भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cage

ನಾಮವಾಚಕ

  • (ಮುಖ್ಯವಾಗಿ ಹಕ್ಕಿಗಳು, ಪ್ರಾಣಿಗಳು ಯಾ ಯುದ್ಧದ ಸೆರೆಯಾಳುಗಳನ್ನು ಇಡಲು, ತಂತಿ ಯಾ ಕಂಬಗಳಿಂದ ಮಾಡಿದ, ಒಂದು ಕಡೆ ಇಡುವ ಯಾ ಒಯ್ಯಲು ಬರುವ) ಪಂಜರ; ಬೋನು; ಗೂಡು.
  • (ರೂಪಕವಾಗಿ ಸಹ) ಸೆರೆ; ಸೆರೆಮನೆ; ತುರಂಗ; ಕಾರಾಗೃಹ; ಜೈಲು.
  • (ಗಣಿಗಾರಿಕೆ) ಸಾಗು-ತೊಟ್ಟಿಲು, ಪಂಜರ, ಪೆಟ್ಟಿಗೆ; ಜನ, ಸಾಮಾನು ಮೊದಲಾದವನ್ನು ಮೇಲಕ್ಕೆತ್ತಲು ಯಾ ಕೆಳಕ್ಕೆ ಇಳಿಸಲು ಬಳಸುವ, ಗೂಡಿನ ಚೌಕಟ್ಟು ಯಾ ಪಂಜರದಂಥ ಪೆಟ್ಟಿಗೆ.
  • (ಲಿಹ್ಟ್‍ನಲ್ಲಿ ಪ್ರಯಾಣಿಕರು ಮೊದಲಾದವರಿಗಾಗಿ ಇರುವ) ಅಂಕಣ ಯಾ ಭಾಗ.
  • (ಅನೇಕ ಬಗೆಯ) ತೆರೆದ-ಪಂಜರಗಳು, ಚೌಕಟ್ಟುಗಳು, ಗೂಡುಗಳು.

cage

ಸಕರ್ಮಕ ಕ್ರಿಯಾಪದ

  • ಪಂಜರದಲ್ಲಿಡು; ಬೋನಿನಲ್ಲಿರಿಸು; ಬೋನಿಗೆ ಹಾಕು.
  • ಸೆರೆಯಲ್ಲಿಡು; ಬಂಧನದಲ್ಲಿಡು.

cage-bird

ನಾಮವಾಚಕ

ಪಂಜರಪಕ್ಷಿ; ಗೂಡಿನ ಹಕ್ಕಿ; ಸಾಮಾನ್ಯವಾಗಿ ಪಂಜರದಲ್ಲಿಟ್ಟು ಸಾಕುವ ಹಕ್ಕಿ.

cagey

ಗುಣವಾಚಕ

( ತರರೂಪ cagier, ತಮರೂಪ cagiest). (ಆಡುಮಾತು)

  • ಚಾಣಾಕ್ಷ; ಚುರುಕುಬುದ್ಧಿಯ; ಬದ್ಧಿವಂತಿಕೆಯ; ಸೂಕ್ಷ್ಮಮತಿಯ.
  • ಎಚ್ಚರಿಕೆಯ; ಹುಷಾರಿನ; ಜಾಗರೂಕ: a cagey reply ಜಾಗರೂಕ ಉತ್ತರ.
  • ಮೌನ ಪ್ರವೃತ್ತಿಯ; ಮಾತನಾಡದ; ಬಾಯಿಬಿಡದ.
  • ಗುಟ್ಟುಮಾಡುವ; ಮುಚ್ಚುಮರೆಯ; ಗೋಪ್ಯಸ್ವಭಾವದ; ರಹಸ್ಯಸ್ವಭಾವದ.

cageyness

ನಾಮವಾಚಕ

=caginess.

cagily

ಕ್ರಿಯಾವಿಶೇಷಣ

  • ಚಾಣಾಕ್ಷತನದಿಂದ; ಬುದ್ಧಿವಂತಿಕೆಯಿಂದ.
  • ಎಚ್ಚರಿಕೆಯಿಂದ; ಎಚ್ಚರದಿಂದ; ಹುಷಾರಿನಿಂದ; ಜಾಗರೂಕನಾಗಿ.
  • ಬಾಯಿಬಿಡದೆ; ಮನಸ್ಸಿನಲ್ಲಿರುವುದನ್ನು ತಿಳಿಸದೆ.
  • ರಹಸ್ಯವಾಗಿ; ಗುಟ್ಟಾಗಿ.

caginess

ನಾಮವಾಚಕ

  • ಚಾಣಾಕ್ಷತನ.
  • ಎಚ್ಚರಿಕೆ; ಹುಷಾರು; ಜಾಗರೂಕತೆ.
  • ಮನಸ್ಸಿನಲ್ಲಿರುವುದನ್ನು ತಿಳಿಸದಿರುವಿಕೆ.
  • ರಹಸ್ಯತನ; ಗುಟ್ಟುಮಾಡುವಿಕೆ.

cagoule

ನಾಮವಾಚಕ

(ಪರ್ವತಾರೋಹಣ ಮೊದಲಾದವುಗಳಲ್ಲಿ ಧರಿಸುವ) ಗಾಳಿ ಹೊಗದ, ತಲೆಗವುಸುಳ್ಳ, ತೆಳು ಉಡುಪು.

cagy

ಗುಣವಾಚಕ

=cagey.

cahoot

ನಾಮವಾಚಕ

ನುಡಿಗಟ್ಟು

  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಸಾಮಾನ್ಯವಾಗಿ ಬಹುವಚನದಲ್ಲಿ) (ವ್ಯಾಪಾರಸಂಸ್ಥೆ) ಪಾಲುಗಾರಿಕೆ.
  • ತಂತ್ರ; ಹೂಟ; ಒಳಸಂಚು; ಪಿತೂರಿ.

caiman

ನಾಮವಾಚಕ

=cayman.

