English-Kannada Nighantu (University of Mysore)
University of Mysore
back-stair(s)
ಗುಣವಾಚಕ
(ರೂಪಕವಾಗಿ) = 1back-door.
back-stairs
ನಾಮವಾಚಕ
- (ಸೇವಕರು ಮೊದಲಾದವರು ಬಳಸುವ) ಮನೆಯ ಹಿಂಭಾಗದ (ಮಹಡಿ) ಮೆಟ್ಟಿಲು.
- ಒಳಸಂಚು ನಡೆಸುವ – ಜಾಗ, ಸ್ಥಳ, ಎಡೆ, ವಿಧಾನ.
back-sword
ನಾಮವಾಚಕ
ಒಬ್ಬಾಯಿಕತ್ತಿ; ಒಂದೇ ಕಡೆ ಹರಿತಬಾಯುಳ್ಳ ಕತ್ತಿ.
back-up
ನಾಮವಾಚಕ
- (ಯಾವುದೇ ರೂಪದ) ಸಹಾಯ; ನೆರವು; ಬೆಂಬಲ.
- (ಮುಖ್ಯವಾಗಿ ನೀರು ಹರಿಯುವುದು ನಿಂತದ್ದರಿಂದ ಆದ) ಶೇಖರಣೆ; ಸಂಚಯ; ಸಂಗ್ರಹಣೆ.
- ಉಳಿಸಿಟ್ಟದ್ದು; ಕಾಯ್ದಿಟ್ಟದ್ದು; ಮೀಸಲು: a back-up for emergency use ಆಪತ್ತಿನ ಬಳಕೆಗಾಗಿ ಉಳಿಸಿಟ್ಟದ್ದು ಯಾ (ಇಟ್ಟ) ಮೀಸಲು.
- (ಅಮೆರಿಕನ್ ಪ್ರಯೋಗ) (ವಾಹನ ಮೊದಲಾದವುಗಳ) ಕ್ಯೂ; ಸಾಲು.
back-up light
ನಾಮವಾಚಕ
(ಅಮೆರಿಕನ್ ಪ್ರಯೋಗ) ಹಿಂದೀಪ; ವಾಹನವು ಹಿಂಚಲಿಸುವಾಗ ಮಾತ್ರ ಹತ್ತಿಕೊಂಡು ಹಿಂಭಾಗದ ರಸ್ತೆಯನ್ನು ಬೆಳಗುವಂತೆ ಹೊಂದಿಸಿರುವ, ಮೋಟಾರು ವಾಹನದ ಹಿಂಭಾಗದಲ್ಲಿರುವ ದೀಪ.
backache
ನಾಮವಾಚಕ
ಬೆನ್ನು ನೋವು; ಮುಖ್ಯವಾಗಿ ಬೆನ್ನಿನ ಕಡೆಯ ಸೊಂಟ ಪ್ರದೇಶದಲ್ಲಿ ಸ್ನಾಯುವಿನ ಯಾ ಅಸ್ಥಿರಜ್ಜುವಿನ ಎಳೆತದಿಂದ ಉಂಟಾಗುವ ನೋವು.
backband
ನಾಮವಾಚಕ
ಬೆನ್ನುಪಟ್ಟಿ; ಜೊತ್ತಗೆ; ವಾಹನದ ಮೂಕಿಗಳನ್ನು ಹಿಡಿದುಕೊಂಡು ಕುದುರೆಯ ಕತ್ತಿನ ಮೇಲೆ ಹಾಯ್ದಿರುವ ಪಟ್ಟಿ.
backbend
ನಾಮವಾಚಕ
(ವ್ಯಾಯಾಮದಲ್ಲಿ ನಿಂತ ಸ್ಥಿತಿಯಿಂದ ಕೈಗಳು ನೆಲವನ್ನು ಮುಟ್ಟುವಂತೆ) ಹಿಂಬಾಗುವುದು.
backbite
ಅಕರ್ಮಕ ಕ್ರಿಯಾಪದ
(ವ್ಯಕ್ತಿಯ ಗೈರು ಹಾಜರಿಯಲ್ಲಿ) ಚಾಡಿ ಹೇಳು; ಹಿಂದೆ ದೂರು; ಹಿಂದಾಡು.
backbiter
ನಾಮವಾಚಕ
ಚಾಡಿಕೋರ; ಪಿಸುಣ; ವ್ಯಕ್ತಿಯ ಹಿಂದೆ, ಗೈರುಹಾಜರಿಯಲ್ಲಿ ಆಡಿಕೊಳ್ಳುವವನು.
backblocks
ನಾಮವಾಚಕ
(ಆಸ್ಟ್ರೇಲಿಯ, ನ್ಯೂಸಿಲಂಡ್, ಮೊದಲಾದವುಗಳಲ್ಲಿ) (ಜನಸಂದಣಿ ಕಡಮೆಯಿರುವ) ಒಳನಾಡು ಜಮೀನು.
backboard
ನಾಮವಾಚಕ
- ಹಿಂದಂಡೆ; ಬಂಡಿಯ ಹಿಂದೆ ಸಾಮಾನು ಬೀಳದಂತೆ ಕಟ್ಟುವ ಹಲಗೆ.
- (ವೈದ್ಯಶಾಸ್ತ್ರ) ಬೆನ್ನು ಹಲಗೆ; ಮಗುವಿಗೆ ಬೆನ್ನು ನೆಟ್ಟಗಿರಲು ಯಾ ಬೆನ್ನಿಗೆ ಆಸರೆಯಾಗಿ ಕಟ್ಟುವ ಹಲಗೆ.
