भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

back seat driver

ನಾಮವಾಚಕ

  • ಹಿಂಸೀಟು ಚಾಲಕ; ಹಿಂದಿನ ಸೀಟಿನಲ್ಲಿ, ಜಾಗದಲ್ಲಿ ಕುಳಿತುಕೊಂಡು ಕಾರಿನ ಚಾಲಕನಿಗೆ ಬೇಕಿಲ್ಲದ ಸಲಹೆ ಕೊಡುವವನು, ಬುದ್ಧಿವಾದ ಹೇಳುವವನು.
  • (ರೂಪಕವಾಗಿ) ಹೊಣೆ ಹೊರದೆ ಬರಿ ಸಲಹೆ ಕೊಡುವವನು ಯಾ ನಿಯಂತ್ರಿಸಲು ಪ್ರಯತ್ನಿಸುವವನು.

back slang

ನಾಮವಾಚಕ

ತಿರುಗುಮುರುಗು ಭಾಷೆ; ವಿಲೋಮ ಭಾಷೆ; ಹಿಂದುಮುಂದು ನುಡಿ; ಪದದ ಅಕ್ಷರಗಳನ್ನು ಹಿಂದುಮುಂದಾಗಿಸಿ ಹೇಳುವ ರಹಸ್ಯವಾದ ಸಾಂಕೇತಿಕ ನುಡಿ: come ಬದಲು emoc, penny ಬದಲು ynnep.

back up

ಅಕರ್ಮಕ ಕ್ರಿಯಾಪದ

  • (ಹಣ, ವಾದ, ಪ್ರಭಾವ, ಮೊದಲಾದವುಗಳಿಂದ, ನೈತಿಕವಾಗಿ) ಸಹಾಯ ಮಾಡು; ನೆರವು ನೀಡು; ಬೆಂಬಲಿಸು.
  • (ಅಣೆಕಟ್ಟು ಮೊದಲಾದವುಗಳಿಂದ ತಡೆದ ನೀರಿನ ವಿಷಯದಲ್ಲಿ) ಶೇಖರವಾಗು; ಸಂಚಯಗೊಳ್ಳು; ಶೇಖರವಾದುದರಿಂದ ಹಿಂದಕ್ಕೆ ಹರಿ ಯಾ ಸುತ್ತಮುತ್ತಲ ಪ್ರದೇಶಕ್ಕೆ ನುಗ್ಗು.
  • (ಅಮೆರಿಕನ್‍ ಪ್ರಯೋಗ) (ವಾಹನಗಳು ಮೊದಲಾದವುಗಳ ವಿಷಯದಲ್ಲಿ) ಕ್ಯೂ ನಿಲ್ಲು; ಒಂದರ ಹಿಂದೆ ಒಂದರಂತೆ ಸಾಲಾಗಿ ನಿಲ್ಲು.
  • (ಅಮೆರಿಕನ್‍ ಪ್ರಯೋಗ) (ವಾಹನವನ್ನು) ಹಿಂತಿರುಗಿಸು; ಹಿಮ್ಮೊಗವಾಗಿ ತಿರುಗಿಸು; ಹಿಂದಕ್ಕೆ ಹೊಡೆ ಯಾ ನಡೆಸು.

back way

ನಾಮವಾಚಕ

(ರೂಪಕವಾಗಿ ಸಹ) (ಯಾವುದೇ ಸ್ಥಳದ) ಹಿಂದಾರಿ; ಕಾಲು, ಅಡ್ಡ – ದಾರಿ.

back-alley

ಗುಣವಾಚಕ

  • ಕೊಳಕಾದ; ಕಶ್ಮಲ ತುಂಬಿದ.
  • ಕೀಳಾದ; ನೀಚತನದ: back-alley political methods ಹಿಂದಿನ ಗಲ್ಲಿ ರಾಜಕೀಯ; ಕೀಳು ರಾಜಕೀಯ ವಿಧಾನಗಳು.

back-bench

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಬ್ರಿಟಿಷ್‍ ಹೌಸ್‍ ಆಹ್‍ ಕಾಮನ್ಸ್‍ ಯಾ ಅಂಥದೇ ಸಭೆಯಲ್ಲಿ) ಹಿಂಬೆಂಚು; ಹಿಂದಿನ ಸಾಲು; ಅಮುಖ್ಯರ ಸಾಲು.

back-bencher

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಬ್ರಿಟಿಷ್‍ ಹೌಸ್‍ ಆಹ್‍ ಕಾಮನ್ಸ್‍ ಯಾ ಅಂಥದೇ ಸಭೆಯಲ್ಲಿ ಪಕ್ಷದ ನಾಯಕರ) ಹಿಂದೆ ಕೂಡುವವ; ಹಿಂದಿನ ಸಾಲಿನ ಸದಸ್ಯ; ಅಪ್ರಮುಖ; ಹಿಂಬೆಂಚಿಗ.

back-breaking

ಗುಣವಾಚಕ

(ಕೆಲಸ ಮೊದಲಾದವುಗಳ ವಿಷಯದಲ್ಲಿ) ಬೆನ್ನು ಮುರಿಯುವ; ಬಲುಕಷ್ಟದ; ಪ್ರಯಾಸಕರ; ತ್ರಾಸದಾಯಕ.

