भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

babyishness

ನಾಮವಾಚಕ

  • ಮುಗ್ಧತೆ; ಸರಅತೆ; ನಿಷ್ಕಾಪಟ್ಯ.
  • ಪೆದ್ದುತನ; ಮಂಕುಬುದ್ಧಿ; ಬಾಲಿಶತೆ.

babyism

ನಾಮವಾಚಕ

  • = babyhood.
  • = babyishness.
  • ತೊದಲು ನುಡಿ; ಮಗುಮಾತು; ಶಿಶುನುಡಿ.

Babylon

ನಾಮವಾಚಕ

  • ಬ್ಯಾಬಿಲನ್‍; ಪ್ರಾಚೀನ ಕಾಲ್ಡಿಯದ ರಾಜಧಾನಿ.
  • (ಅಲಂಕಾರಶಾಸ್ತ್ರ) (ಯಾವುದೇ) ದೊಡ್ಡ ಪಟ್ಟಣ ಯಾ ಮಹಾನಗರ.
  • (ರೂಪಕವಾಗಿ) ಕೆಟ್ಟ ಪಟ್ಟಣ; ಅನೀತಿಪುರ; ವಿಲಾಸಿನಗರ; ಭೋಗಪುರ.

Babylonian

ನಾಮವಾಚಕ

  • ಪ್ರಾಚೀನ ಬ್ಯಾಬಿಲೋನಿಯದ ನಿವಾಸಿ.
  • ಬ್ಯಾಬಿಲೋನಿನಲ್ಲಿದ್ದ ಅಕ್ಕಡಿಭಾಷೆಯ ಉಪಭಾಷೆ.

Babylonian

ಗುಣವಾಚಕ

  • ಬ್ಯಾಬಿಲೋನಿಯದ; ಬ್ಯಾಬಿಲೋನಿಗೆ ಸಂಬಂಧಿಸಿದ.
  • ಭೋಗಲಾಲಸೆಯ; ಅನೀತಿಯ.
  • (ರೂಪಕವಾಗಿ) ಮಹಾ; ಬೃಹತ್‍; ಬಹು ದೊಡ್ಡದಾದ.

baccalaurean

ಗುಣವಾಚಕ

ಬ್ರಹ್ಮಚಾರಿಯ; ಅವಿವಾಹಿತನ; ಅವಿವಾಹಿತನಿಗೆ ತಕ್ಕ.

baccalaureate

ನಾಮವಾಚಕ

  • (ವಿಶ್ವವಿದ್ಯಾನಿಲಯದ) ಸ್ನಾತಕ, ಪ್ರಥಮ – ಪದವಿ.
  • (ಅನೇಕ ವಿದ್ಯಾಸಂಸ್ಥೆಗಳಲ್ಲಿ ಪದವೀಪ್ರದಾನೋತ್ಸವದ ದಿನಕ್ಕೆ ಮೊದಲಿನ ಭಾನುವಾರ ನಡೆಸುವ) ಧಾರ್ಮಿಕಸಭೆ.

baccalaureate

ಗುಣವಾಚಕ

ಸ್ನಾತಕ ಪದವಿಯ; ಸ್ನಾತಕ ಪದವಿಗೆ ಸಂಬಂಧಿಸಿದ.

baccara

ನಾಮವಾಚಕ

ಇಸ್ಪೀಟು ಜೂಜು.

baccarat

ನಾಮವಾಚಕ

= baccara.

baccate

ಗುಣವಾಚಕ

  • (ಸಸ್ಯವಿಜ್ಞಾನ) ಬೆರಿ ಬಿಡುವ; ದುಂಡುಗಾಯಿ ಬಿಡುವ.
  • ಬೆರಿಯಂಥ; ಬೆರಿಯಾಕಾರದ.

