भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

babble

ನಾಮವಾಚಕ

  • ತೊದಲು (ನುಡಿ).
  • ಗೊಡ್ಡು, ಕಾಡು – ಹರಟೆ; ಗಳಪು.
  • ಅರ್ಥ ಹೀನವಾದ, ದಡ್ಡ, ಕೆಲಸಕ್ಕೆ ಬಾರದ – ಮಾತು.
  • (ನೀರು ಮೊದಲಾದವುಗಳ) ಮರ್ಮರ; ಗುಳುಗುಳು ಸದ್ದು.
  • (ಟೆಲಿಹೋನ್‍) ಮರ್ಮರ; (ಹಲವಾರು ಬೇರೆ ಬೇರೆ ಮಂಡಲಗಳಲ್ಲಿ ಸಂಭಾಷಣೆಗಳಾಗುತ್ತಿರುವುದರಿಂದ) ಯಾವುದೇ ಒಂದು ದೂರವಾಣಿ ಸಂಭಾಷಣೆಯ ಮಧ್ಯೆ ಕೇಳಿಬರುವ ಅನಾವಶ್ಯಕ ಗದ್ದಲ, ಮರ್ಮರಶಬ್ದ.

babblement

ನಾಮವಾಚಕ

= 2babble(1, 2).

babbler

ನಾಮವಾಚಕ

  • ಹರಟೆಮಲ್ಲ.
  • ಒಡಕುಬಾಯಿ; ಬಾಯಿ ಭದ್ರವಿಲ್ಲದವ; ಹರಕು ಬಾಯಿಯವ; ಗುಟ್ಟನ್ನು ಹೇಳಿಬಿಡುವವ.
  • ಹರಟೆಹಕ್ಕಿ; ಒದರಬಡುಕ, ಜೋರಾಗಿ ಚಿಲಿಪಿಲಿಗುಟ್ಟುವ, ಗುಬ್ಬಚ್ಚಿಯಂಥ ಪಕ್ಷಿ.
  • ಅತಿಯಾಗಿ ಬೊಗಳುವ ಬೇಟೆನಾಯಿ.

babbling

ನಾಮವಾಚಕ

  • ಗೊಡ್ಡುಹರಟೆ; ಅತಿಮಾತು; ಅಸಂಬದ್ಧ ಪ್ರಲಾಪ; ಕೆಲಸಕ್ಕೆ ಬಾರದ ಮಾತು.
  • (ಹಸುಗೂಸುಗಳ) ತೊದಲುನುಡಿ; ಮಕ್ಕಳ ಆಲಾಪ.

babbling

ಗುಣವಾಚಕ

  • ಹರಟುವ; ಕೆಲಸಕ್ಕೆ ಬಾರದ ಮಾತಾಡುವ.
  • (ಹಸುಗೂಸುಗಳ ವಿಷಯದಲ್ಲಿ) ತೊದಲು ನುಡಿಯುವ.

babe

ನಾಮವಾಚಕ

ಪದಗುಚ್ಛ

ನುಡಿಗಟ್ಟು

babes and sucklings ಹಸುಗೂಸುಗಳು; ಕಂದಮ್ಮಗಳು; ಎಳೆ ಮರಿಗಳು.

  • (ಕಾವ್ಯಪ್ರಯೋಗ) ಹಸುಳೆ; ಹಸುಗೂಸು; ಎಳೆಗೂಸು; ಹೂ ಮಗು; ಎಳೆಮಗು; ಶಿಶು.
  • ಮುಗ್ಧ; ನಿಷ್ಕಪಟಿ; ಏನೂ ಅರಿಯದವ.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ತರುಣಿ; ಯುವತಿ.

babel

ನಾಮವಾಚಕ

ಪದಗುಚ್ಛ

tower of Babel = babel(1, 3).

  • ಬೇಬಲ್‍; ಪ್ರಾಚೀನ ಶಿನಾರ್‍ ನಗರದ ಗೋಪುರ; ಸ್ವರ್ಗ ಮುಟ್ಟಲು ಕಟ್ಟಿದ ದೊಡ್ಡ ಗೋಪುರ.
  • ಬಹಳ ಎತ್ತರದ ಕಟ್ಟಡ; ಅತ್ಯುನ್ನತ ಪ್ರಾಸಾದ.
  • ಗಾಳಿಗೋಪುರ; ಕನಸಿನ ಗೋಪುರ; ಹೇರಾಸೆಯ ಯೋಜನೆ.
  • ಗೊಂದಲದ ದೃಶ್ಯ, ಸ್ಥಳ.
  • (ಬೇರೆಬೇರೆ ಧ್ವನಿ, ಭಾವನೆ, ಭಾಷೆಗಳ) ಗೊಂದಲ; ಗಲಿಬಿಲಿ.
  • ಗೊಂದಲಕೂಟ; ಗಲಿಬಿಲಿ ಸಭೆ; ಗುಜುಗುಜು ಸಂತೆ.
  • ಗುಲ್ಲು; ಅರ್ಥಹೀನ – ಗದ್ದಲ, ಗಲಿಬಿಲಿ.

babelise

ಸಕರ್ಮಕ ಕ್ರಿಯಾಪದ

(ಹಲವಾರು ಭಾಷೆಗಳನ್ನು ಮಾತನಾಡುವುದು, ಮೊದಲಾದವುಗಳಿಂದ) ಗೊಂದಲವುಂಟುಮಾಡು; ಗಲಿಬಿಲಿಗೊಳಿಸು.

babelism

ನಾಮವಾಚಕ

(ಭಾಷೆ, ಭಾವನೆ, ಮೊದಲಾದವುಗಳ) ಗೊಂದಲ; ಗಲಿಬಿಲಿ.

babelize

ಸಕರ್ಮಕ ಕ್ರಿಯಾಪದ

= babelise.

