English-Kannada Nighantu (University of Mysore)
University of Mysore
caisson disease
ನಾಮವಾಚಕ
(ರೋಗಶಾಸ್ತ್ರ) ಕೇಸನ್ ರೋಗ; ಒತ್ತುಗಾಳಿರೋಗ; ಗಾಳಿಯೊತ್ತಡದ ರೋಗ; ನೀರಿನ ತಳದಲ್ಲಿ ಭಾರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ನಂತರ ಮೇಲೆ ಬಂದಾಗ ಗಾಳಿಯ ಒತ್ತಡ ಸರಕ್ಕನೆ ಕಡಿಮೆಯಾಗುವುದರಿಂದ ಉಂಟಾಗುವ ಕಾಯಿಲೆ.
caitiff
ನಾಮವಾಚಕ
(ಪ್ರಾಚೀನ ಪ್ರಯೋಗ, ಕಾವ್ಯಪ್ರಯೋಗ)
- ನೀಚ; ಅಧಮ; ಅಯೋಗ್ಯ; ತುಚ್ಛ; ಕ್ಷುದ್ರ(ವ್ಯಕ್ತಿ)
- ಹೇಡಿ.
caitiff
ಗುಣವಾಚಕ
- (ವ್ಯಕ್ತಿಯ ವಿಷಯದಲ್ಲಿ) ನೀಚ; ಅಧಮ; ಕ್ಷುದ್ರ.
- ಹೇಡಿಯಾದ.
cajole
ಸಕರ್ಮಕ ಕ್ರಿಯಾಪದ
- (ಹೊಗಳಿಕೆ, ಮುಖಸ್ತುತಿ, ಮೋಸ ಮೊದಲಾದವುಗಳಿಂದ, ಯಾವುದನ್ನೇ ಮಾಡಲು ಯಾ ಮಾಡದಿರಲು) ಪುಸಲಾಯಿಸು; ಮನವೊಪ್ಪಿಸು; ಮನವೊಲಿಸು; ಒಡಂಬಡಿಸು; ಒಲಿಸು; ಒಪ್ಪಿಸು.
- (ವ್ಯಕ್ತಿಯಿಂದ ಯಾವುದನ್ನೇ) ಪುಸಲಾಯಿಸಿ ಯಾ ಒಲಿಸಿ-ಹೊರಗೆಳೆ, ಹೊರಡಿಸು.
cajolement
ನಾಮವಾಚಕ
ಪುಸಲಾವಣೆ; ಒಪ್ಪಿಸುವಿಕೆ; ಒಲಿಸುವಿಕೆ; ಅನುನಯ; ಮನವೊಲಿಸುವಿಕೆ.
cajolery
ನಾಮವಾಚಕ
=cajolement.
cajolingly
ಕ್ರಿಯಾವಿಶೇಷಣ
ಪುಸಲಾಯಿಸುವಂತೆ; ಮನವೊಲಿಸುವಂತೆ.
cake
ನಾಮವಾಚಕ
ನುಡಿಗಟ್ಟು
- ಕೇಕು; ಹಿಟ್ಟಿನ ಜತೆಗೆ ದ್ವೀಪ ದ್ರಾಕ್ಷಿ, ಬೆಣ್ಣೆ, ಮೊಟ್ಟೆ ಮೊದಲಾದವುಗಳನ್ನು ಹಾಕಿ ಮಾಡಿದ, ಹುದುಗು ಹಾಕಿಲ್ಲದ, ಸಿಹಿಯಾದ ಬ್ರೆಡ್ಡು.
- (ದಪ್ಪನಾದ ಬಿಲ್ಲೆಯ ಯಾ ಅಲಂಕಾರದ ಆಕಾರಗಳಲ್ಲಿ ಬೇಯಿಸಿದ) ದೊಡ್ಡ ಪ್ರಮಾಣದ ಕೇಕು.
- (ಸ್ಕಾಟ್ಲಂಡ್, ಉತ್ತರ ಇಂಗ್ಲಂಡ್ಗಳಲ್ಲಿ ಓಟ್ ಧಾನ್ಯದ) ತೆಳು ಬ್ರೆಡ್ಡು.
- ತಿನಿಸುಬಿಲ್ಲೆ; ತಿಂಡಿಬಿಲ್ಲೆ; ಒತ್ತಿ ಮಾಡಿದ, ಚಪ್ಪಟೆಯಾದ ಇತರ ಆಹಾರದ ದಪ್ಪ ಬಿಲ್ಲೆ: pancake, fish cake.
- (ಯಾವುದೇ ವಸ್ತುವಿನ ಒತ್ತಿದ) ಬಿಲ್ಲೆ; ಹಲ್ಲೆ: cake of soap ಸೋಪಿನ ಬಿಲ್ಲೆ.
cake
ಸಕರ್ಮಕ ಕ್ರಿಯಾಪದ
- ಹೆಪ್ಪುಗಟ್ಟಿಸು; ಬಿಲ್ಲೆ ಮಾಡು.
