भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

babul

ನಾಮವಾಚಕ

  • (ಇಂಡಿಯ ಮತ್ತು ಅರೇಬಿಯದ, ಗೋಂದನ್ನು ಕೊಡುವ, ಮುಳ್ಳುಗಳಿಂದ ಕೂಡಿದ) ಗೊಬ್ಬಳಿ; ಜಾಲಿ (ಮರ).
  • ಗೊಬ್ಬಳಿ – ಗೋಂದು, ತೊಗಟೆ, ಚಕ್ಕೆ, ಮೊದಲಾದವು.

babushka

ನಾಮವಾಚಕ

(ಹೆಂಗಸರು ಬಳಸುವ, ಸಾಮಾನ್ಯವಾಗಿ ತ್ರಿಕೋಣಾಕಾರದ, ಗಲ್ಲದ ಕೆಳಗೆ ಗಂಟು ಹಾಕುವಂಥ) ಸ್ಕಾರ್ಹ್‍; ತಲೆಬಟ್ಟೆ; ಶಿರವಸ್ತ್ರ.

baby

ನಾಮವಾಚಕ

ನುಡಿಗಟ್ಟು

  • (ಮುಖ್ಯವಾಗಿ ನಡೆಯಲು ಬಾರದ) ಎಳೆ ಮಗು; ಹಸುಳೆ; ಹಸುಗೂಸು; ಶಿಶು.
  • ಎಳಸು; ಬಾಲಿಶ; ಅಪ್ರಬುದ್ಧ.
  • ಚಿಕ್ಕ, ಪುಟ್ಟ – ವಸ್ತು.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ನಲ್ಲೆ; ಪ್ರಿಯೆ; ರಮಣಿ; ಪ್ರಿಯತಮೆ; ಪ್ರೇಯಸಿ.
  • (ಯಾವುದೇ ಪ್ರಾಣಿಯ) (ಪುಟ್ಟ) ಮರಿ.
  • (ಕುಟುಂಬದ ಯಾ ಗುಂಪಿನ) ಕಿರಿಯ; ಎಲ್ಲರಿಗಿಂತ ಚಿಕ್ಕವನು.
  • (ಅಶಿಷ್ಟ) ವ್ಯಕ್ತಿ ಯಾ ವಸ್ತು.

baby

ಗುಣವಾಚಕ

  • ಮಗುವಿನ; ಶಿಶು(ವಿನ); ಮಗುವಿಗಾಗಿ ಇರುವ ಯಾ ಮಾಡಿದ: baby food ಶಿಶು ಆಹಾರ.
  • ಕೂಸಿನಂಥ; ಮಗುವಿನಂಥ; ಶಿಶುಸದೃಶ.
  • ಚಿಕ್ಕ; ಪುಟ್ಟ; ಪುಟಾಣಿ: baby car ಪುಟ್ಟ ಕಾರು.
  • ಬಾಲಿಶವಾದ.

baby

ಸಕರ್ಮಕ ಕ್ರಿಯಾಪದ

(ಯಾರನ್ನೇ, ಯಾವುದನ್ನೇ) ಮುದ್ದು ಮಾಡು; ಮಗುವನ್ನು ನೋಡಿಕೊಳ್ಳುವ ಹಾಗೆ ನೋಡಿಕೊ.

baby buggy

ನಾಮವಾಚಕ

  • (ಅಮೆರಿಕನ್‍ ಪ್ರಯೋಗ) = baby carriage.
  • (Baby Buggy) (ಬ್ರಿಟಿಷ್‍ ಪ್ರಯೋಗ) ಬೇಬಿ ಬಗಿ; ನೂಕು ಕುರ್ಚಿ; ಒಂದು ಬಗೆಯ ತಳ್ಳು ಕುರ್ಚಿ.

baby car

ನಾಮವಾಚಕ

ಪುಟ್ಟ ಕಾರು; ಚಿಕ್ಕ ಮೋಟಾರು ಬಂಡಿ.

baby carriage

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಮಕ್ಕಳ ಗಾಡಿ; ಮಕ್ಕಳ ತಳ್ಳು ಬಂಡಿ.

