भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

C/o.

ಸಂಕ್ಷಿಪ್ತ

care of.

c/s

ಸಂಕ್ಷಿಪ್ತ

cycles per second.

CA

ಸಂಕ್ಷಿಪ್ತ

  • California.
  • (ಸ್ಕಾಟ್ಲಂಡ್‍ ಮತ್ತು ಕೆನಡ) chartered accountant.

Ca

ಸಂಕೇತ

calcium.

ca.

ಸಂಕ್ಷಿಪ್ತ

circa.

Caaba

ನಾಮವಾಚಕ

Kaaba ಪದದ ರೂಪಾಂತರ.

cab

ನಾಮವಾಚಕ

  • (ಚರಿತ್ರೆ) ತೆರೆದ ಕುದುರೆಗಾಡಿ; ಜಟಕ; ಸಾರೋಟು; (ಬಾಡಿಗೆಯ) ತೆರೆದ ಸವಾರಿಗಾಡಿ; ಕ್ಯಾಬ್‍.
  • ಚಾಲಕನ–ಗೂಡು, ಅಂಕಣ, ವಿಭಾಗ; ರೈಲ್ವೆ ಎಂಜಿನ್ನು, ಕ್ರೇನು, ಲಾರಿ ಮೊದಲಾದವುಗಳಲ್ಲಿ ಚಾವಣಿ ಹೊದಿಸಿದ, ಚಾಲಕನ ವಿಭಾಗ.
  • ಟ್ಯಾಕ್ಸಿ; ಬಾಡಿಗೆ ಮೋಟಾರುಗಾಡಿ.

cab

ಅಕರ್ಮಕ ಕ್ರಿಯಾಪದ

ಕುದುರೆಗಾಡಿಯಲ್ಲಿಯೋ ಟ್ಯಾಕ್ಸಿಯಲ್ಲಿಯೋ–ಪ್ರಯಾಣಮಾಡು, ಪಯಣಿಸು.

cab

ನಾಮವಾಚಕ

(ಅಶಿಷ್ಟ) ಕಳ್ಳಟಿಪ್ಪಣಿ; ವಿದ್ಯಾರ್ಥಿಗಳು ಗುಟ್ಟಾಗಿ ಬಳಸುವ – ಭಾಷಾಂತರ, ಸಾರಾಂಶ ಮೊದಲಾದ ಬರೆಹ.

cab

ಅಕರ್ಮಕ ಕ್ರಿಯಾಪದ

(ಅಶಿಷ್ಟ) (ವಿದ್ಯಾರ್ಥಿಗಳ ವಿಷಯದಲ್ಲಿ) ಕಳ್ಳಟಿಪ್ಪಣಿ ಬಳಸಿಕೊ.

CAB

ಸಂಕ್ಷಿಪ್ತ

  • Citizens’ Advice Bureau.
  • (ಅಮೆರಿಕನ್‍ ಪ್ರಯೋಗ) Civil Aeronautics Board.

cab(b)ala

ನಾಮವಾಚಕ

  • ಯೆಹೂದ್ಯರ ಶಾಸ್ತ್ರ; ಕರ್ಣಪರಂಪರೆಯಾಗಿ ಬಂದ ಯೆಹೂದ್ಯರ – ತತ್ತ, ಅಭಿಪ್ರಾಯ, ಸಂಪ್ರದಾಯ ಇತ್ಯಾದಿ.
  • ಗೂಢಾರ್ಥ; ಗೂಢತತ್ತ್ವ.
  • ಗುಪ್ತವಿದ್ಯೆ; ರಹಸ್ಯವಿದ್ಯೆ.

cab(b)alism

ನಾಮವಾಚಕ

  • ಕಬಾಲದ ತತ್ತ್ವಗಳು ಯಾ ಸಿದ್ಧಾಂತಗಳು; ಯೆಹೂದ್ಯರ ಗುಪ್ತಸಂಪ್ರದಾಯಗಳು;
  • ರಹಸ್ಯ, ಗುಪ್ತ – ತತ್ತ್ವ.
  • ಅಂಥ ತತ್ತ್ವ ಅನುಸರಿಸಿ ಅರ್ಥವಿವರಣೆ ಮಾಡುವುದು.
  • (ಸಾಹಿತ್ಯ ವಿಮರ್ಶೆಯಲ್ಲಿ) ಅಪರಿಚಿತ ಪದಗಳ ಪ್ರಯೋಗದಿಂದ ಉಂಟಾಗುವ ಅಸ್ಪಷ್ಟತೆ.

cab(b)alist

ನಾಮವಾಚಕ

ಯೆಹೂದ್ಯ ಸಂಪ್ರದಾಯಿ.

cab(b)alistic

ಗುಣವಾಚಕ

  • ಯೆಹೂದ್ಯರ ಸಂಪ್ರದಾಯದ.
  • ರಹಸ್ಯದ; ನಿಗೂಢ ತತ್ತ್ವದ.

cab(b)alistically

ಕ್ರಿಯಾವಿಶೇಷಣ

  • ಯೆಹೂದ್ಯ ಸಂಪ್ರದಾಯದಂತೆ.
  • ರಹಸ್ಯವಾಗಿ.

cab-rank

ನಾಮವಾಚಕ

  • (ಬ್ರಿಟಿಷ್‍ ಪ್ರಯೋಗ) ಕ್ಯಾಬ್‍ ನಿಲ್ದಾಣದಲ್ಲಿ ಇರುವ ಟ್ಯಾಕ್ಸಿ ಮೊದಲಾದವುಗಳ ಸಾಲು.
  • ಕ್ಯಾಬ್‍ ನಿಲ್ದಾಣ; ಟ್ಯಾಕ್ಸಿ ನಿಲ್ದಾಣ; ಟ್ಯಾಕ್ಸಿಚೌಕ; ಟ್ಯಾಕ್ಸಿ ಮೊದಲಾದವುಗಳು ಗಿರಾಕಿಗಳಿಗಾಗಿ ಕಾಯಲು ನಿಗದಿಯಾದ ಜಾಗ.

cab-runner

ನಾಮವಾಚಕ

ಕ್ಯಾಬ್‍ಕೂಲಿ; ಬಂಡಿಹಮಾಲಿ; ಗಾಡಿಕೂಲಿ; ಟ್ಯಾಕ್ಸಿ, ಬಂಡಿ, ಮೊದಲಾದವುಗಳಿಂದ ಸಾಮಾನು ಇಳಿಸುವ ಯಾ ಅವುಗಳಲ್ಲಿ ಸಾಮಾನು ಇಡುವ ಕೂಲಿಯಾಳು.

cab-stand

ನಾಮವಾಚಕ

ಕ್ಯಾಬ್‍ಚೌಕ; ಕ್ಯಾಬ್‍, ಟ್ಯಾಕ್ಸಿ, ಗಾಡಿ – ನಿಲ್ದಾಣ; ಟ್ಯಾಕ್ಸಿ, ಗಾಡಿ ಮೊದಲಾದವುಗಳು ಗಿರಾಕಿಗಳಿಗಾಗಿ ಕಾಯುವ ಸ್ಥಳ.

cab-tout

ನಾಮವಾಚಕ

=cab-runner.

Search Dictionaries

Loading Results

Follow Us :   
  Download Bharatavani App
  Bharatavani Windows App