವಿನ ಭಾಷೆಯಲ್ಲಿ) ಹಾಸಿಗೆ; ನಿದ್ದೆ; ಜೋಗುಳದಲ್ಲಿ, ಶಿಶುಗೀತೆಗಳಲ್ಲಿ ಬಳಸುವ, ಹಾಸಿಗೆ ಯಾ ನಿದ್ದೆ ಎಂಬರ್ಥದ, ‘ಬೈಬೈ’ ಎಂಬ ಅನುಕರಣ ಶಬ್ದ.
bye-bye
ಭಾವಸೂಚಕ ಅವ್ಯಯ
(ಆಡುಮಾತು) = $^1$goodbye.
bye-law
ನಾಮವಾಚಕ
= by-law.
Byelorussian
ಗುಣವಾಚಕ
= 1Belorussian
Byelorussian
ನಾಮವಾಚಕ
= 1Belorussian.
bygone
ಗುಣವಾಚಕ
- ಕಳೆದು, ಆಗಿ, ಸಂದು – ಹೋದ; ಸಂದ; ಗತ; ಗತಿಸಿದ.
- ಹಿಂದಿನ; ಪ್ರಾಚೀನ; ಪುರಾತನ.
bygone
ನಾಮವಾಚಕ
ನುಡಿಗಟ್ಟು
(ಬಹುವಚನದಲ್ಲಿ) let bygones be bygones ಆಗಿಹೋದದ್ದನ್ನು ಮರೆತು ಒಂದಾಗೋಣ; ಕಳೆದುಹೋದದ್ದನ್ನೆಲ್ಲ ಕ್ಷಮಿಸಿ ಮರೆತುಬಿಡೋಣ.
- ಗತಕಾಲ; ಕಳೆದುಹೋದ ಕಾಲ.
- ಕಳೆದುಹೋದದ್ದು; ಗತಿಸಿದ್ದು; ಗತವಿಷಯ; ಆಗಿಹೋದದ್ದು; ನಡೆದುಹೋದದ್ದು; ಮುಖ್ಯವಾಗಿ ಕಳೆದುಹೋದ ತಪ್ಪುಗಳು.
byname
ನಾಮವಾಚಕ
- ಉಪನಾಮ; ಉಪಾಂಕಿತ; ಒಬ್ಬ ವ್ಯಕ್ತಿಯ ಕುಲನಾಮ ಮೊದಲಾದ ಹೆಸರು.
- (ಮುದ್ದಿಗಾಗಿ ಯಾ ಹಾಸ್ಯಕ್ಕಾಗಿ ಇಟ್ಟ) ಅಡ್ಡ ಹೆಸರು.
bypass
ನಾಮವಾಚಕ
- (ಪ್ರಧಾನ ಕೊಳವಿಯಿಂದ ಅನಿಲ, ಆವಿ, ಮೊದಲಾದವುಗಳ ಸರಬರಾಜು ನಿಂತುಹೋದಾಗ ಬಳಸಿಕೊಳ್ಳಬಹುದಾದ) ಉಪ, ಅಡ್ಡ – ಕೊಳವಿ.
- (ಸಂಚಾರಸಾರಿಗೆ ಹೆಚ್ಚಾಗಿರುವ ಊರೊಳಗಿನ ದಾರಿಗಳನ್ನು ಬಿಟ್ಟು, ಊರನ್ನು ಬಳಸಿಕೊಂಡು ಹೋಗಬಹುದಾದ) ಉಪ – ರಸ್ತೆ, ಮಾರ್ಗ.
bypass
ಸಕರ್ಮಕ ಕ್ರಿಯಾಪದ
- ಉಪಕೊಳವಿಯನ್ನು – ಒದಗಿಸು, ಹೊಂದಿಸು.
- (ಊರಿಗೆ) ಉಪಮಾರ್ಗ ಕಲ್ಪಿಸು.
- (ಊರೊಳಗಿನ ಸಂಚಾರಸಾರಿಗೆಗಳ ಸಂದಣಿಯನ್ನು ತಪ್ಪಿಸಿಕೊಂಡು) ಊರನ್ನು ಬಳಸಿಕೊಂಡು ಹೋಗು.