baby grand

ನಾಮವಾಚಕ

ಪುಟಾಣಿ ಪಿಯಾನೊ; ಸಣ್ಣ ಗ್ರ್ಯಾಂಡ್‍ ಪಿಯಾನೊ.

baby-bouncer

ನಾಮವಾಚಕ

= baby-jumper.

baby-face

ನಾಮವಾಚಕ

  • ಮಗು, ಶಿಶು – ಮುಖ; ಮಗುವಿನ ಮುಖದಂತೆ ತುಂಬಿಕೊಂಡು ದುಂಡುದುಂಡಾಗಿ ಮೃದುವಾಗಿರುವ ಮುಖ.
  • ಶಿಶುವದನ; ಮಗುಮುಖವುಳ್ಳವನು.

baby-farmer

ನಾಮವಾಚಕ

(ಹೀನಾರ್ಥಕ ಪ್ರಯೋಗ) ಶಿಶುಪಾಲಕ; ಮಕ್ಕಳ ಪೋಷಕ; ಹಣಕ್ಕಾಗಿ ಕೂಸುಗಳನ್ನು ಸಾಕುವವನು.

baby-food

ನಾಮವಾಚಕ

ಶಿಶು ಆಹಾರ; ಮಗುವಿನ ಆಹಾರ; ಮಗುವಿಗೆ ತಕ್ಕ, ಹಾಲು, ಯಾ ಹಾಲಿನಿಂದ ಮಾಡಿದ ಲಘುವಾದ ಆಹಾರ.

baby-jumper

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಕೈಕಾಲು ಆಡಿಸಲು ಅನುಕೂಲವಿರುವ ಮಕ್ಕಳ) ತೂಗುಯ್ಯಾಲೆ; ಕಾಗಡಿ.

baby-sit

ಅಕರ್ಮಕ ಕ್ರಿಯಾಪದ

(ತಂದೆ ತಾಯಿ ಹೊರಗಡೆ ಹೋದಾಗ) ಮಗು ನೋಡಿಕೊ; ಬಾಲೆಯಾಡಿಸು; ಕೂಸಾಡಿಸು.

baby-sitter

ನಾಮವಾಚಕ

ಶಿಶುಪಾಲಕ; ತಂದೆ ತಾಯಿ ಹೊರಗಡೆ ಹೋದಾಗ ಹಣ ಪಡೆದು ಕೂಸಾಡಿಸುವವ, ಮಗುವನ್ನು – ನೋಡಿಕೊಳ್ಳುವವನು, ಆಡಿಸುವವನು.

baby-talk

ನಾಮವಾಚಕ

  • ತೊದಲ್ನುಡಿ; ಮಗುಮಾತು; ಶಿಶುನುಡಿ.
  • (ಮಕ್ಕಳನ್ನು, ಮುದ್ದು ಪ್ರಾಣಿಗಳನ್ನು, ಪ್ರೀತಿಪಾತ್ರರನ್ನು ಸಂಬೋಧಿಸುವಾಗ ದೊಡ್ಡವರು ಬಳಸುವ) ಲಲ್ಲೆ ಮಾತು; ಲಲ್ಲೆ ನುಡಿ; ಮುದ್ದು ಮಾತು.

baby-walker

ನಾಮವಾಚಕ

ಮಗುವು ನಡಿಗೆಯನ್ನು ಕಲಿತುಕೊಳ್ಳಲು ನೆರವಾಗುವ ಸಾಧನ.

babyhood

ನಾಮವಾಚಕ

  • ಮಗುತನ; ಶಿಶುತನ; ಶೈಶವ.
  • (ಒಟ್ಟಾರೆ) ಹಸುಳೆಗಳು; ಶಿಶು ಸಂಕುಲ.
  • ಮಕ್ಕಳಾಟಿಕೆ; ಬಾಲಿಶತನ.

babyish

ಗುಣವಾಚಕ

  • ಮಗುವಿನಂಥ; ಕೂಸಿನಂಥ.
  • ಸರಳವಾದ; ಮುಗ್ಧ.
  • ಪೆದ್ದುತನದ; ಮಂಕುತನದ; ಬಾಲಿಶ.

Search Dictionaries

Loading Results

Follow Us :   
  Download Bharatavani App
  Bharatavani Windows App