भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Bacchic

ಗುಣವಾಚಕ

= 2Bacchanal.

bacchius

ನಾಮವಾಚಕ

(ಛಂದಸ್ಸು) ಯಗಣ; ಒಂದು ಹ್ರಸ್ವ ಮತ್ತು ಎರಡು ದೀರ್ಘ ಇರುವ ಮೂರು ಮಾತ್ರೆಗಳನ್ನೊಳಗೊಂಡ ಛಂದಸ್ಸು.

Bacchus

ನಾಮವಾಚಕ

  • (ಪ್ರಾಚೀನ ಗ್ರೀಕರ ಮತ್ತು ರೋಮನರ) ಸುರಾದೇವತೆ; ಮದ್ಯದೇವ.
  • ಹೆಂಡ; ಮದ್ಯ; ಸುರೆ; ಮದಿರೆ.

bacciferous

ಗುಣವಾಚಕ

(ಸಸ್ಯವಿಜ್ಞಾನ) ಬೆರಿಬಿಡುವ; ದುಂಡುಗಾಯಿ ಬಿಡುವ.

bacciform

ಗುಣವಾಚಕ

(ಸಸ್ಯವಿಜ್ಞಾನ) ಬೆರಿಯಾಕಾರದ; ದುಂಡುಗಾಯಿಯಾಕಾರದ.

baccivorous

ಗುಣವಾಚಕ

ಬೆರಿಹಣ್ಣುತಿನ್ನುವ; ಬೆರಿಭಕ್ಷಕ; ಬೆರಿಬಾಕ.

baccy

ನಾಮವಾಚಕ

(ಬ್ರಿಟಿಷ್‍ ಪ್ರಯೋಗ, ಆಡುಮಾತು) ಹೊಗೆಸೊಪ್ಪು; ತಂಬಾಕು.

bach

ನಾಮವಾಚಕ

  • (ಆಡುಮಾತು, ನ್ಯೂಸಿಲಂಡ್‍) ಚಿಕ್ಕ ಕುಟೀರ, ಗುಡಿಸಲು ಯಾ ಸಮುದ್ರತೀರದ ಮನೆ.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಬ್ರಹ್ಮಚಾರಿ.

bach

ಅಕರ್ಮಕ ಕ್ರಿಯಾಪದ

ಪದಗುಚ್ಛ

(ಆಡುಮಾತು) ಬ್ರಹ್ಮಚಾರಿಯಾಗಿರು; ಬ್ರಹ್ಮಚಾರಿಯ ಜೀವನ ನಡಸು. bach it = 2bach.

bachelor

ನಾಮವಾಚಕ

ಪದಗುಚ್ಛ

knight bachelor ನೈಟ್‍ ಬ್ಯಾಚಲರ್‍; (ಯಾವುದೇ ಒಂದು ವಿಶೇಷ ವರ್ಗಕ್ಕೆ ಸೇರದ) ಸಾಮಾನ್ಯ ನೈಟ್‍.

  • (ಚರಿತ್ರೆ) (ಒಬ್ಬ ನೈಟ್‍ನ ಧ್ವಜದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ) ಯುವಕ ಯೋಧ; ತರುಣನಾದ ನೈಟ್‍.
  • ಸ್ನಾತಕ ಪದವೀಧರ(ರೆ); ಪ್ರಥಮ ಪದವಿ ಗಳಿಸಿದವನು(ಳು).
  • ಅವಿವಾಹಿತ; ಬ್ರಹ್ಮಚಾರಿ; ಮದುವೆ ಇಲ್ಲದವ.
  • = bachelor seal.

bachelor dinner

ನಾಮವಾಚಕ

ವರನೂಟ; ಮದುವಣಿಗನ ಔತಣ; ಮದುವೆಗೆ ಮುನ್ನ ಮದುವಣಿಗ ಏರ್ಪಡಿಸುವ ಯಾ ಮದುವಣಿಗನು ಕರೆದಿರುವ, ಪುರುಷರು ಮಾತ್ರ ಭಾಗವಹಿಸುವ ಔತಣ.

bachelor flat

ನಾಮವಾಚಕ

ಬ್ರಹ್ಮಚಾರಿ ಮನೆ; ಅವಿವಾಹಿತರಿಗೆ ಯೋಗ್ಯವಾದ ಮನೆ, ಕೋಣೆ.

bachelor girl

ನಾಮವಾಚಕ

(ಆಡುಮಾತು) ಬ್ರಹ್ಮಚಾರಿಣಿ; ಬ್ರಹ್ಮಚಾರಿ ಕನ್ಯೆ; ಸ್ವತಂತ್ರ ಕನ್ಯೆ; ಕೆಲಸ ಮಾಡಿಕೊಂಡು ಸ್ವತಂತ್ರವಾದ ಜೀವನ ನಡೆಸುತ್ತಿರುವ ಅವಿವಾಹಿತ ಹುಡುಗಿ.

bachelor seal

ನಾಮವಾಚಕ

ಒಂಟಿ ಗಂಡು ಸೀಲುಪ್ರಾಣಿ ಯಾ ನೀರುನಾಯಿ; ಹೆಣ್ಣುಜೊತೆಯಿಲ್ಲದ, ತುಪ್ಪುಳವಿರುವ ಎಳೆಯ ನೀರುನಾಯಿ.

bachelor’s button(s)

ನಾಮವಾಚಕ

  • ಗುಂಡಿ(ಯಂಥ) ಹೂ(ಗಳು); ಹಲವು ಬಗೆಯ ಗುಂಡಿಯಾಕಾರದ ಹೂಗಳು. Figure: bachelors_button_1
  • ಒಂದು ಬಗೆಯ ಸುವಾಸನೆಯ ಬಿಸ್ಕತ್ತು(ಗಳು).
  • ಹೊಲಿಯದೆ ಹಾಗೆಯೇ ಸಿಕ್ಕಿಸಬಹುದಾದ ಗುಂಡಿ(ಗಳು).

bachelor-at-arms

ನಾಮವಾಚಕ

= bachelor(1).

bachelordom

ನಾಮವಾಚಕ

  • ಬ್ರಹ್ಮಚರ್ಯೆ; ಅವಿವಾಹಿತ ಸ್ಥಿತಿ; ಅವಿವಾಹಿತತನ.
  • ಬ್ರಹ್ಮಚಾರಿಗಳು; ಅವಿವಾಹಿತರು.

bachelorhood

ನಾಮವಾಚಕ

= bachelordom.

bachelorism

ನಾಮವಾಚಕ

ಬ್ರಹ್ಮಚಾರಿ – ಮನೋಧರ್ಮ, ಗುಣಲಕ್ಷಣ, ವೈಶಿಷ್ಟ್ಯ.

bachelorship

ನಾಮವಾಚಕ

  • ಬ್ರಹ್ಮಚರ್ಯೆ; ಅವಿವಾಹಿತ ಸ್ಥಿತಿ.
  • ಸ್ನಾತಕತನ; ಪ್ರಥಮ ಪದವೀಧರನ ಸ್ಥಾನಮಾನ.

Search Dictionaries

Loading Results

Follow Us :   
  Download Bharatavani App
  Bharatavani Windows App