- (ಸಲಹೆ, ಟೀಕೆ, ಅಪ್ಪಣೆ, ಮೊದಲಾದವನ್ನು) ಕಡೆಗಣಿಸು; ಉಪೇಕ್ಷಿಸು; ನಿರ್ಲಕ್ಷಿಸು.
- (ಯಾವುದೇ ಅಡ್ಡಿ, ಆತಂಕ, ಮೊದಲಾದವನ್ನು) ದಾಟಿಕೊಂಡು, ತಪ್ಪಿಸಿಕೊಂಡು – ಹೋಗು; ಪರಿಹರಿಸಿಕೊಂಡು ಸುಲಭಮಾರ್ಗ ಹಿಡಿ.
bypast
ಗುಣವಾಚಕ
= 1bygone.
bypath
ನಾಮವಾಚಕ
(ರೂಪಕವಾಗಿ ಸಹ) ಅಡ್ಡ – ಹಾದಿ, ದಾರಿ; ಉಪ, ವಿಜನ – ಮಾರ್ಗ; ಜನ ಹೆಚ್ಚು ಓಡಾಡದ ಯಾ ವಿರಳವಾಗಿ ಬಳಸುವ – ಹಾದಿ, ದಾರಿ, ಮಾರ್ಗ: bypaths of history ಇತಿಹಾಸದ – ಸಂದಿಗೊಂದಿಗಳು, ಅಪ್ರಸಿದ್ಧ ವಿಭಾಗಗಳು.
byre
ನಾಮವಾಚಕ
ಕೊಟ್ಟಿಗೆ; ಗೋಶಾಲೆ.
Byronic
ಗುಣವಾಚಕ
- ಬೈರನೀಯ; ಬೈರನ್ನನ; 19ನೇ ಶತಮಾನದ ಆಂಗ್ಲಕವಿ ಬೈರನ್ನನ ಸ್ವಭಾವಕ್ಕೆ ಸಂಬಂಧಿಸಿದ: Byronic pose ಬೈರನ್ನನನ್ನು ಹೋಲುವ ಸೋಗು.
- ಬೈರನೀಯ; ಬೈರನ್ನನ ಕಾವ್ಯಲಕ್ಷಣಗುಳುಳ್ಳ: Byronic irony ಬೈರನೀಯ ವ್ಯಂಗ್ಯ.
byssinosis
ನಾಮವಾಚಕ
(ರೋಗಶಾಸ್ತ್ರ) ಅರಳೆಬೇನೆ; ಹತ್ತಿರೋಗ; ಕಾರ್ಪಾಸರೋಗ; ಕಾರ್ಖಾನೆಗಳಲ್ಲಿ ಬಹಳ ಕಾಲ ಹತ್ತಿ ದೂಳನ್ನು ಕುಡಿಯುವುದರಿಂದ ಶ್ವಾಸಕೋಶಗಳಿಗೆ ತಗಲುವ, ಒಂದು ಬಗೆಯ ರೋಗ.
byssus
ನಾಮವಾಚಕ
- (ಜೀವವಿಜ್ಞಾನ) ಪಟ್ಟೆನವಿರು; ಕೆಲವು ಚಿಪ್ಪುಪ್ರಾಣಿಗಳು ಬಂಡೆಗೆ ಹತ್ತಿಕೊಳ್ಳುವುದಕ್ಕಾಗಿ ಏರ್ಪಟ್ಟಿರುವ, ಚಿಪ್ಪಿನ ಮೇಲಿನ ರೇಷ್ಮೆಯಂಥ ನವಿರುಪುಂಜ.
- (ಚರಿತ್ರೆ) (ಪ್ರಾಚೀನ ಕಾಲದ, ಹತ್ತಿಯ ಯಾ ರೇಷ್ಮೆಯ) ನವಿರು ಬಟ್ಟೆ.
byte
ನಾಮವಾಚಕ
ಬೈಟು; ಕಂಪ್ಯೂಟರ್ನಲ್ಲಿಯ ದ್ವಿಮಾನಾಂಕಗಳ ತಂಡ.