Cain

ನಾಮವಾಚಕ

ನುಡಿಗಟ್ಟು

raise Cain (ಅಶಿಷ್ಟ)

  • ಕೇನ್‍; ಆಡಮ್‍ ಮತ್ತು ಈವ್‍ರ, ತನ್ನ ಸೋದರನನ್ನೇ ಕೊಲೆ ಮಾಡಿದ, ಮೊದಲನೆಯ ಮಗ.
  • ಕೊಲೆಪಾತಕ; ಕೊಲೆಗಾರ.

Cainozoic

ಗುಣವಾಚಕ

(ಭೂವಿಜ್ಞಾನ) ನವಜೀವಕಲ್ಪದ; ಕೈನಸೋಯಿಕ್‍; ಭೂಇತಿಹಾಸದಲ್ಲಿ ಜೀವ್ಯವಶೇಷಗಳು ಕಂಡುಬರುವ ಮೂರು ಪ್ರಮುಖ ಕಲ್ಪಗಳಲ್ಲಿ ಸುಮಾರು 70 ಮಿಲಿಯ ವರ್ಷಗಳಿಂದೀಚಿನ ಯುಗದ ಯಾ ಅದಕ್ಕೆ ಸಂಬಂಧಿಸಿದ: Cainozoic era ನವಜೀವಕಲ್ಪ.

Cainozoic

ನಾಮವಾಚಕ

(ಭೂವಿಜ್ಞಾನ) ನವಜೀವಕಲ್ಪ; ಕೈನಸೋಯಿಕ್‍ ಯುಗ ಯಾ ಆ ಕಾಲದ ಶಿಲಾವಿಧಗಳು.

caique

ನಾಮವಾಚಕ

  • (ಬಾಸ್ಪರಸ್‍ ಜಲಸಂಧಿಯಲ್ಲಿ ಬಳಸುವ, ಅಗಲ ಕಿರಿದಾಗಿ ಉದ್ದ ಹೆಚ್ಚಾಗಿ ಇರುವ) ಹಗುರ ಹುಟ್ಟುದೋಣಿ.
  • (ಪೂರ್ವ ಮೆಡಿಟರೇನಿಯನ್‍ ಸಮುದ್ರದಲ್ಲಿ ಬಳಸುವ ಒಕ್ಕೂವೆಯ) ಹಾಯಿಹಡಗು.

cairn

ನಾಮವಾಚಕ

  • ಕಲ್ಲುಗುಪ್ಪೆ; ಕಲ್ಲುಗುಡ್ಡೆ; (ಸ್ಮಾರಕ, ಸಮಾಧಿ, ಹಾದಿಯ ಗುರುತು, ಮೊದಲಾದವನ್ನು ಸೂಚಿಸಲು ಹಾಕಿದ) ಚೂಪುತುದಿಯ ಒರಟು ಕಲ್ಲುರಾಶಿ.
  • =cairn terrier.

cairn terrier

ನಾಮವಾಚಕ

ಕೇರ್ನ್‍ ಟೆರಿಯರ್‍ (ನಾಯಿ); ಗಿಡ್ಡಕಾಲಿನ, ನಿಡುಮೈಯ, ಒರಟಾದ ಪೊದೆಗೂದಲಿರುವ, ಸ್ಕಾಟಿಷ್‍ ತಳಿಯ, ಚಿಕ್ಕ ಟೆರಿಯರ್‍ ನಾಯಿ.

cairngorm

ನಾಮವಾಚಕ

(ಹಳದಿ ಯಾ ಕೆಂಚು) ಸ್ಫಟಿಕಶಿಲೆ.

cairngorm stone

ನಾಮವಾಚಕ

=cairngorm.

caisson

ನಾಮವಾಚಕ

  • ಮದ್ದುಗುಂಡಿನ-ಪೆಟ್ಟಿಗೆ ಯಾ ಬಂಡಿ. Figure: caisson 1
  • ಕೇಸನ್‍; ಹದಿಗೂಡು; ನೀರಿನ ತಳದಲ್ಲಿ ಅಡಿಪಾಯ ಹಾಕುವಾಗ ಬಳಸುವ, ಗಾಳಿಯ ಒತ್ತಡದಿಂದ ನೀರು ಒಳಹೊಗದಂತೆ ಮಾಡಲು ತಳಭಾಗದಲ್ಲಿ ತೆರೆದಿರುವ, ನೀರಿಳಿಯದ ದೊಡ್ಡಪೆಟ್ಟಿಗೆ.
  • ದೋಣಿಬಾಗಿಲು; ಬಂದರಿನಲ್ಲಿ ಹಡಗಿನ ನಿಲುಕಟ್ಟೆಯ ಬಾಗಿಲಾಗಿ ಬಳಸುವ ದೋಣಿ.

Search Dictionaries

Loading Results

Follow Us :   
  Download Bharatavani App
  Bharatavani Windows App