Bacchanal

ನಾಮವಾಚಕ

  • ಬ್ಯಾಕಸ್‍ ದೇವತೆಯ – ಪೂಜಾರಿ, ಪೂಜಾರಿಣಿ, ಅರ್ಚಕ, ಅರ್ಚಕಿ, ಆರಾಧಕ, ಆರಾಧಿಕೆ.
  • ಬ್ಯಾಕಸ್‍ ದೇವತೆಯ ಭಕ್ತ, ಭಕ್ತೆ.
  • (ಹಿಂದೆ ಬ್ಯಾಕಸ್‍ ದೇವತೆಯ ಉತ್ಸವ ಸಮಯದಲ್ಲಿ ಆಚರಿಸುತ್ತಿದ್ದ) ಕುಡಿದು ಕುಣಿವ ಹಬ್ಬ.
  • ಅಮಲೇರಿದವ; ಪಾನಮತ್ತ; ಮದಿರೋನ್ಮತ್ತ.

Bacchanal

ಗುಣವಾಚಕ

  • (ಗ್ರೀಕ್‍ ಮತ್ತು ರೋಮನ್‍ ಸುರಾದೇವತೆಯಾದ) ಬ್ಯಾಕಸ್‍ನ ಯಾ ಬ್ಯಾಕಸ್‍ನಂಥ.
  • ಆ ದೇವತೆಯ ಉಪಾಸನೆಯ ಯಾ ಉಪಾಸನೆಯಂಥ.
  • ಹೆಂಡದಗುಲ್ಲಿನ; ಕುಡಿದು ಕುಣಿಯುವ; ಪಾನೋನ್ಮಾದದ; ಮದಿರೋನ್ಮಾದದ.

Bacchanalia

ನಾಮವಾಚಕ

(ಬಹುವಚನ)

  • ಬ್ಯಾಕಸ್‍ ದೇವತೆಯ ಹಬ್ಬ.
  • ಮದ್ಯಕೇಳಿ; ಪಾನೋನ್ಮಾದ; ಕುಡಿತ ಕುಣಿತಗಳ ಸಂಭ್ರಮ.

Bacchanalian

ಗುಣವಾಚಕ

  • ಬ್ಯಾಕಸ್‍ ದೇವತೆಯ ಹಬ್ಬದ.
  • ಹೆಂಡದ ಗುಲ್ಲಿನ; ಕುಡಿತ ಕುಣಿತಗಳ ಸಂಭ್ರಮದ.

Bacchanalian

ನಾಮವಾಚಕ

  • ಬ್ಯಾಕಸ್‍ ದೇವತೆಯ ಭಕ್ತ.
  • ಅತಿ ಕುಡುಕ; ಬುರುಡೆ ಭಕ್ತ.

Bacchant

ನಾಮವಾಚಕ

  • ಬ್ಯಾಕಸ್‍ ದೇವತೆಯ – ಪೂಜಾರಿ, ಪೂಜಾರಿಣಿ, ಅರ್ಚಕ, ಅರ್ಚಕಿ, ಆರಾಧಕ, ಆರಾಧಿಕೆ.
  • ಬ್ಯಾಕಸ್‍ ದೇವತೆಯ ಭಕ್ತ, ಭಕ್ತೆ.
  • ಪಾನೋನ್ಮತ್ತ; ಕುಡಿದು ಕುಣಿಯುವವನು; ಕುಡಿದು ಉನ್ಮತ್ತನಾಗಿ ವರ್ತಿಸುವವನು.

Bacchant

ಗುಣವಾಚಕ

  • ಬ್ಯಾಕಸ್‍ ದೇವತೆಯನ್ನು ಪೂಜಿಸುವ.
  • ಪಾನ, ಮದ್ಯ – ಪ್ರಿಯ.

Bacchante

ನಾಮವಾಚಕ

  • ಬ್ಯಾಕಸ್‍ ದೇವತೆಯ – ಪೂಜಾರಿಣಿ, ಅರ್ಚಕಿ, ಆರಾಧಿಕೆ.
  • ಬ್ಯಾಕಸ್‍ ದೇವತೆಯ ಭಕ್ತೆ.
  • ಪಾನೋನ್ಮತ್ತೆ; ಕುಡಿದು ಕುಣಿಯುವವಳು; ಕುಡಿದು ಉನ್ಮತ್ತಳಾಗಿ ವರ್ತಿಸುವವಳು.

Bacchantic

ಗುಣವಾಚಕ

ಬ್ಯಾಕಸ್‍ ಭಕ್ತರ ಯಾ ಅವರಿಗೆ ಸಂಬಂಧಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App