back-cross

ಸಕರ್ಮಕ ಕ್ರಿಯಾಪದ

ಹಿಮ್ಮಿಶ್ರಿಸು; (ಮೊದಲ ಮಿಶ್ರತಳಿಯನ್ನು) ಹುಟ್ಟಿಸಿದ ತಂದೆತಾಯಿಯರೊಡನೆ ಬೆರೆಸಿ ಮಿಶ್ರ ತಳಿ ಹುಟ್ಟಿಸು.

back-door

ಗುಣವಾಚಕ

(ರೂಪಕವಾಗಿ) ಗುಟ್ಟಾದ; ಗುಪ್ತವಾದ; ಕಳ್ಳತನದ; ಒಳಸಂಚಿನ.

back-down

ನಾಮವಾಚಕ

(ಹೊಣೆ, ನಿಲುವು, ಮೊದಲಾದವುಗಳಿಂದ) ಹಿಂತೆಗೆಯುವುದು; ಹಿಮ್ಮೆಟ್ಟುವುದು.

back-fill

ಸಕರ್ಮಕ ಕ್ರಿಯಾಪದ

(ಭೂಶೋಧನೆಯಲ್ಲಿ ಅಗೆದಿರುವ ಕಂದಕ ಮೊದಲಾದವನ್ನು ಯಾ ತಳಪಾಯ ಗೋಡೆಯ ಸುತ್ತಲಿನ ಹಳ್ಳವನ್ನು ಅದೇ ಮಣ್ಣು ಮೊದಲಾದವುಗಳಿಂದ) ಪುನಃ ಮುಚ್ಚು; ಮತ್ತೆ ತುಂಬು.

back-formation

ನಾಮವಾಚಕ

(ಭಾಷಾಶಾಸ್ತ್ರ)

  • ಹಿಂಪದ ರಚನೆ; ಬಳಕೆಯಲ್ಲಿರುವ ಪದದ ಸಾದೃಶ್ಯಬಲದಿಂದ ಹೊಸ ಪದ ನಿರ್ಮಿಸುವಿಕೆ: typewriter ಇಂದ typewrite, lazy ಇಂದ laze.
  • ಹಿಂಪದ; ಹಿಂಪದ ರಚನೆಯಿಂದ ಹುಟ್ಟಿದ ಪದ.

back-pedal

ಅಕರ್ಮಕ ಕ್ರಿಯಾಪದ

  • ಪೆಡಲನ್ನು ಹಿಂತುಳಿ, ಹಿಂದಕ್ಕೆ ಒತ್ತು.
  • (ರೂಪಕವಾಗಿ) (ಒಂದು ಅಭಿಪ್ರಾಯ, ನಿಲುವು, ಎದುರಾಳಿ, ಮೊದಲಾದವುಗಳಿಂದ) ಹಿಮ್ಮೆಟ್ಟು; ಹಿಂದಕ್ಕೆ ಸರಿ ಯಾ ಬದಲಾಯಿಸು.

back-projection

ನಾಮವಾಚಕ

= background projection.

back-room

ನಾಮವಾಚಕ

ಹಿಂಕೋಣೆ; ಗುಪ್ತಕೋಣೆ; (ಮುಖ್ಯವಾಗಿ ವೈಜ್ಞಾನಿಕ, ತಾಂತ್ರಿಕ) ಗುಪ್ತ ಸಂಶೋಧನೆ ನಡೆಯುವ ಸ್ಥಳ.

back-room boys

ನಾಮವಾಚಕ

(ಆಡುಮಾತು) ಹಿಂಕೋಣೆ ಹೈದರು; (ಮುಖ್ಯವಾಗಿ ವೈಜ್ಞಾನಿಕ, ತಾಂತ್ರಿಕ) ಗುಪ್ತಸಂಶೋಧಕ ತಂಡ; ಯಾವುದೇ ರಹಸ್ಯವಿಚಾರದಲ್ಲಿ ಪರಿಶೋಧನೆ ಕೈಗೊಂಡಿರುವವರು.

back-scatter

ನಾಮವಾಚಕ

= 1back-scattering.

back-scattering

ನಾಮವಾಚಕ

(ಭೌತವಿಜ್ಞಾನ) ಹಿಂಚದುರುವಿಕೆ; ಪಶ್ಚವಿಕಿರಣ; ಚದುರಿಹೋಗುವ ಯಾ ವಿಕ್ಷೇಪನ ಪ್ರಕ್ರಿಯೆಯಲ್ಲಿ ಬೀಜಕಣಗಳು ಯಾ ವಿಕಿರಣವು 90 ಡಿಗ್ರಿ ಕೋನಕ್ಕಿಂತಲೂ ಹೆಚ್ಚು, ಅಂದರೆ ಹಿಂಭಾಗದ ಕಡೆಗೆ, ಬಾಗುವುದು.

back-scattering

ಗುಣವಾಚಕ

(ವಿಕಿರಣದ ವಿಷಯದಲ್ಲಿ) ಹಿಂಚದುರುವ; ಹಿಮ್ಮುಖವಾಗಿ ಚದುರುವ.

Search Dictionaries

Loading Results

Follow Us :   
  Download Bharatavani App
  Bharatavani Windows App