Babi

ನಾಮವಾಚಕ

  • ಬಾಬಿ – ಪಂಥಿ, ಅನುಯಾಯಿ; 1844ರಲ್ಲಿ ಪರ್ಷಿಯದಲ್ಲಿ ಸ್ಥಾಪಿತವಾದ ಒಂದು ಧಾರ್ಮಿಕ ಪಂಥದ ಸದಸ್ಯ.
  • ಬಾಬಿಪಂಥ.
  • = Baha’i.

babir(o)ussa

ನಾಮವಾಚಕ

ಬ್ಯಾಬಿರೂಸ: ಮೇಲಕ್ಕೆ ತಿರುಗಿಕೊಂಡಿರುವ ಕೊಂಬುಗಳಂಥ ಕೋರೆದಾಡೆಗಳುಳ್ಳ, ಜಾವ, ಮಲಯ, ಸುಮಾತ್ರ, ಮೊದಲಾದ ಆಗ್ನೇಯ ಏಷ್ಯಾದ ಕಾಡುಹಂದಿ.

babirusa

ನಾಮವಾಚಕ

= babir(o)ussa.

Babism

ನಾಮವಾಚಕ

ಬಾಬಿ – ಪಂಥ, ಧರ್ಮ; 1844ರಲ್ಲಿ ಸ್ಥಾಪಿತವಾದ, ಆಧ್ಯಾತ್ಮಿಕ ಹಾಗೂ ವಿಶ್ವದೇವೈಕ್ಯತೆಯನ್ನು ನಂಬುವ, ಪರ್ಷಿಯದ ಒಂದು ಧಾರ್ಮಿಕ ಪಂಥ.

Babist

ನಾಮವಾಚಕ

ಬಾಬಿ – ಪಂಥಿ, ಅನುಯಾಯಿ; ಬಾಬಿ ಧರ್ಮವನ್ನು ಅನುಸರಿಸುವವನು.

baboo

ನಾಮವಾಚಕ

= babu.

baboon

ನಾಮವಾಚಕ

  • ಬಬೂನು; ಆಫ್ರಿಕ ಮತ್ತು ಅರೇಬಿಯಗಳಲ್ಲಿರುವ, ನಾಯಿಯಂಥ ಮೂತಿಯೂ ಗಿಡ್ಡಬಾಲವೂ ಇರುವ ಹೆಗ್ಗಪಿ. Figure: baboon
  • (ಅಶಿಷ್ಟ) ಗಡವ ಯಾ ಕುರೂಪಿ ಮನುಷ್ಯ ಯಾ ಶತ ಒರಟ; ಮುಖ್ಯವಾಗಿ ಒಳ್ಳೆಯ ದೇಹದಾರ್ಢ್ಯವೂ ಕಡಮೆ ಬುದ್ಧಿಯೂ ಇದ್ದು, ನೋಡಲು ಕಾಡುಮೃಗದಂತೆ ಇರುವವನು.

baboonery

ನಾಮವಾಚಕ

  • (ನಡವಳಿಕೆ, ಮನೋವೃತ್ತಿ, ಕೆಲಸ, ಮೊದಲಾದವುಗಳಲ್ಲಿ) ಬಬೂನಿಕೆ; ಪಶುತ್ವ; ಶತ ಒರಟುತನ.
  • ಬಬೂನ್‍ ಹಿಂಡು.

babouche

ನಾಮವಾಚಕ

ಚಪ್ಪಲಿ; ತುರ್ಕಿಯ ಯಾ ಪೂರ್ವದೇಶದ, ಹಿಮ್ಮಡಿಯಿಲ್ಲದ ಪಾಪಾಸು.

babu

ನಾಮವಾಚಕ

ನುಡಿಗಟ್ಟು

babu English (ಹೀನಾರ್ಥಕ ಪ್ರಯೋಗ) (ಆಲಂಕಾರಿಕ ಹಾಗೂ ಸ್ವಲ್ಪಮಟ್ಟಿಗೆ ತಪ್ಪು ನುಡಿಗಟ್ಟುಳ್ಳ) ಇಂಡಿಯದವರ ಇಂಗ್ಲಿಷ್‍.

  • ಬಾಬು; ಶ್ರೀಮಾನ್‍, ಶ್ರೀಯುತ ಎಂಬಂತಹ ಉತ್ತರ ಇಂಡಿಯದ ಗೌರವಸೂಚಕ ಸಂಬೋಧನೆ.
  • (ಮುಖ್ಯವಾಗಿ ಬಂಗಾಳಿ) ಬಾಬು; ಹಿಂದೂ ಗೌರವಸ್ಥ.
  • (ಚರಿತ್ರೆ) (ಹೀನಾರ್ಥಕ ಪ್ರಯೋಗ) ಇಂಗ್ಲಿಷ್‍ ಬಲ್ಲ ಹಿಂದೂ ಗುಮಾಸ್ತೆ, ಕಾರಕೂನ.

Search Dictionaries

Loading Results

Follow Us :   
  Download Bharatavani App
  Bharatavani Windows App