- (ಒಂದು ವಸ್ತುವನ್ನು ಇನ್ನೊಂದರಿಂದ) ಮುಚ್ಚು; ಆವರಿಸು: the shirt was caked with dust ಷರಟು ಧೂಳಿನಿಂದ ಮುಚ್ಚಿಹೋಗಿತ್ತು.
cakewalk
ನಾಮವಾಚಕ
- ಕೇಕ್ ನಡಿಗೆ; ಸುಂದರ ನಡಿಗೆಗಾಗಿ ಕೇಕನ್ನು ಬಹುಮಾನವಾಗಿ ಕೊಡುವ ನೀಗ್ರೋ ಪಂದ್ಯದಿಂದ ಹುಟ್ಟಿದ, ಒಂದು ಕುಣಿತ.
- ಸುಲಭ ಕೆಲಸ; ಸರಾಗ ಕಾರ್ಯ.
Cal.
ಸಂಕ್ಷಿಪ್ತ
California.
cal.
ಸಂಕ್ಷಿಪ್ತ
calorie(s).
Calabar bean
ನಾಮವಾಚಕ
ಆಹ್ರಿಕದ ಉಷ್ಣವಲಯದಲ್ಲಿ ಬೆಳೆಯುವ, ಹೆಸೂಸ್ಟಿಗ್ಮ ವೆನನೊಸಮ್ ಕುಲದ ಬಳ್ಳಿಯ, ಔಷಧೋಪಯೋಗಿಯಾದ, ಕಡುಕಂದುಬಣ್ಣದ, ವಿಷಪೂರಿತ ಬೀಜ.
calabash
ನಾಮವಾಚಕ
- ಕ್ಯಾಲಬ್ಯಾಷ್; ದ್ರವ ಮೊದಲಾದವನ್ನು ಹಾಕಿಡಲು ಪಾತ್ರೆಯಂತೆ ಬಳಸುವ, ಸೋರೆ ಮೊದಲಾದ ಕಾಯಿಯ ಬುರುಡೆ.
- ಬುರುಡೆಕಾಯಿ ಬಿಡುವ ಕ್ರೆಸೆಂಟಿಯ ಕುಲದ, ಉಷ್ಣವಲಯದ ಅಮೆರಿಕದ ಮರ.
- ಈ ಮರದ ಹಣ್ಣು, ಕಾಯಿ.
- ಈ ಬುರುಡೆಯಿಂದ ಮಾಡಿದ ಚುಂಗಾಣಿ.
- ಬುರುಡೆ (ಆಕಾರದ) ಚುಂಗಾಣಿ.
calaber
ನಾಮವಾಚಕ
(ಬೂದು ಅಳಿಲಿನ) ತುಪ್ಪುಳ; ಬೂದುತುಪ್ಪಳ.
calaboose
ನಾಮವಾಚಕ
(ಅಮೆರಿಕನ್ ಪ್ರಯೋಗ) ಜೈಲು; ಬಂದಿಖಾನೆ; ಸೆರೆಮನೆ; ಕಾರಾಗೃಹ.
calabrese
ನಾಮವಾಚಕ
ಒಂದು ಬಗೆಯ ಹೂಕೋಸು, ಕಾಲಿಹ್ಲವರು.
calamanco
ನಾಮವಾಚಕ
(ಚರಿತ್ರೆ). ಒಂದು ಕಡೆ ಚೌಕುಳಿ ಯಾ ಪಟ್ಟೆ ನಮೂನೆಗಳಿರುವ, ಮೆರುಗುಕೊಟ್ಟ, ನುಣುಪು ಉಣ್ಣೆಬಟ್ಟೆ.
calamander
ನಾಮವಾಚಕ
ಕರಿಮರ; ಬೀಟೆಮರ; ಪೀಠೋಪಕರಣಗಳಿಗೆ ಬಳಸುವ, ಡಯಾಪೈರಸ್ ಕುಲದ, ಕಪ್ಪು ಪಟ್ಟೆಗಳಿರುವ, ಕೆಂಗಂದು ಬಣ್ಣದ, ಭಾರತ ಸಿಂಹಳಗಳ ಒಂದು ಗಟ್ಟಿಮರ.
calamary
ನಾಮವಾಚಕ
ಬೆಣಸ; ಬಂಡಸೆ; ಉದ್ದವೂ ಚೂಪೂ ಆದ ಒಳಚಿಪ್ಪು ಇರುವ, ಮುಖ್ಯವಾಗಿ ಲಾಲಿಗೊ ಕುಲದ, ಸ್ಕ್ವಿಡ್ ಮೀನು.