- (ಬಾಸ್ಕೆಟ್ಬಾಲ್ ಆಟದಲ್ಲಿ) ಕಲ್ಲಿ, ಕುಕ್ಕೆ – ಹಲಗೆ; ಚೆಂಡು ತೂರಿಸುವ ಬಳೆಯನ್ನು ಸಿಕ್ಕಿಸಿರುವ ಹಲಗೆ.
backbone
ನಾಮವಾಚಕ
ನುಡಿಗಟ್ಟು
to the backbone ಕೂಲಂಕಷವಾಗಿ; ಸಂಪೂರ್ಣವಾಗಿ.
- (ಅಂಗರಚನಾಶಾಸ್ತ್ರ) ಬೆನ್ನೆಲುಬು; ಬೆನ್ನುಮೂಳೆ; ನಟ್ಟೆಲುಬು; ಕಶೇರು.
- (ರೂಪಕವಾಗಿ) ಬೆನ್ನೆಲುಬು; ಮೂಲಾಧಾರ; ಮುಖ್ಯಾಸರೆ.
- (ಯಾವುದೇ ದೇಶದ) ಪ್ರಧಾನ ಪರ್ವತ ಶ್ರೇಣಿ; ಮುಖ್ಯ ಬೆಟ್ಟಸಾಲು.
- ಜಲವಿಭಾಗಸ್ಥಾನ ಯಾ ನೀರುದಿಣ್ಣೆ; ನೀರು ಬೇರೆ ಬೇರೆ ಕಡೆಗೆ ಹರಿದುಹೋಗುವಂಥ ನಡುದಿಣ್ಣೆ.
- ಮುಖ್ಯಬಲ; ಪ್ರಧಾನಶಕ್ತಿ.
- ಗಟ್ಟಿ ಮನಸ್ಸು; ದೃಢಸಂಕಲ್ಪ; ಮನಸ್ಥೈರ್ಯ.
- ಬೆನ್ನುಮೂಳೆಯಂತಿರುವ ಪದಾರ್ಥ.
- (ಅಮೆರಿಕನ್ ಪ್ರಯೋಗ) (ಪುಸ್ತಕದ) ಬೆನ್ನುಪಟ್ಟಿ;
- (ನೌಕಾಯಾನ) ಮೇಲುಕಟ್ಟು; ನಡುಹಗ್ಗ; ಹಡಗಿನ – ದಕ್ಕದ ಚಾವಣಿಯ ಉದ್ದಕ್ಕೂ ಎಡಬಲಕ್ಕೆ ಬಿಗಿದಿರುವ, ಅದಕ್ಕೆ ಆಧಾರವಾಗಿದ್ದು, ಅದನ್ನು ಬಲಪಡಿಸುವ, ಹಗ್ಗ.
backboned
ಗುಣವಾಚಕ
(ಅಂಗರಚನಾಶಾಸ್ತ್ರ) ಬೆನ್ನೆಲುಬುಳ್ಳ; ಕಶೇರುಕ.
backboneless
ಗುಣವಾಚಕ
(ಅಂಗರಚನಾಶಾಸ್ತ್ರ)
- ಬೆನ್ನೆಲುಬಿಲ್ಲದ; ಅಕಶೇರುಕ.
- (ವ್ಯಕ್ತಿಯ ವಿಷಯದಲ್ಲಿ) ಸ್ಥೈರ್ಯವಿಲ್ಲದ; ಅಸ್ಥೈರ್ಯದ.
backchat
ನಾಮವಾಚಕ
(ಆಡುಮಾತು) ಎದುರು, ಪ್ರತಿ, ಮರು – ಮಾತು; ಎದುರುತ್ತರ; ಪ್ರತ್ಯಾರೋಪ.
backcloth
ನಾಮವಾಚಕ
(ಮುಖ್ಯವಾಗಿ ಬ್ರಿಟಿಷ್ ಪ್ರಯೋಗ) (ರಂಗಮಂದಿರ) ಹಿಂದೆರೆ; ಹಿಂಪರದೆ; ಹಿಂಗೋಡೆ ತೆರೆ; ರಂಗದ ಹಿಂಭಾಗದಲ್ಲಿರುವ ಚಿತ್ರಪರದೆ.
backcomb
ಸಕರ್ಮಕ ಕ್ರಿಯಾಪದ
ಹಿಂದಕ್ಕೆ ಬಾಚು; ಒಳಗಿನ ಕೂದಲನ್ನು ಹಿಂದಕ್ಕೆ, ನೆತ್ತಿಯ ಕಡೆಗೆ ಬಾಚು.
backdate
ಸಕರ್ಮಕ ಕ್ರಿಯಾಪದ
- (ರಸೀತಿ ಮೊದಲಾದವುಗಳಿಗೆ) ಹಿಂದಿನ ತಾರೀಖನ್ನು – ಹಾಕು, ನಮೂದಿಸು.
- (ಒಪ್ಪಂದ ಮೊದಲಾದವುಗಳ ವಿಷಯದಲ್ಲಿ ಹಿಂದಿನ ಒಂದು ತಾರೀಖಿನಿಂದಲೇ) ಸಮ್ಮತವಾಗುವಂತೆ, ಕ್ರಮಬದ್ಧವಾಗುವಂತೆ – ಮಾಡು.